ತೂಕ ಇಳಿಸಿಕೊಳ್ಳೋಕೆ ಈರುಳ್ಳಿಯನ್ನು ಹೀಗೆ ಸೇವಿಸಿ..!

First Published | Sep 9, 2020, 3:29 PM IST

ಹಳೆಯ ಬಟ್ಟೆಗಳು ಧರಿಸೋಕಾಗ್ತಿಲ್ಲ, ತೂಕ ಹೆಚ್ಚಾಗಿ ಉದಾಸೀನತೆ ಹೆಚ್ಚಿದೆ. ನೀವೂ ಲಾಕ್‌ಡೌನ್ ಟೈಂನಲ್ಲಿ ತೂಕ ಹೆಚ್ಚಿಸ್ಕೊಂಡಿದ್ರೆ ನಿಮಗಿಲ್ಲಿವೆ ಉಪಯುಕ್ತ ಸಲಹೆಗಳು

ಕೊರೋನಾದಿಂದಾಗಿ ಜನ ಮನೆಯೊಳಗೆ ಕುಳಿತು ಕಂಪ್ಯೂಟರ್ ದಿಟ್ಟಿಸುವುದೇ ಕೆಲಸ ಆಗಿ ಬಿಟ್ಟಿದೆ. ಎಲ್ಲಿಗೂ ಹೋಗುವಂತೆಯೂ ಇಲ್ಲ. ಹೀಗಾಗಿಯೇ ಲಾಕ್‌ಡೌನ್ ಸಮಯದಲ್ಲಿ ಬಹುಳಷ್ಟು ಜನ ತೂಕ ಹೆಚ್ಚಿಸಿಕೊಂಡಿದ್ದಾರೆ.
ಹಳೆಯ ಬಟ್ಟೆಗಳು ಧರಿಸೋಕಾಗ್ತಿಲ್ಲ, ತೂಕ ಹೆಚ್ಚಾಗಿ ಉದಾಸೀನತೆ ಹೆಚ್ಚಿದೆ. ನೀವೂ ಲಾಕ್‌ಡೌನ್ ಟೈಂನಲ್ಲಿ ತೂಕ ಹೆಚ್ಚಿಸ್ಕೊಂಡಿದ್ರೆ ನಿಮಗಿಲ್ಲಿವೆ ಉಪಯುಕ್ತ ಸಲಹೆಗಳು
Tap to resize

ಬೆಲ್ಲಿ ಫಾಟ್ ಕರಗಿಸಿಕೊಳ್ಳೋ ವಿಚಾರದಲ್ಲಿ ಆಹಾರ ಬಗ್ಗೆ ಹೆಚ್ಚು ಎಚ್ಚರಿಕೆ ಬೇಕು. ನಿಮ್ಮೆಲ್ಲರ ಮನೆಯಲ್ಲಿ ನೀವು ಬಳಸೋ ಈರುಳ್ಳಿಯಿಂದಲೇ ವೇಯಿಟ್ ಲಾಸ್ ಮಾಡ್ಕೋಬೋದು. ಹೇಗೆ..? ಇಲ್ಲಿ ನೋಡಿ
ಈರುಳ್ಳಿ ದಿನವೂ ಸೇವಿಸುವುದರಿಂದ ವೇಯಿಟ್ ಲಾಸ್ ಮಾಡಬಹುದು. ನಾವು ಈಗ ಸೇವಿಸುತ್ತಲೇ ಇದ್ದೇವೆ, ಆದರೆ ಸೇವಿಸುವ ರೀತಿ ಸರಿಯಿಲ್ಲ ಅಷ್ಟೇ.
ಸೊಲ್ಯುಬಲ್ ಫೈಬರ್ ಈರುಳ್ಳಿಯಲ್ಲಿ ಧಾರಾಳವಾಗಿದೆ. ಇದು ಪರಿಣಾಮಕಾರಿಯಾಗಿ ತೂಕ ಇಳಿಸಲು ನೆರವಾಗಬಲ್ಲದು. ಈರುಳ್ಳಿ ಒಂದು ಪ್ರೊಬಯಾಟಿಕ್ ಆಹಾರ. ತೂಕ ಇಳಿಸಿಕೊಳ್ಳೋಕೆ ಈರುಳ್ಳಿ ತಿನ್ನೋ ವಿಧಾನ ಹೀಗಿದೆ.
ಈರುಳ್ಳಿ ರಸ: ಈರುಳ್ಳಿ ರಸವನ್ನು ತಯಾರಿಸಲು ನಿಮಗೆ ಒಂದು ಮಧ್ಯಮ ಗಾತ್ರದ ಈರುಳ್ಳಿ, ಮೂರು ಕಪ್ ನೀರು ಮತ್ತು ಮಿಕ್ಸಿ ಅಗತ್ಯ.
ನೀರನ್ನು ಕುದಿಸಿ ಅದರಲ್ಲಿ ಈರುಳ್ಳಿ ಹಾಕಿ. ಅದನ್ನು ಸ್ವಲ್ಪ ತಣ್ಣಗಾಗಿಸಿ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿ. ಈಗ ಈರುಳ್ಳಿ ರಸ ಸಿದ್ಧ.
ನೀವು ದಿನದ ಯಾವುದೇ ಹೊತ್ತಲ್ಲೂ ಈ ರಸವನ್ನು ಕುಡಿಯಬಹುದು. ಅದರೆ ಖಾಲಿ ಹೊಟ್ಟೆಯಲ್ಲಿ ಮಾತ್ರ ಕುಡಿಯಬೇಡಿ.
ಈರುಳ್ಳಿ ಸೂಪ್: ಸೂಪ್ ತಯಾರಿಸಲು ನಿಮಗೆ ಆರು ದೊಡ್ಡ ಈರುಳ್ಳಿ, ತರಕಾರಿ, ಆಲಿವ್ ಎಣ್ಣೆ, ಶುಂಠಿ, ಬೆಳ್ಳುಳ್ಳಿ ಮತ್ತು ಸ್ವಲ್ಪ ನೀರು ಬೇಕಾಗುತ್ತದೆ.
6 ದೊಡ್ಡ ಈರುಳ್ಳಿ ತೆಗೆದುಕೊಂಡು ಕತ್ತರಿಸಿ. ಈಗ ಆಲಿವ್ ಎಣ್ಣೆಯನ್ನು ಸೂಪ್ ಪಾತ್ರೆಯಲ್ಲಿ ಬಿಸಿ ಮಾಡಿ ಅದಕ್ಕೆ ಸ್ವಲ್ಪ ತುರಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ.
ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಎರಡು ನಿಮಿಷ ಬೇಯಿಸಿ ಮತ್ತು ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಇತರ ಕೆಲವು ತರಕಾರಿಗಳು, ಕರಿಮೆಣಸು ಮತ್ತು ಉಪ್ಪು ಸೇರಿಸಿ. ಸೂಪ್ ಬೆರೆಸಿ 15 ನಿಮಿಷ ಬೇಯಿಸಿ. ನಿಮ್ಮ ಸೂಪ್ ಸಿದ್ಧ.

Latest Videos

click me!