ಊಟದ ನಂತ್ರ ಬಿಸಿ ಬಿಸಿ ಟೀ, ಕಾಫಿ: ನಾಲಗೆಗೆ ರುಚಿ, ಆರೋಗ್ಯಕ್ಕೆ..?

First Published | Feb 14, 2021, 2:12 PM IST

ಒಂದು ಕಪ್ ಟೀ ಅಥವಾ ಕಾಫಿಯ ದಿನದ ಎಲ್ಲಾ ಆಯಾಸವನ್ನು ದೂರವಿರಿಸುತ್ತದೆ. ಬಹಳಷ್ಟು ಜನರಿಗೆ ಚಹಾ ಕುಡಿಯುವ ಅಭ್ಯಾಸವಿದೆ. ಆದರೆ ಅವರು ಚಹಾ ಸೇವನೆಯ ನೆಪವನ್ನು ಹುಡುಕುತ್ತಲೇ ಇರುತ್ತಾರೆ. ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಟೀ, ಬೆಳಗಿನ ತಿಂಡಿಯೊಂದಿಗೆ ಚಹಾ, ಸಂಜೆ ಟೀ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮಾಡಿದ ನಂತರ, ಬಹಳಷ್ಟು ಜನರಿಗೆ ಟೀ ಅಥವಾ ಕಾಫಿ (ಊಟದ ನಂತರ ಟೀ) ಕುಡಿಯುವ ಅಭ್ಯಾಸವಿದೆ. ಆದರೆ ಊಟ ವಾದ ನಂತರ ಟೀ ಕುಡಿಯುವ ಅಭ್ಯಾಸ ನಿಮ್ಮಲ್ಲಿದ್ದರೆ, ಎಚ್ಚರವಹಿಸಿ.
 

ಊಟವಾದ ನಂತರ ಟೀ ಕುಡಿಯುವುದು ಹಾನಿಕಾರಕ:ಊಟ ಮಾಡಿದ ತಕ್ಷಣ ಟೀ ಕುಡಿಯುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಹಾನಿಕರ ಎಂದು ಸಾಬೀತಾಗಿದೆ. ಸಂಶೋಧನೆಯ ಪ್ರಕಾರ ಚಹಾ ಅಥವಾ ಕಾಫಿಯಲ್ಲಿ ಕಂಡುಬರುವ ಕೆಫೀನ್ ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ, ಆದ್ದರಿಂದ ಊಟ ಮಾಡಿದ ತಕ್ಷಣ ಟೀ ಮತ್ತು ಕಾಫಿ ಕುಡಿಯಬೇಡಿ.
undefined
ಊಟದ ನಂತರ ಕೆಫೀನ್ ಇರುವ ಯಾವುದೇ ಪಾನೀಯವನ್ನು ಕುಡಿಯುವುದು ಅಪಾಯಕಾರಿ ಎಂದು ಸೂಚಿಸುವ ಹಲವಾರು ಕಾರಣಗಳಿವೆ. ಅವುಗಳ ಬಗ್ಗೆ ಮಾಹಿತಿ ತಿಳಿದುಕೊಂಡರೆ ಉತ್ತಮ ಅರೋಗ್ಯ ಕಾಪಾಡಲು ಸಹಾಯವಾಗುತ್ತದೆ.
undefined

Latest Videos


1.ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ: ಟೀ ಎಲೆಯಲ್ಲಿ ಆಮ್ಲೀಯ ಗುಣಗಳಿವೆ, ಇದು ದೇಹದಲ್ಲಿರುವ ಪ್ರೋಟೀನ್ ಅಂಶವನ್ನು ಗಟ್ಟಿಗೊಳಿಸುತ್ತದೆ. ಇದರಿಂದ ಪ್ರೋಟೀನು ಜೀರ್ಣಿಸಲು ಕಷ್ಟವಾಗುತ್ತದೆ. ಆದ್ದರಿಂದ ಊಟದ ನಂತರ ಟೀ ಕುಡಿಯಬೇಡಿ.
undefined
2. ಪೌಷ್ಟಿಕಾಂಶವನ್ನು ಹೀರಿಕೊಳ್ಳುವಿಕೆಯು ಆಹಾರಸೇವನೆಯ ನಂತರ ಜೀರ್ಣಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ, ಇದು ಆಹಾರದಲ್ಲಿನ ಪೋಷಕಾಂಶಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಸರಿಯಾಗಿ ಹೀರಿಕೊಳ್ಳುವುದಿಲ್ಲ.
undefined
3.ರಕ್ತದೊತ್ತಡ ಹೆಚ್ಚಳ: ಟೀಯಲ್ಲಿ ಕೆಫೀನ್ ಅಂಶ ಅಧಿಕವಾಗಿದ್ದು, ಅಧಿಕ ಆಹಾರ ಸೇವಿಸಿದ ನಂತರ ಸೇವಿಸಿದರೆ, ಇದು ದೇಹದ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಹೃದಯತಜ್ಞರು ಊಟಮಾಡಿದ ನಂತರ ಚಹಾ ಕುಡಿಯಬಾರದು ಎಂದು ಹೇಳುತ್ತಾರೆ.
undefined
ಗ್ರೀನ್ ಟೀ ಅಥವಾ ಹರ್ಬಲ್ ಟೀ ಬಳಸಿ:ಊಟದ ನಂತರ ತಕ್ಷಣ ಹಾಲಿನ ಟೀ ಸೇವಿಸಬಾರದು, ಆದರೆ ಗ್ರೀನ್ ಟೀ ಅಥವಾ ಹರ್ಬಲ್ ಟೀ ಯನ್ನು ಸ್ವಲ್ಪ ಸಮಯದ ನಂತರ ಸೇವಿಸಬಹುದು ಏಕೆಂದರೆ ಅಂತಹ ಚಹಾದಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ಪಾಲಿಫಿನಾಲ್ ಗಳು ಇವೆ.
undefined
ಗ್ರೀನ್ಅಥವಾ ಹರ್ಬಲ್ ಟೀ ಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗದಂತೆ ತಡೆಯುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ ಕಾಪಾಡುತ್ತದೆ.
undefined
1 ಗಂಟೆಯ ಊಟದ ನಂತರ ಟೀ ಕುಡಿಯಿರಿ.ಊಟದ ನಂತರ ಟೀ ಮತ್ತು ಕಾಫಿ ಕುಡಿಯಬೇಕೆಂದಿದ್ದರೆ 1 ಗಂಟೆಯ ನಂತರ ಕುಡಿಯಿರಿ. ಏಕೆಂದರೆ ಆಹಾರ ಸೇವಿಸಿದ 1 ಗಂಟೆಯ ಒಳಗೆ ಆಹಾರದಲ್ಲಿರುವ ಕಬ್ಬಿಣವನ್ನು ದೇಹವು ಅಪಾರಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ.
undefined
ಒಂದು ವೇಳೆ ಟೀ ಯನ್ನು ಆಹಾರದೊಂದಿಗೆ ಅಥವಾ ಊಟದ ನಂತರ ಸೇವಿಸಿದ ತಕ್ಷಣ, ಕಬ್ಬಿಣಾಂಶವು ಹೀರಿಕೊಳ್ಳಲ್ಪಡುವುದಿಲ್ಲ ಮತ್ತು ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುತ್ತದೆ.
undefined
click me!