ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯ. ಒಂದು ದಿನದಲ್ಲಿ ಸುಮಾರು 50-100 ಕೂದಲು ಉದುರುತ್ತವೆ.ಅದನ್ನು ಸಮಸ್ಯೆ ಎನ್ನಲಾಗುವುದಿಲ್ಲ. ಅದಕ್ಕಿಂತ ಹೆಚ್ಚು ಕೂದಲು ಉದುರಿದರೆ ಸಮಸ್ಯೆ. ಇದು ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುತ್ತದೆ.
ಕೂದಲು ಉದುರುವಿಕೆಗೆ ಮುಖ್ಯ ಕಾರಣ ಜೆನೆಟಿಕ್ ಅಂಶಗಳು, ಹಾರ್ಮೋನಲ್ ಅಸಮತೋಲನ, ಇತ್ಯಾದಿ. ಇದಲ್ಲದೆ ಕೆಲವೊಂದು ಅರೋಗ್ಯ ಸಮಸ್ಯೆಗಳಿಂದ ಕೂದಲು ಹೆಚ್ಚು ಹೆಚ್ಚು ಉದುರಲು ಆರಂಭವಾಗುತ್ತದೆ. ಆ ಸಮಸ್ಯೆಗಳು ಯಾವುವು?
ಪ್ರೆಗ್ನೆನ್ಸಿ : ಗರ್ಭಿಣಿಯಾಗಿದ್ದಾಗ ಮಹಿಳೆಯರಲ್ಲಿ ಹೆಚ್ಚು ಒತ್ತಡ ಇರುತ್ತದೆ. ಇದರಿಂದಕೂದಲು ಅಧಿಕ ಪ್ರಮಾಣದಲ್ಲಿ ಉದುರುತ್ತದೆ. ಆದರೆ ಮಗು ಆದ ಬಳಿಕ ಕೂದಲು ಉದುರುವ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ.
ಹೈಪೋ ಥೈರೋಡಿಸಂ : ಈ ಸಮಸ್ಯೆ ಕಾಣಿಸಿಕೊಂಡಾಗ ಹಾರ್ಮೋನ್ ಲೆವೆಲ್ ತುಂಬಾ ಕಡಿಮೆ ಆಗುತ್ತದೆ. ಇದರಿಂದಾಗಿ ಕೂದಲು ತುಂಬಾತೆಳ್ಳಗಾಗುತ್ತದೆ. ಅಲ್ಲದೆ ಉದುರಲು ಆರಂಭವಾಗುತ್ತದೆ.
ಲೂಪಸ್ : ಇದೊಂದು ಆಟೋ ಇಮ್ಯೂನ್ ಸಮಸ್ಯೆಯಾಗಿದೆ. ಇದರಿಂದಾಗಿ ಇಮ್ಯೂನ್ ಸಿಸ್ಟಮ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೂದಲು ಉದುರುತ್ತದೆ.
ಒತ್ತಡ : ಅಕ್ಯೂಟ್ ಸ್ಟ್ರೆಸ್ ಡಿಸಾರ್ಡರ್ ಸಮಸ್ಯೆ ಇದ್ದರೆ ದೇಹದಲ್ಲಿರುವ ಪೌಷ್ಟಿಕಾಂಶ ಕುಗ್ಗುತ್ತದೆ. ಇದರಿಂದ ದೇಹವು ಕೂದಲು ಬೆಳೆಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.
ಹಾರ್ಮೋನ್ ಅಸಮತೋಲನ : ಈ ಅಸಮತೋಲನಕ್ಕೆ ಒಂದು ಸಾಮಾನ್ಯ ಕಾರಣವೆಂದರೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್). ಇದು ಮಹಿಳೆಯ ಅಂಡಾಶಯಗಳ ಸಿಸ್ಟ್‌ಗಳಿಗೆ ಕಾರಣವಾಗುತ್ತದೆ, ಜೊತೆಗೆ ಇತರ ಚಿಹ್ನೆಗಳು ಮತ್ತು ರೋಗ ಲಕ್ಷಣಗಳು, ಇದು ಕೂದಲು ಉದುರುವಿಕೆಯನ್ನು ಒಳಗೊಂಡಿರಬಹುದು. ಹಾರ್ಮೋನ್ ಅಸಮತೋಲನವನ್ನು ಅಭಿವೃದ್ಧಿಪಡಿಸುವ ಮಹಿಳೆಯರು ಕೂದಲಿನ ಸಮಸ್ಯೆ ಹೊಂದಿರುತ್ತಾರೆ.
ನೆತ್ತಿಯ ಸೋಂಕುನೆತ್ತಿಯ ಸೋಂಕು ನೆತ್ತಿಮೇಲೆ ತುರಿಕೆ ಮತ್ತು ಕೆಲವೊಮ್ಮೆ ಉರಿಯೂತದ ಪ್ರದೇಶಗಳಿಗೆ ಕಾರಣವಾಗಬಹುದು. ನೆತ್ತಿಮೇಲೆ ಸಣ್ಣ ಕಪ್ಪು ಚುಕ್ಕೆಗಳಂತೆ ಕಾಣುವುದನ್ನು ನೋಡಬಹುದು. ನೆತ್ತಿಯ ಸೋಂಕಿನಿಂದ ಕೂದಲು ಉದುರುತ್ತದೆ.