ಚಳಿಗಾಲದಲ್ಲಿ ಕಂಡುಬರುವ ಒಂದು ಪ್ರಮುಖ ಹಣ್ಣು ಸಪೋಟಾ ಅಥವಾ ಚಿಕ್ಕೂ. ಸಪೋಟಾ ಅತ್ಯಂತ ಪೋಷಕಾಂಶಯುಕ್ತ ಹಣ್ಣಾಗಿದ್ದು, ಇದು ಅನೇಕ ಪ್ರಯೋಜನಗಳು ಹಾಗೂ ಪಾರ್ಶ್ವ ಪರಿಣಾಮಗಳನ್ನೂ ಹೊಂದಿವೆ. ಇದರಲ್ಲಿ ಅನೇಕ ವಿಟಾಮಿನ್ ಮತ್ತು ಖನಿಜಾಂಶಗಳು ಇವೆ. ಸಪೋಟಾ ಹಣ್ಣಿನ ಪ್ರಯೋಜನಗಳು ಯಾವುವು ತಿಳಿಯೋಣ....
undefined
ಕಣ್ಣುಗಳಿಗೆ ಪ್ರಯೋಜನಕಾರಿಸಪೋಟಾ ಕಣ್ಣುಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವಿಟಮಿನ್ ಎ ಕಣ್ಣಿನ ದೃಷ್ಟಿ ಹೆಚ್ಚಿಸುವ ಮೂಲಕ ಸಂಬಂಧಿತ ಕಾಯಿಲೆಗಳಿಂದ ರಕ್ಷಿಸುತ್ತದೆ. ಆದ್ದರಿಂದ ಮಕ್ಕಳಿಂದ ವೃದ್ಧರವರೆಗೆ ಸಪೋಟಾವನ್ನು ತಿನ್ನಿಸುವುದು ಒಳ್ಳೆಯದು.
undefined
ಕ್ಯಾನ್ಸರ್ ವಿರುದ್ಧ ರಕ್ಷಿಸಲು ಸಹಾಯ:ಸಪೋಟಾ ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ಸಪೋಟಾ ವಿಟಮಿನ್ಎ ಮತ್ತು ಬಿ, ಕಬ್ಬಿಣ, ಕ್ಯಾಲ್ಸಿಯಂ, ಫೈಬರ್, ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದರ ನಿಯಮಿತ ಸೇವನೆಯು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಪ್ರವರ್ಧಮಾನಕ್ಕೆ ಬರುವುದನ್ನು ತಡೆಯುತ್ತದೆ.
undefined
ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು:ಸಪೋಟಾ ಒಂದು ಟೆಸ್ಟಿ ಮತ್ತು ಸಮೃದ್ಧವಾದ ಹಣ್ಣು. ಆರೋಗ್ಯ ತಜ್ಞರ ಪ್ರಕಾರ ಪ್ರತಿದಿನ ಸಪೋಟಾವನ್ನು ತಿನ್ನುವ ಮೂಲಕ ಆರೋಗ್ಯದೊಂದಿಗೆ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಇದರಲ್ಲಿ ಉತ್ಕರ್ಷಣ ನಿರೋಧಕ, ವೈರಸ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ, ಇದು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
undefined
ಒತ್ತಡ ಕಡಿಮೆ ಮಾಡಲು ಸಹಕಾರಿ :ಈ ಜೀವನದಲ್ಲಿ ಹೆಚ್ಚಿನವರು ಒತ್ತಡಕ್ಕೆ ಒಳಗಾಗುತ್ತಾರೆ. ಸಪೋಟಾ ಬಳಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಇದು ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.
undefined
ಉತ್ತಮ ನಿದ್ರೆ :ನಿದ್ರೆಯ ಸಮಸ್ಯೆ ಕಾಡುತ್ತಿರುವವರು ಸಪೋಟಾ ಹಣ್ಣನ್ನು ಖಂಡಿತಾ ಬಳಕೆ ಮಾಡಬಹುದು. ಇದನ್ನು ಸೇವಿಸಿ ಉತ್ತಮ ನಿದ್ರೆಯನ್ನೂ ಮಾಡಬಹುದು.
undefined
ನೆಗಡಿಶೀತದ ತೊಂದರೆ ಇದ್ದರೆ ಸಪೋಟಾ ಬಳಸಿ. ಚಳಿಗಾಲದಲ್ಲಿ ಸಪೋಟಾ ಶೀತ ಕೆಮ್ಮು ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಸೇವಿಸುವುದರಿಂದ ಮೂಗಿನ ಮೂಲಕ ಕಫ ಮತ್ತು ಲೋಳೆಯನ್ನು ತೆಗೆದುಹಾಕುತ್ತದೆ. ಇದು ಉಸಿರಾಟವನ್ನು ನಿರಾಳವಾಗಿಸುತ್ತದೆ.
undefined
ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವುದು:ಸಪೋಟಾವನ್ನು ಸೇವಿಸಿ ತೂಕ ಇಳಿಸಿಕೊಳ್ಳಬಹುದು. ಇದೇ ಸಮಯದಲ್ಲಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿ ನಾರಿನಂಶ ಹೇರಳವಾಗಿದ್ದು, ಈ ಗುಣಗಳು ಮಲಬದ್ಧತೆಯನ್ನು ನಿವಾರಿಸುತ್ತದೆ.
undefined
ಜೀರ್ಣಕ್ರಿಯೆ ಉತ್ತಮ :ಸಪೋಟಾ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶ ಮತ್ತು ಉತ್ತಮ ಪ್ರಮಾಣದ ನಾರಿನಂಶ ಹೊಂದಿದ್ದು, ಇದು ಜೀರ್ಣವ್ಯವಸ್ಥೆಯನ್ನು ಸುಧಾರಿಸಿ, ಆರೋಗ್ಯವಾಗಿರಿಸುತ್ತದೆ.
undefined
ಗರ್ಭಿಣಿ ಮಹಿಳೆಯರಿಗೆ ಉತ್ತಮ :ಸಪೋಟಾ ಹಣ್ಣುಗಳಲ್ಲಿ ಕಬ್ಬಿಣ , ಸತ್ವ , ಕ್ಯಾಲ್ಸಿಯಂ ಇತ್ಯಾದಿಗಳು ಇರುವುದರಿಂದ ಬಾಣಂತಿಯರಿಗೆ ಹೆಚ್ಚು ಪೂರಕ ಎನ್ನಬಹುದು. ಇದನ್ನು ಸೇವಿಸಿದರೆ ಗರ್ಭಿಣಿ ಮಹಿಳೆಯರ ಆರೋಗ್ಯ ಉತ್ತಮವಾಗಿರುತ್ತದೆ.
undefined
ಎಚ್ಚರಿಕೆ :ಈ ಹಣ್ಣಿನ ಪ್ರಯೋಜನಗಳು ಹಲವಿದೆ. ಆದರೆ ಮಧುಮೇಹ ರೋಗಿಗೆ, ಸಪೋಟಾ ಹಣ್ಣು ಸೇವಿಸದಂತೆ ತಿಳಿಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯಿದ್ದು, ಅಧಿಕ ಕ್ಯಾಲೊರಿಯೂ ಇರುತ್ತದೆ. ಆದ್ದರಿಂದ ಇದು ಮಧುಮೇಹ ರೋಗಿಗಳಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
undefined