Health Tips: ಸರಿಯಾಗಿ ಅಗಿಯದೇ ತಿಂದ್ರೆ ತೂಕ ಹೆಚ್ಚಾಗುತ್ತೆ ಜೋಪಾನ !

First Published | Aug 17, 2022, 6:34 PM IST

ನಮ್ಮದೇ ಆದ ಕೆಲವು ಅಭ್ಯಾಸಗಳಿಂದಾಗಿ, ಗುರಿಗಳನ್ನು ಸಾಧಿಸೋದು ಕಷ್ಟವಾಗುತ್ತದೆ. ಕೆಲವು ಅಭ್ಯಾಸಗಳು ನಮಗೆ ತಿಳಿಯದೆಯೇ ಬೆಳೆಯುತ್ತವೆ, ಆದರೆ ನಾವು ಈ ಅಭ್ಯಾಸದ ಬಗ್ಗೆ ಹೆಚ್ಚು ತಲೆ ಕೆಡಿಸೋದಿಲ್ಲ, ಆದರೆ ಯಾವಾಗ ನಾವು ಸ್ಥೂಲಕಾಯ ಅಥವಾ ಒಬೆಸಿಟಿ ಸಮಸ್ಯೆಗೆ ತುತ್ತಾಗುತ್ತೇವೆಯೋ, ಆವಾಗ ನಾವು ಮಾಡಿರೋ ತಪ್ಪುಗಳ ಬಗ್ಗೆ ನಾವು ತಿಳಿದುಕೊಳ್ಳುತ್ತೇವೆ. 

ಫಿಟ್ ಮತ್ತು ಆರೋಗ್ಯವಾಗಿರಲು ಜನರು ಏನೇನೋ ಮಾಡುತ್ತಲೇ ಇರುತ್ತಾರೆ. ಜಿಮ್ ನಲ್ಲಿ ಗಂಟೆಗಳ ಕಾಲ ಬೆವರು ಹರಿಸುವುದು, ಆರೋಗ್ಯಕರ ಆಹಾರಕ್ರಮ ಅನುಸರಿಸುವುದು, ವ್ಯಾಯಾಮ ಮಾಡೋದು ಅಥವಾ ಜಂಕ್ ಫುಡ್ ಅವಾಯ್ಡ್ ಮಾಡೋದು. ಹೀಗೆ ಏನೇನೋ ಮಾಡ್ತಾರೆ. ಆದರೆ ಇನ್ನೂ ಕೆಲವು ಅಭ್ಯಾಸಗಳಿಂದಾಗಿ, ಗುರಿಗಳನ್ನು ಸಾಧಿಸುವುದು ಕಷ್ಟವಾಗುತ್ತದೆ. ಈ ಅಭ್ಯಾಸಗಳು ತಿಳಿಯದೆಯೇ ಬೆಳೆಯುತ್ತವೆ. ಈ ಕಾರಣದಿಂದಾಗಿ, ಸ್ಥೂಲಕಾಯ ಸಮಸ್ಯೆ ಉಂಟಾಗುತ್ತೆ. ಹಾಗಾದ್ರೆ ನಮಗೆ ಸ್ಥೂಲಕಾಯ ಉಂಟು ಮಾಡುವ ಅಭ್ಯಾಸಗಳು ಯಾವುವು ಅನ್ನೋದನ್ನು ತಿಳಿಯೋಣ ಬನ್ನಿ. 

ಚೆನ್ನಾಗಿ ಅಗಿಯದೇ ಆಹಾರ ಸೇವಿಸೋದು
ಅನೇಕ ಜನರು ಉಪಾಹಾರ ಅಥವಾ ಆಹಾರವನ್ನು ಫಾಸ್ಟ್ ಆಗಿ ತಿನ್ನಲು ಇಷ್ಟಪಡುತ್ತಾರೆ, ಅದಕ್ಕಾಗಿ ಅವರು ಆಹಾರವನ್ನು ಅಗಿಯದೆ ನುಂಗುತ್ತಾರೆ. ಆಹಾರವನ್ನು ಅಗಿಯದೆ ನುಂಗುವುದರಿಂದ ಹೊಟ್ಟೆ ನೋವು, ಅಜೀರ್ಣ ಮತ್ತು ಸ್ಥೂಲಕಾಯದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. 

Tap to resize

ಇದಲ್ಲದೇ ಒಬ್ಬ ವ್ಯಕ್ತಿಯು ದಿನವಿಡೀ ಪುನರಾವರ್ತಿಸುವ ಅನೇಕ ಕೆಟ್ತ ಅಭ್ಯಾಸಗಳಿವೆ, ಇದರಿಂದಾಗಿ ಅವರ ಬೊಜ್ಜು ಕಡಿಮೆಯಾಗುವ ಬದಲು ಹೆಚ್ಚಾಗುತ್ತೆ. ತಿಳಿಯದೆ ದೇಹದ ಸ್ಥೂಲಕಾಯವನ್ನು (obesity) ಹೆಚ್ಚಿಸುತ್ತಿರುವ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ. ಮತ್ತು ಅವುಗಳನ್ನು ಸಾಧ್ಯವಾದಷ್ಟು ಕಂಟ್ರೋಲ್ ಮಾಡೋಣ. 

ಬೇಗನೆ ತಿನ್ನುವುದು ತೂಕವನ್ನು ಹೆಚ್ಚಿಸುತ್ತದೆ
ತ್ವರಿತವಾಗಿ ತಿನ್ನುವ ಜನರು ಇತರರಿಗಿಂತ ಹೆಚ್ಚು ತೂಕ ಹೊಂದಿರುತ್ತಾರೆ. ಬೇಗನೆ ತಿನ್ನೋದ್ರಿಂದ, ಆಹಾರವನ್ನು ಸರಿಯಾಗಿ ಅಗಿಯುವುದಿಲ್ಲ, ಇದು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಜೀರ್ಣಾಂಗ ವ್ಯವಸ್ಥೆಯ ಕೊರತೆಯಿಂದಾಗಿ ಬೊಜ್ಜು ಹೆಚ್ಚಾಗುತ್ತದೆ. ಬೆಳಗಿನ ಉಪಾಹಾರ ಅಥವಾ ಆಹಾರವನ್ನು ಎಂದಿಗೂ ಅವಸರದಲ್ಲಿ ತಿನ್ನಬಾರದು. ಇದು ಇತರ ಆರೋಗ್ಯ ಸಮಸ್ಯೆಗಳನ್ನು ಸಹ ಹೆಚ್ಚಿಸಬಹುದು.

ಬಹಳ ಹೊತ್ತು ಕುಳಿತುಕೊಳ್ಳೋದು
ಕಚೇರಿ ಕೆಲಸದಿಂದಾಗಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕುಳಿತುಕೊಂಡೇ ಇರುತ್ತಾರೆ. ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ (sitting for long time)  ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ, ಇದು ಸ್ಥೂಲಕಾಯವನ್ನು ಉಂಟು ಮಾಡುತ್ತೆ. ಈ ಅಭ್ಯಾಸವು ಅರಿವಿಲ್ಲದೆಯೇ ಜನರನ್ನು ಬೊಜ್ಜಿನ ಕಡೆಗೆ ತಳ್ಳುತ್ತಿದೆ.
 

ಆಲ್ಕೋಹಾಲ್ ಸೇವನೆ
ಆಲ್ಕೋಹಾಲ್ ಹೆಚ್ಚು ಸೇವಿಸುವ ಜನರು, ಸ್ಥೂಲಕಾಯದ ಸಮಸ್ಯೆ ಸಹ ಹೊಂದಿರುತ್ತಾರೆ. ಆಲ್ಕೋಹಾಲ್ ನಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ನಿಯಮಿತ ಆಲ್ಕೋಹಾಲ್ ಸೇವನೆಯು ವ್ಯಾಯಾಮದ ಹೊರತಾಗಿಯೂ ದೇಹದ ಕೊಬ್ಬನ್ನು ಕರಗಿಸುವುದಿಲ್ಲ. ಇದು ಸ್ಥೂಲಕಾಯತೆಯ ಜೊತೆಗೆ ಮಧುಮೇಹ, ಯಕೃತ್ತಿನ ಸೋಂಕು ಮತ್ತು ಹೃದಯದ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು.

ಸ್ಟ್ರೆಸ್ ಲೆವೆಲ್ (stress level)
ಒತ್ತಡವು ತೂಕ ಹೆಚ್ಚಳಕ್ಕೆ ಕೊಡುಗೆ ನೀಡುವ ಮತ್ತೊಂದು ಅಂಶವಾಗಿದೆ. ಒತ್ತಡ ಹೆಚ್ಚಿನ ಜನರನ್ನು ಕಾಡುವ ಸಮಸ್ಯೆಯಾಗಿದೆ, ಇದು ಸಾಮಾನ್ಯವಾಗಿ ನಮ್ಮ ಇಂದ್ರಿಯಗಳನ್ನು ಶಾಂತಗೊಳಿಸುತ್ತದೆ. ಒತ್ತಡದ ಜೊತೆ ನಾವು ಅತಿಯಾಗಿ ತಿನ್ನುತ್ತೇವೆ ಮತ್ತು ಅಧಿಕ ತೂಕವನ್ನು ಹೊಂದುತ್ತೇವೆ.  

ಒಂದೇ ಸಮಯದಲ್ಲಿ ಏನೇನೋ ಆಹಾರ ತಿನ್ನುವುದು
ಕೆಲವೊಂದು ಆಹಾರಗಳನ್ನು ನಾವು ಜೊತೆಯಾಗಿ ಸೇವಿಸಬಾರದು, ಆದರೆ ಕೆಲವರು ಎಲ್ಲಾ ಆಹಾರಗಳನ್ನು ಒಟ್ಟೊಟ್ಟಿಗೆ ಸೇವಿಸುತ್ತಾರೆ. ಇದರಿಂದ ಬೊಜ್ಜು ಮತ್ತು ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತೆ. ಆಹಾರಗಳ ಸರಿಯಾದ ಮಿಶ್ರಣ ಸೇವಿಸಬೇಕು. ಇಲ್ಲವಾದರೆ ಆರೋಗ್ಯ ಸಮಸ್ಯೆ ಕಾಡುತ್ತದೆ. 

ಊಟ ಮಾಡುವಾಗ ಟಿವಿ ನೋಡುವುದು
ತಿನ್ನುವಾಗ ಊಟ ಮಾಡೋದು ನಿಮ್ಮನ್ನು ದಪ್ಪಗಾಗಿಸುತ್ತದೆ. ಏಕೆಂದರೆ ನಿಮ್ಮ ಮನಸ್ಸು ತಿನ್ನುವುದರಿಂದ ವಿಚಲಿತಗೊಳ್ಳುತ್ತದೆ ಮತ್ತು ಅದು ಯಾವಾಗ ತಿನ್ನುವುದನ್ನು ನಿಲ್ಲಿಸಬೇಕು ಎಂದು ಅರಿತುಕೊಳ್ಳುವುದಿಲ್ಲ. ಟಿವಿ ನೋಡುವಾಗ ವ್ಯಕ್ತಿಗಳು ತಮ್ಮ ಸಾಮಾನ್ಯ ಸಾಮರ್ಥ್ಯಕ್ಕಿಂತ ಹೆಚ್ಚು ತಿನ್ನುತ್ತಾರೆ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. ಇದರಿಂದಾಗಿ ತೂಕ ವಿಪರೀತ ಹೆಚ್ಚಾಗುತ್ತೆ.

Latest Videos

click me!