ಕಾಟನ್ ಕ್ಯಾಂಡಿ ತಿನ್ನೋದ್ರಿಂದ ಶುಗರ್, ಹೃದಯ ಸಮಸ್ಯೆ ಹೆಚ್ಚುತ್ತೆ!

First Published | Feb 28, 2024, 4:17 PM IST

ಕಾಟನ್ ಕ್ಯಾಂಡಿ, ಬಾಂಬೆ ಮಿಠಾಯಿ, ಹತ್ತಿ ಮಿಠಾಯಿ ಹೀಗೆ ಬೇರೆ ಬೇರೆ ಹೆಸರಿನಿಂದ ಜನಪ್ರಿಯವಾಗಿರುವ ಮಕ್ಕಳ ನೆಚ್ಚಿನ ಕ್ಯಾಂಡಿಯಲ್ಲಿ  ಹೆಚ್ಚಿನ ಸಕ್ಕರೆಯಿಂದ ತುಂಬಿರುತ್ತದೆ. ಇದರಲ್ಲಿರುವ ಕೃತಕ ಬಣ್ಣಗಳು ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ.
 

ಕಾಟನ್ ಕ್ಯಾಂಡಿ (Cotton Candy), ಕ್ಯಾಂಡಿ ಫ್ಲಾಸ್ ಮತ್ತು ಫೇರಿ ಫ್ಲಾಸ್ ಎಂದೂ ಬೇರೆ ಬೇರೆ ಹೆಸರಿನಿಂದ ಜನಪ್ರಿಯತೆ ಪಡೆಯುವ ಮಕ್ಕಳ ನೆಚ್ಚಿನ ಕಾಟನ್ ಕ್ಯಾಂಡಿ, ಹತ್ತಿಯನ್ನು ಹೋಲುವ ಸಕ್ಕರೆ ಮಿಠಾಯಿಯಾಗಿದೆ. ಇದು ಸಾಮಾನ್ಯವಾಗಿ ಸಣ್ಣ ಪ್ರಮಾಣದ ಪರಿಮಳಗಳು ಜೊತೆಗೆ ಫುಡ್ ಕಲರ್ ನ್ನು ಸಹ ಒಳಗೊಂಡಿರುತ್ತದೆ. ಇದನ್ನು ಮಕ್ಕಳು ನಿರಂತರವಾಗಿ ಸೇವಿಸಿದ್ರೆ, ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಗೊತ್ತಾ? 

ಕ್ಯಾನ್ಸರ್ ಉಂಟು ಮಾಡುವ ತತ್ವಗಳು 
ಇತ್ತೀಚಿನ ದಿನಗಳಲ್ಲಿ ಕಾಟನ್ ಕ್ಯಾಂಡಿ ತುಂಬಾ ಹಾನಿಕಾರಕ. ಇದಕ್ಕೆ ಕಾರಣ ಕ್ಯಾನ್ಸರ್ (Cancer) ಉಂಟುಮಾಡುವ ಅಂಶ ಇದರಲ್ಲಿರುವುದು. ಈ ಸಿಹಿತಿಂಡಿಯನ್ನು ರೋಡಮೈನ್ ಬಿ ಬಣ್ಣವನ್ನು ಬಳಸಿ ತಯಾರಿಸಲಾಗುತ್ತದೆ. ವಿಶ್ವದ ಕೆಲವು ಭಾಗಗಳಲ್ಲಿ ಇದನ್ನು ಕ್ಯಾನ್ಸರ್ ಕಾರಕ ಎನ್ನುವ ವರ್ಗಕ್ಕೆ ಸೇರಿಸಲಾಗಿದೆ. 
 

Latest Videos


ಕೃತಕ ವಸ್ತುಗಳ ಬಳಕೆ
ಈ ಕ್ಯಾಂಡಿ ತಯಾರಿಕೆಯಲ್ಲಿ ಹೆಚ್ಚಾಗಿ ಹೆಚ್ಚಿನ ಪ್ರಮಾಣದ ಕೃತಕ ಪದಾರ್ಥಗಳನ್ನು (artificial things) ಹೊಂದಿರುತ್ತವೆ. ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸಿದಾಗ ಹಾನಿಯಾಗುವುದಲ್ಲದೇ, ತೀವ್ರ ಅಲರ್ಜಿ ಮತ್ತು ಅಸ್ತಮಾ ಮೊದಲಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ವಸ್ತುಗಳು ವಿವಿಧ ಕಲರ್ ಏಜೆಂಟ್ ಗಳು, ಪೌಷ್ಟಿಕವಲ್ಲದ ಅಂಶ, ಸೀಸ ಮೊದಲಾದ ವಿಷಕಾರಕ ವಸ್ತುಗಳಿಂದ ತಯಾರಾಗಿರುತ್ತೆ..

ಟೈಪ್ 2 ಡಯಾಬಿಟೀಸ್ 
ಕ್ಯಾಂಡಿ ಮತ್ತು ಇತರ ಸಿಹಿ ಉತ್ಪನ್ನಗಳ ಅತಿಯಾದ ಸೇವನೆಯು ರಕ್ತ ಪ್ರವಾಹದಲ್ಲಿ ಸಕ್ಕರೆಯ ಅಸಮತೋಲನಕ್ಕೆ (sugar imbalance) ಕಾರಣವಾಗಬಹುದು. ಇದು ಸಕ್ಕರೆಯನ್ನು ಸಂಸ್ಕರಿಸುವ ಯಕೃತ್ತಿನ ಸಾಮರ್ಥ್ಯವನ್ನು ಹಾನಿಗೊಳಿಸುತ್ತದೆ. ಕ್ಯಾಂಡಿ ತಿನ್ನುವುದರಿಂದ ಮಧುಮೇಹ, ಟೈಪ್ 2 ಡಯಾಬಿಟೀಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇದನ್ನು ಕಡಿಮೆ ಮಾಡೋದು ಉತ್ತಮ. 

ಬ್ಲಡ್ ಶುಗರ್ ಹೆಚ್ಚುತ್ತೆ
ಕಾಟನ್ ಕ್ಯಾಂಡಿ ಸೇರಿ ಇತರ ಅನೇಕ ಸಿಹಿತಿಂಡಿಗಳು ವೇಗವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತವೆ. ಕಾಟನ್ ಕ್ಯಾಂಡಿ ತಿನ್ನೋದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ (blood sugar level) ಬೇಗ ಹೆಚ್ಚುತ್ತದೆ. ಸ್ವಲ್ಪ ಹೊತ್ತಿನಲ್ಲಿ ತೀವ್ರ ಇಳಿತವೂ ಕಂಡು ಬರುತ್ತೆ. ಈ ಕೊರತೆಯು ಸಿಹಿ ಕಡುಬಯಕೆ, ತಲೆನೋವು ಮತ್ತು ಬಾಯಾರಿಕೆಯನ್ನು ಹೆಚ್ಚಿಸುತ್ತದೆ.

ಹೃದ್ರೋಗದ ಅಪಾಯ
ಸಕ್ಕರೆ ಸಮೃದ್ಧವಾಗಿರುವ ಆಹಾರಗಳು ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ. ಬೊಜ್ಜು ಮತ್ತು ಹೆಚ್ಚಿನ ಪ್ರಮಾಣದ ಸಕ್ಕರೆಯ ಸೇವನೆಯು ಹೃದ್ರೋಗದ ಅಪಾಯವನ್ನು (heart problem) ಹೆಚ್ಚಿಸುತ್ತದೆ. ಇದು ಪರಿಧಮನಿ ಕಾಯಿಲೆ ಮತ್ತು ಪಾರ್ಶ್ವವಾಯುವನ್ನು ಸಹ ಒಳಗೊಂಡಿದೆ.

ಬೊಜ್ಜು ಹೆಚ್ಚುತ್ತೆ
ಕ್ಯಾಂಡಿ ಹೆಚ್ಚಿನ ಕ್ಯಾಲೊರಿ ಮತ್ತು ಶಕ್ತಿಯನ್ನು ಹೊಂದಿದೆ. ಹೆಚ್ಚಿನ ಪ್ರಮಾಣದ ಕ್ಯಾಂಡಿ ಸೇವನೆಯಿಂದಾಗಿ, ಬೊಜ್ಜು (obesity) ಹೆಚ್ಚಾಗುತ್ತದೆ ಅಥವಾ ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳನ್ನು ನಮ್ಮ ದೇಹದಲ್ಲಿ ಹೆಚ್ಚಿಸುತೆ. ಇದು ಬೇಗನೆ ಕರಗೋದಿಲ್ಲ, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಹಲ್ಲಿಗೂ ಅಪಾಯ
ಸ್ಟ್ರೆಪ್ಟೋಕಾಕಸ್ ಮ್ಯೂಟಾನ್ಸ್ ಒಂದು ತಳಿಯ ಬ್ಯಾಕ್ಟೀರಿಯಾ ಆಗಿದ್ದು, ಇದು ನಮ್ಮ ಹಲ್ಲುಗಳಲ್ಲಿ ಕುಳಿಗಳನ್ನು (cavity) ಸೃಷ್ಟಿಸಲು ಕಾರಣವಾಗುತ್ತದೆ ಸಿಹಿತಿಂಡಿಗಳ ಸಂಪರ್ಕಕ್ಕೆ ಬಂದ ನಂತರ ಆ ಬ್ಯಾಕ್ಟೀರಿಯಾಗಳು ನಮ್ಮ ಹಲ್ಲುಗಳಿಗೆ ಅಂಟಿಕೊಳ್ಳುತ್ತವೆ. ಅವು ಅವುಗಳನ್ನು ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತಿಸುತ್ತವೆ, ಇದು ನಿಧಾನವಾಗಿ ನಮ್ಮ ಹಲ್ಲುಗಳನ್ನು ನಾಶಪಡಿಸುತ್ತದೆ.
 

click me!