ಕಬ್ಬು ಸಿಕ್ರೆ ಬೇಡ ಅನ್ಬೇಡಿ... ದಂತ ಆರೋಗ್ಯಕ್ಕೂ, ತೂಕ ಇಳಿಕೆಗೂ ಬೆಸ್ಟಿದು

First Published Feb 15, 2021, 5:41 PM IST

ಕಬ್ಬು ಒಂದು ಬಗೆಯ ಹುಲ್ಲು, ಬಿದಿರಿನಂತೆ ಬೆಳೆಯುತ್ತದೆ. ಈ ರುಚಿಯಾದ ಕಬ್ಬಿನ ಬಗ್ಗೆ  ಹೆಚ್ಚಿನ ವಿವರ ಕೊಡಬೇಕಾಗಿಲ್ಲ. ಪ್ರತಿಯೊಬ್ಬರಿಗೂ ಕಬ್ಬಿನ ಬಗ್ಗೆ ತಿಳಿದಿದೆ  ಕಬ್ಬಿನ ಕಾಂಡವನ್ನು ಸಕ್ಕರೆಯ ನೈಸರ್ಗಿಕ ಮೂಲವೆಂದು ಕರೆಯಲಾಗುತ್ತದೆ.
 

ವಿಶ್ವ ಕಬ್ಬು ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ. ಬಹುತೇಕ ಕಬ್ಬು ಉತ್ತರ ಪ್ರದೇಶದಿಂದ ಬರುತ್ತದೆ, ಇದು ರಾಷ್ಟ್ರೀಯ ಒಟ್ಟು ಉತ್ಪಾದನೆಯಲ್ಲಿ ಶೇ.50ಕ್ಕಿಂತ ಹೆಚ್ಚು ಈ ಬೆಳೆಯನ್ನು ಉತ್ಪಾದಿಸುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳುಈ ಪಟ್ಟಿಯಲ್ಲಿವೆ.
undefined
ಆರೋಗ್ಯಕ್ಕೆ ಉತ್ತಮವಾಗಿರುವ ಕಬ್ಬನ್ನು ಪ್ರತಿದಿನದ ಆಹಾರದಲ್ಲೂ ಅಳವಡಿಸಿಕೊಳ್ಳಬಹುದು.
undefined
ಹಸಿ: ನೈಸರ್ಗಿಕವಾಗಿ ಸಿಹಿಯಾದ ರುಚಿಯನ್ನು ಹೊಂದಿರುವ ಹಸಿ ಕಬ್ಬಿನ ಕಾಂಡವನ್ನು ಹಲವೆಡೆ ಒಂದು ತಿಂಡಿಯಾಗಿತಿನ್ನಲಾಗುತ್ತದೆ. ಆದರೆ ಇದನ್ನು ಸೇವಿಸುವ ಮುನ್ನ, ಕಾಂಡದ ಸುತ್ತಲಿನ ಕಠಿಣ ಚರ್ಮವನ್ನು ತೆಗೆದುಹಾಕಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
undefined
ಜ್ಯೂಸ್: ಕಬ್ಬಿನ ಕಾಂಡದ ಸಾರವನ್ನು ನಿಂಬೆ ರಸ ಮತ್ತು ಶುಂಠಿಯೊಂದಿಗೆ ಬೆರೆಸಿ ರುಚಿಕರವಾದ ಪೇಯವನ್ನು ತಯಾರಿಸಿ ಕುಡಿದರೆ ಹಲವಾರು ಪ್ರಯೋಜನಗಳು ಇವೆ.
undefined
ಕಬ್ಬಿನ ಪೊಂಗಲ್: ದಕ್ಷಿಣ ಭಾರತದಲ್ಲಿ ಕಬ್ಬಿನ ರಸವನ್ನು ಬಳಸಿ ಪೊಂಗಲ್ ಅಂದ್ರೆ ಸಿಹಿಯಾದ ಅನ್ನವನ್ನು ಮಾಡಲಾಗುತ್ತದೆ. .
undefined
ಸಮ್ಮರ್ ಡ್ರಿಂಕ್ : ಕಬ್ಬಿನ ಜ್ಯೂಸ್ ಅನ್ನು ಇತರ ತಾಜಾ ಫ್ಲೇವರ್ಗಳಾದ ಕಿವಿಫ್ರೂಟ್ ಮತ್ತು ಪುದಿನಾ ಜೊತೆ ಸೇರಿಸಿ ಕುಡಿಯುವುದರಿಂದ ದೇಹವನ್ನು ತಂಪಾಗಿರಿಸುವ ಸುಲಭವಾದ ಬೇಸಿಗೆ ಪಾನೀಯವಾಗಿದೆ.
undefined
ಮಾಂಸಾಹಾರಿ ಆಹಾರ: ನಿಮಗೆ ಇಷ್ಟವಾದ ಪ್ರೋಟೀನ್‌ನಿಂದ ಪೇಸ್ಟ್ ತಯಾರಿಸಿ, ನಂತರ, ಕಬ್ಬಿನ ಕೋಲಿನ ಮೇಲೆ ಮಾಂಸಾಹಾರಿ ಪದಾರ್ಥ, ಅಂದರೆ ಚಿಕನ್ ಅಥವಾ ಮಟನ್ ಲಾಲಿಪಾಪ್ ಆಕಾರದಲ್ಲಿ ರೋಲ್ ಮಾಡಿ. ನಂತರ ಡೀಪ್ ಫ್ರೈ ಮಾಡಿ, ಸಾಸ್‌ನೊಂದಿಗೆ ಸರ್ವ್ ಮಾಡಿ.
undefined
ಕಬ್ಬಿನ ಸೇವನೆಯ ಪ್ರಯೋಜನಗಳುಚಳಿಗಾಲದಲ್ಲಿ ಹೈಡ್ರೇಷನ್: ಚಳಿಗಾಲದಲ್ಲಿ ಜನರು ನೀರನ್ನು ಕುಡಿಯುವುದನ್ನು ಮರೆತೇ ಬಿಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆ ಸಂದರ್ಭದಲ್ಲಿ, ಎಲೆಕ್ಟ್ರೋಲೈಟ್‌ಗಳಿಂದ ತುಂಬಿದ ಕಬ್ಬಿನ ರಸಆರೋಗ್ಯಕ್ಕೆ ಉತ್ತಮ.
undefined
ನ್ಯಾಚುರಲ್ ಮೂತ್ರವರ್ಧಕ: ಕಬ್ಬಿನ ರಸ ನೈಸರ್ಗಿಕ ಮೂತ್ರವರ್ಧಕ ಎಂದು ಅಧ್ಯಯನಗಳು ತೋರಿಸುತ್ತವೆ. ಇದು ಪ್ರಯೋಜನಕಾರಿಯಾಗಿದೆ ಏಕೆಂದರೆ ಈ ಪದಾರ್ಥಗಳು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ತೆಗೆದುಹಾಕಿ ಮೂತ್ರನಾಳದಲ್ಲಿ ಸೋಂಕು ಉಂಟಾಗದಂತೆ ನೋಡಿಕೊಳ್ಳುತ್ತದೆ.
undefined
ಯಕೃತ್ತಿನ ಅರೋಗ್ಯ : ಆಯುರ್ವೇದದ ಪ್ರಕಾರ ಕಬ್ಬಿನ ರಸ ಕುಡಿಯುವುದರಿಂದ ಯಕೃತ್ ಗಟ್ಟಿಗೊಳ್ಳುತ್ತದೆ. ಪರಿಣಾಮವಾಗಿ ಇದನ್ನು ಕಾಮಾಲೆಯ ಪರಿಹಾರವಾಗಿ ಸೂಚಿಸಲಾಗುತ್ತದೆ.
undefined
ದಂತದ ಆರೋಗ್ಯವನ್ನು ಹೆಚ್ಚಿಸುತ್ತದೆ: ಕಬ್ಬಿನ ಕಾಂಡದಲ್ಲಿ ಇರುವಂತಹ ರಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಂಜಕ ಮತ್ತು ಕ್ಯಾಲ್ಸಿಯಂ ಇದ್ದು ಹಲ್ಲುಗಳು ಕೊಳೆಯದಂತೆ ಕಾಪಾಡುತ್ತದೆ.
undefined
ಚರ್ಮಕ್ಕೆ ಒಳ್ಳೆಯದು: ಕಬ್ಬಿನಲ್ಲಿ ಆಲ್ಫಾ ಹೈಡ್ರಾಕ್ಸಿ ಆಮ್ಲಗಳು [AHAs] ಇವೆ, ಇದನ್ನು ಆಗಾಗ್ಗೆ ಚರ್ಮದ ಆರೈಕೆ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ. ಎಎಚ್‌ಎಗಳು ಮೊಡವೆಗಳ ವಿರುದ್ಧ ಹೋರಾಡಬಲ್ಲವು, ವಯಸ್ಸಾಗುವುದನ್ನು ತಡೆಯಬಹುದು ಮತ್ತು ಅಸ್ತಿತ್ವದಲ್ಲಿರುವ ಮೊಡವೆಗಳನ್ನು ನಿವಾರಿಸಬಹುದು.
undefined
ತೂಕ ಇಳಿಸಲು ನೆರವಾಗುತ್ತದೆ: ಕಬ್ಬಿಣ ರಸದಲ್ಲಿ ನಾರಿನಂಶ ಅಧಿಕವಾಗಿದ್ದು, ಇದು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಇದಲ್ಲದೆ, ಕಬ್ಬಿನ ರಸದಲ್ಲಿರುವ ನೈಸರ್ಗಿಕ ಸಿಹಿತಿಂಡಿಗಳು ಸಹ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಅನ್ನು ಹೊಂದಿರುತ್ತವೆ.
undefined
click me!