ಸಾಮಾನ್ಯವಾಗಿ, ತಡರಾತ್ರಿ ಕೆಲಸ ಮಾಡುವ ಜನರು ದೊಡ್ಡ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ಅದೇನೆಂದರೆ, ರಾತ್ರಿಯಲ್ಲಿ ಉಂಟಾದ ನಿದ್ರೆಯ ಕೊರತೆಯನ್ನು ಹಗಲಿನಲ್ಲಿ ಮಲಗುವ ಮೂಲಕ ಸಮತೋಲನಗೊಳಿಸಬಹುದು ಎಂದು. ಮನಸ್ಸು ಮತ್ತು ದೇಹಕ್ಕೆ ಹಗಲಿನಲ್ಲಿ ಉಂಟಾಗುವ ಒತ್ತಡ ಮತ್ತು ಹಾನಿಯನ್ನು ರಾತ್ರಿ ನಿದ್ರೆ ಗುಣಪಡಿಸುತ್ತದೆ. ಹಗಲಿನಲ್ಲಿ ರಾತ್ರಿಯ ನಿದ್ರೆಯನ್ನು ಪೂರ್ಣಗೊಳಿಸಿದ ನಂತರ ದೇಹವನ್ನು ಸರಿಯಾಗಿ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಹಗಲಿನ ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸುತ್ತದೆ. ಇದರಿಂದ ಖಂಡಿತಾ ಆರಾಮ ಸಿಗೋದಿಲ್ಲ ಬದಲು, ಆತಂಕ, ಕಿರಿಕಿರಿ, ಕೋಪ, ಒತ್ತಡದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೀರ್ಘಕಾಲ ಮಲಗುವುದು ಇಡೀ ದಿನಚರಿಯನ್ನು ತೊಂದರೆಗೊಳಿಸುತ್ತದೆ. ರಾತ್ರಿ ತಡವಾಗಿ ಮಲಗುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ (health issues) ಕಾರಣವಾಗಬಹುದು. ಅವುಗಳ ಬಗ್ಗೆ ತಿಳಿಯೋಣ.