ವೈಟ್ ರೈಸ್ ತಿನ್ನೋದ್ರಿಂದ ಅಕಾಲಿಕ ಹಾರ್ಟ್ ಅಟ್ಯಾಕ್ ಆಗುತ್ತಾ?

First Published Oct 7, 2022, 5:36 PM IST

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸಂಸ್ಕರಿಸಿದ ಆಹಾರಗಳು ಹೆಚ್ಚು ಮಾರಾಟವಾಗುತ್ತಿವೆ. ಅದರಲ್ಲೂ ರಿಫೈಂಡ್ ಧ್ಯಾನಗಳನ್ನು ಖರೀದಿಸುವ ಜನರು ಹೆಚ್ಚಾಗಿದ್ದಾರೆ. ಆದರೆ ನಿಮಗೆ ಗೊತ್ತಾ? ಸಂಸ್ಕರಿಸಿದ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಸಂಸ್ಕರಿಸಿದ ಧಾನ್ಯಗಳು ಬಿಳಿ ಅಕ್ಕಿಯನ್ನು ಸಹ ಒಳಗೊಂಡಿವೆ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆದರೆ ಇದರ ಅತಿಯಾದ ಸೇವನೆಯು ಪ್ರೀಮೆಚ್ಯೂರ್ ಕೊರೊನರಿ ಅರ್ಟರಿ ಡಿಸೀಸ್ ( premature coronary artery disease PCAD) ಪಿಸಿಎಡಿಗೆ ಕಾರಣವಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
 

ಇತ್ತೀಚಿನ ದಿನಗಳಲ್ಲಿ, ಜನರು ಹೃದಯಾಘಾತದ(Heart attack) ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿಯು ಈ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಹೌದು, ಹೃದಯಾಘಾತದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಸಾವಿನ ಪ್ರಕರಣಗಳು ಪ್ರಪಂಚದಾದ್ಯಂತ ಹೆಚ್ಚುತ್ತಿವೆ ಎಂಬುದು ನಿಜ. ಇದಕ್ಕೆ ವೈದ್ಯರು ತಪ್ಪು ಆಹಾರ ಪದ್ಧತಿ ಮತ್ತು ತಪ್ಪು ಜೀವನಶೈಲಿಯೇ ಕಾರಣ ಅಂತಿದ್ದಾರೆ. ಇತ್ತೀಚಿನ ಅಧ್ಯಯನವು ಇದನ್ನು ದೃಢಪಡಿಸಿದೆ. 

ರಿಫೈನ್ಡ್ ಗ್ರೇನ್(Refined grain) ಅಥವಾ ರಿಫೈನ್ಡ್ ಧಾನ್ಯಗಳ ಅತಿಯಾದ ಸೇವನೆಯು ಪ್ರಿ ಮೆಚ್ಯುರ್ ಕೊರೋನರಿ ಆರ್ಟರಿ ಡಿಸೀಸ್ (ಪಿಸಿಎಡಿ) ಅಪಾಯ ಹೆಚ್ಚಿಸುತ್ತೆ ಎಂದು ಅಧ್ಯಯನವೊಂದು ಹೇಳಿದೆ. ರಿಫೈನ್ಡ್ ಗ್ರೇನ್ ಸೇವನೆಯಿಂದ, 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರು ಮತ್ತು 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ  ಕೊರೋನರಿ ಆರ್ಟರಿ ತೆಳುವಾಗುತ್ತಿದೆ ಎಂದು ಅಧ್ಯಯನ ಹೇಳಿದೆ. ಅಂದರೆ, ಹೃದಯಕ್ಕೆ ರಕ್ತವನ್ನು ಸಾಗಿಸುವ ಅಪಧಮನಿಗಳು ತೆಳುವಾಗಲು ಪ್ರಾರಂಭಿಸಿವೆ, ಪ್ರಿ ಮೆಚ್ಯುರ್ ಕೊರೋನರಿ ಆರ್ಟರಿ ಡಿಸೀಸ್ ಸಂಭವಿಸುತ್ತಿದೆ.

ಇಡೀ ಧಾನ್ಯಗಳನ್ನು ಸೇವಿಸೋದರಿಂದ ಹೃದ್ರೋಗದ (Heart disease)ಅಪಾಯ ಕಡಿಮೆ 
ವಿವಿಧ ರೀತಿಯ ಧಾನ್ಯಗಳ ಸೇವನೆಯಿಂದ ಕೊರೋನರಿ ಆರ್ಟರಿ ಡಿಸೀಸ್ ನ ಅಪಾಯದಲ್ಲಿವೆ ಎಂದು ಎಸಿಸಿ ತನ್ನ ಅಧ್ಯಯನದಲ್ಲಿ ಕಂಡುಕೊಂಡಿದೆ. ಅಧ್ಯಯನದಲ್ಲಿ, ರಿಫೈನ್ಡ್  ಮತ್ತು ಸಂಪೂರ್ಣ ಧಾನ್ಯಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಸ್ಟಡಿ ಮಾಡಲಾಯಿತು. 
 

ಆದರೆ, ಇಡೀ ಧಾನ್ಯಗಳನ್ನು ಸೇವಿಸೋದ್ರಿಂದ ಹೃದ್ರೋಗದ ಅಪಾಯವನ್ನು ಅನೇಕ ಪಟ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ, ಎಂದು ಸಂಶೋಧಕರು ತಿಳಿಸುತ್ತಾರೆ. ಪಿಸಿಎಡಿ ಒಂದು ರೋಗವಾಗಿದ್ದು, ಇದು ಆರಂಭದಲ್ಲಿ ಯಾವುದೇ ರೋಗಲಕ್ಷಣ ಕಾಣೋದಿಲ್ಲ ಆದರೆ ಕ್ರಮೇಣ ಎದೆ ನೋವು(Pain) ಪ್ರಾರಂಭವಾಗುತ್ತೆ. ಮತ್ತೆ ಏನೆಲ್ಲಾ ಸಮಸ್ಯೆ ಕಾಣಿಸಿಕೊಳ್ಳುತ್ತೆ ನೋಡೋಣ.

ಕೊಬ್ಬು ಶೇಖರಣೆಯಾಗಿ ಆರ್ಟರಿ ತೆಳುವಾಗಲು ಪ್ರಾರಂಭಿಸಿದಾಗ ಪಿಸಿಎಡಿ ಸಂಭವಿಸುತ್ತೆ. ಇದನ್ನು ಸ್ಟೆನೋಸಿಸ್ ಎಂದು ಕರೆಯಲಾಗುತ್ತೆ. ಇದರಲ್ಲಿ, ಆರ್ಟರಿಯ ವಾಲ್ ನಲ್ಲಿ ಸಿಕ್ಕಿಹಾಕಿಕೊಂಡ ಕೊಬ್ಬು ಸಿಡಿಯಲು ಪ್ರಾರಂಭಿಸುತ್ತೆ. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಧೂಮಪಾನ ಹೊಂದಿರುವ ಜನರು  ಪ್ರಿ ಮೆಚ್ಯುರ್  ಹಾರ್ಟ್ ಅಟ್ಯಾಕ್ ನ(Premature heart attack) ಹೆಚ್ಚಿನ ಅಪಾಯ ಹೊಂದಿರುತ್ತಾರೆ.

ರಿಫೈನ್ಡ್ ಗ್ರೇನ್ ಎಂದರೇನು?
ಅನೇಕ ಕಾರಣಗಳಿಂದಾಗಿ, ಜನರು ಸಂಪೂರ್ಣ ಧಾನ್ಯಗಳಿಗಿಂತ ರಿಫೈನ್ಡ್ ಗ್ರೇನ್ ಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆರ್ಥಿಕ ಸ್ಥಿತಿ, ಆದಾಯ, ಉದ್ಯೋಗ, ಶಿಕ್ಷಣ, ಸಂಸ್ಕೃತಿ, ವಯಸ್ಸು ಮತ್ತು ಇತರ ಅನೇಕ ಅಂಶಗಳು ಇದಕ್ಕೆ ಕಾರಣವಾಗಬಹುದು. ರಿಫೈನ್ಡ್ ಗ್ರೇನ್ ಗಳಲ್ಲದೆ, ಸಕ್ಕರೆ, ಆಯಿಲ್ (Oil) ಹೆಚ್ಚಿನ ಪ್ರಮಾಣದಲ್ಲಿ ಸೇವಿಸೋದು ಅಷ್ಟೇ ಅನಾರೋಗ್ಯಕರ. 

ಇಡೀ ಧಾನ್ಯಗಳನ್ನು ಮನೆಯಲ್ಲಿ ಅಥವಾ ಕೆಲವು ಮಷಿನ್ ಗಳನ್ನು ಬಳಸಿ ತಯಾರಿಸಲಾಗುತ್ತೆ, ಆದರೆ ಸಂಸ್ಕರಿಸಿದ ಧಾನ್ಯಗಳನ್ನು ದೊಡ್ಡ ಗಿರಣಿಗೆ ತೆಗೆದುಕೊಂಡು ಹೋಗಲಾಗುತ್ತೆ ಮತ್ತು ಈ ಧಾನ್ಯದ ಲೈಫ್ ಹೆಚ್ಚಿಸಲು ಕೆಮಿಕಲ್(Chemical) ಸೇರಿಸಲಾಗುತ್ತೆ, ಇದರಿಂದ ಅದು ನೋಡಲು ಚೆಂದ ಕಾಣುತ್ತೆ. ಈ ಪ್ರಕ್ರಿಯೆಯಲ್ಲಿ, ಧಾನ್ಯದಲ್ಲಿರುವ ಪೋಷಕಾಂಶಗಳು ಸಂಪೂರ್ಣವಾಗಿ ಕಡಿಮೆಯಾಗುತ್ತೆ. ಹಾಗಾಗಿ ರಿಫೈನ್ಡ್ ಗ್ರೇನ್  ಉಪಯೋಗಿಸುವಾಗ ಎಚ್ಚರವಿರಲಿ.  

click me!