ಮನೆಯಲ್ಲಿ ನೀವೇ ಕಲಿತು ಮಾಡಬಹುದಾದ ಸರಳ ಯೋಗಾಸನಗಳು

First Published Jun 21, 2022, 11:15 AM IST

ಸೂರ್ಯ ನಮಸ್ಕಾರ (Surya Namaskara)ವನ್ನು ಯೋಗಾಸನ (Yoga Asana0ಗಳಲ್ಲೇ ಅತ್ಯಂತ ಶಕ್ತಿಶಾಲಿ ಎಂದು ಕರೆಯಲಾಗುತ್ತದೆ. ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ಇದು ಆರೋಗ್ಯವಂತರನ್ನಾಗಿಸುತ್ತದೆ. ಆಸನಗಳ ಗುಚ್ಚವಾಗರುವ ಸೂರ್ಯ ನಮಸ್ಕಾರವನ್ನು ಸರಿಯಾಗಿ ಮಾಡುವ ವಿಧಾನ ಇಲ್ಲಿದೆ.

1.ಪ್ರಣಾಮ ಆಸನ: ಎರಡೂ ಹಸ್ತಗಳನ್ನು ಜೋಡಿಸಿ ನಿಂತುಕೊಳ್ಳಿ. ಬಳಿಕ ಎರಡೂ ಕೈಗಳನ್ನು ಭುಜದ ಸಮಾನಾಂತರದಲ್ಲಿ ಎತ್ತಿ ದೇಹದ ಭಾರವನ್ನು ಕಾಲಿನ ಮೇಲೆ ಹಾಕಿ. ಬಳಿಕ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡುವ ವಿಧಾನದಲ್ಲಿ ನಿಂತುಕೊಳ್ಳಿ.

2.ಹಸ್ತ ಉತ್ಥಾನಾಸನ: ಉಸಿರನ್ನು ಒಳಗೆದುಕೊಳ್ಳಿ, ಬಳಿಕ ಕೈಗಳನ್ನು ತಲೆಯಿಂದ ಮೇಲಕ್ಕೆ ಎತ್ತಿ. ಎದೆಯ ಭಾಗವನ್ನು ಹಿಂದಕ್ಕೆ ಬಗ್ಗಿಸಿ. ತಲೆ ಹಾಗೂ ಬೆನ್ನನ್ನು ಸಾಧ್ಯವಾದಷ್ಟುಹಿಂಭಾಗಕ್ಕೆ ಬಾಗಿಸಿ. ಮಂಡಿಗಳನ್ನು ಬಿಗಿಯಾಗಿ ಇರಿಸಿಕೊಳ್ಳಿ. ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ.

3.ಹಸ್ತ ಪಾದಾಸನ: ಬೆನ್ನುಮೂಳೆಯನ್ನು ನೇರವಾಗಿಟ್ಟುಕೊಂಡು ಉಸಿರನ್ನು ಹೊರಗೆ ಬಿಡುತ್ತಾ ಸೊಂಟದಿಂದ ಮುಂದಕ್ಕೆ ಬಾಗಿ. ಉಸಿರನ್ನು ಸಂಪೂರ್ಣವಾಗಿ ಹೊರಗೆ ಬಿಟ್ಟು ಕೈಗಳನ್ನು ಪಾದದ ಬಳಿ ನೆಲದ ಮೇಲಿಡಿ.

4.ಅಶ್ವ ಸಂಚಾಲಾಸನ: ಉಸಿರನ್ನು ಒಳಗೆಳೆಯುತ್ತಾ ಬಲಗಾಲನ್ನು ಸಾಧ್ಯವಾದಷ್ಟುಹಿಂದೆ ತಳ್ಳಿ. ಬಳಿಕ ಬಲ ಮಂಡಿಯನ್ನು ನೆಲಕ್ಕೆ ತಾಗಿಸಿ ಆಕಾಶದೆಡೆ ಮುಖ ಮಾಡಿ. ಈ ವೇಳೆ ಎಡಪಾದ ಅಂಗೈಗಳ ನಡುವೆ ಇರುವಂತೆ ನೋಡಿಕೊಳ್ಳಿ.

5.ದಂಡಾಸನ:ಉಸಿರನ್ನು ನಿಧಾನವಾಗಿ ಒಳಗೆ ತೆಗೆದುಕೊಳ್ಳುತ್ತಾ ಎಡ ಪಾದವನ್ನು ಹಿಂದಕ್ಕೆ ತೆಗೆದುಕೊಂಡು ಶರೀರವನ್ನು ಸಂಪೂರ್ಣವಾಗಿ ನೇರವಾದ ರೇಖೆಯಲ್ಲಿರಿಸಿ ಹಾಗೂ ತೋಳುಗಳನ್ನು ನೆಲಕ್ಕೆ ಲಂಬವಾಗಿರಿಸಿ.

6.ಅಷ್ಟಾಂಗ ನಮಸ್ಕಾರ:ನಿಧಾನವಾಗಿ ಮಂಡಿಗಳನ್ನು ನೆಲಕ್ಕೆ ತಂದು ಉಸಿರು ಬಿಡಿ. ಬಳಿಕ ಪೃಷ್ಠವನ್ನು ಹಿಂದೆ ತೆಗೆದುಕೊಂಡು, ಮುಂದಕ್ಕೆ ಬಗ್ಗಿ ಎದೆ ಹಾಗೂ ಗಲ್ಲವನ್ನು ನೆಲಕ್ಕೆ ತಾಗುವಂತಿಡಿ. ದೇಹದ ಹಿಂದಿನ ಭಾಗವನ್ನು ಸ್ವಲ್ಪ ಮೇಲಕ್ಕೆತ್ತಿ. ಶರೀರದ ಎಂಟೂ ಭಾಗಗಳು ನೆಲಕ್ಕೆ ತಾಗಬೇಕು.

7.ಭುಜಂಗಾಸನ:ಈಗ ನಿಧಾನವಾಗಿ ಉಸಿರು ಹೊರಬಿಟ್ಟು ಎದೆಯನ್ನು ಮುಂದಕ್ಕೆ ಬಾಗಿಸಿ ಕೈಗಳನ್ನು ನೆಲದ ಮೇಲೆ ನೇರವಾಗಿಡಿ. ಕತ್ತನ್ನು ಹಿಂಬದಿಗೆ ಬಾಗಿಸಿ ಮೇಲಕ್ಕೆ ನೋಡಿ.

8.ಅಧೋಮುಖ ಶ್ವಾನಾಸನ: ನಂತರನಿಧಾನವಾಗಿ ಉಸಿರನ್ನು ಹೊರಬಿಟ್ಟು ಎರಡೂ ಕಾಲುಗಳನ್ನು ನಿಧಾನವಾಗಿ ಹಿಂದಕ್ಕೆ ತೆಗೆದುಕೊಳ್ಳಿ. ಎರಡೂ ಕೈಗಳನ್ನು ಮುಂದಿನ ಬದಿಯಲ್ಲಿ ನೆಲಕ್ಕೆ ತಾಗಿಸಿ, ಕತ್ತನ್ನು ಬಾಗಿಸಿ. ಈ ಆಸನದಲ್ಲಿ ನೀವು ಇಂಗ್ಲಿಷ್‌ನ ವಿಆಕಾರದಲ್ಲಿರಬೇಕು.

9. ತಾಡಾಸನ: ಈ ಆಸನವನ್ನು ಮಾಡುವ ಸಂದರ್ಭದಲ್ಲಿ ನಿಧಾನವಾಗಿ ಉಸಿರು ಹೊರಬಿಡುತ್ತಾ ನಿಮ್ಮ ಶರೀರವನ್ನು ನೇರವಾಗಿಸಿ ನಿಂತುಕೊಳ್ಳಿ. ಹಾಗೂ ಎರಡೂ ಕೈಗಳನ್ನು ನೇರವಾಗಿರಿಸುವ ಮೂಲಕ ವಿಶ್ರಾಂತಿ ಪಡೆಯಿರಿ.

click me!