ಬೇಸಿಗೆಯಲ್ಲಿ ರಾತ್ರಿ ಸ್ನಾನ ಮಾಡಿದ್ರೆ ಎಷ್ಟೆಲ್ಲ ಲಾಭವಿದೆ ಗೊತ್ತಾ?

First Published | Mar 19, 2022, 5:40 PM IST

ಬಿಸಿಲಿನ ತಾಪ ಹೆಚ್ಚಾದಂತೆ ಜನರು ತಮ್ಮ ಜೀವನಶೈಲಿಯನ್ನು (lifestyle) ಬದಲಾಯಿಸಿಕೊಳ್ಳಬೇಕು. ಸೇವಿಸುವ ಆಹಾರದಿಂದ ಹಿಡಿದು ಉಡುಗೆ, ರೂಢಿಸಿಕೊಂಡಿರುವ ಹಲವು ಅಭ್ಯಾಸಗಳು ಬದಲಾಗಬೇಕು. 

bath

ಬೇಸಿಗೆಯಲ್ಲಿ ನೀರಿನ ಅಂಶ ಹೆಚ್ಚಿರುವ ಸೌತೆಕಾಯಿ, ಕಲ್ಲಂಗಡಿ (water melon), ಮುಂತಾದ ವಸ್ತುಗಳನ್ನು ಸೇವಿಸುತ್ತಾರೆ. ಇದರಿಂದ ದೇಹವು ತೇವಾಂಶದಿಂದ ಇರುವುದು. ಬೇಸಿಗೆ ಬಂದ ತಕ್ಷಣ ದಿನಕ್ಕೆರಡು ಬಾರಿ ಸ್ನಾನ ಮಾಡಲು ಕೂಡ ಕೆಲವರು ಬಯಸುತ್ತಾರೆ. ಯಾಕೆಂದರೆ ಸೆಖೆಯಿಂದ ಬೆವರಿದ್ದ ದೇಹವನ್ನು ತಣಿಸಲು ಎರಡು ಬಾರಿ ಸ್ನಾನ ಮಾಡಲಾಗುತ್ತದೆ. 

bath

 ರಾತ್ರಿ ಸ್ನಾನ (night bath) ಮಾಡುವುದು ಕೂಡ ಅಗತ್ಯ. ಏಕೆಂದರೆ ದಿನವಿಡೀ ದೇಹದ ಮೇಲೆ ಧೂಳು ಸಂಗ್ರಹವಾಗುತ್ತದೆ ಮತ್ತು ಬಿಸಿಲಿನ ಕಾರಣ ತಾಪಮಾನವೂ ಹೆಚ್ಚುತ್ತದೆ. ಆದ್ದರಿಂದ ತಾಪಮಾನವನ್ನು ಕಡಿಮೆ ಮಾಡಲು ಸ್ನಾನ ಮಾಡುವುದು, ಧೂಳನ್ನು ಸ್ವಚ್ಛಗೊಳಿಸುವುದು ಮತ್ತು ಉಲ್ಲಾಸವನ್ನು ಅನುಭವಿಸುವುದು ಅಗತ್ಯವಾಗಿದೆ. 

Tap to resize

bath

ಸಂಜೆ ಅಥವಾ ರಾತ್ರಿ ಸ್ನಾನ ಮಾಡುವುದರಿಂದ ಆರೋಗ್ಯ ಹದಗೆಡುತ್ತದೆ ಎಂದು ಕೆಲವರು ಭಾವಿಸುತ್ತಾರೆ, ಇದರಿಂದಾಗಿ ರಾತ್ರಿ ಸ್ನಾನ ಮಾಡಲು ಹೆದರುತ್ತಾರೆ. ಆದರೆ ಇದು ಹಾಗಲ್ಲ, ಆದರೆ ಬೇಸಿಗೆಯಲ್ಲಿ, ರಾತ್ರಿ ಅಥವಾ ಸಂಜೆ ಸ್ನಾನ ಮಾಡುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳು ಉಂಟಾಗುತ್ತವೆ. ಇದು ಅನೇಕ ರೋಗಗಳನ್ನು ಸಹ ತೆಗೆದು ಹಾಕಬಹುದು. ಹೇಗೆ ಎಂದು ತಿಳಿದಿದೆಯೇ?
 

bath

 ರಾತ್ರಿ ಸ್ನಾನ ಮಾಡುವುದರಿಂದ ದೇಹದ ಮೇಲಿನ ಎಲ್ಲ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾಗಳು (bacteria) ಇಲ್ಲವಾಗಿ ಹೋಗುತ್ತವೆ. ಅಷ್ಟೇ ಅಲ್ಲ, ಇದು ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಚರ್ಮದ ತೊಂದರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಮಲಗುವ ಮುನ್ನ ಸ್ನಾನ ಮಾಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಮತ್ತು ತಾಜಾ ಅನಿಸುತ್ತದೆ. 

bath

ಒತ್ತಡದಲ್ಲಿ ನೆಮ್ಮದಿ 
ಕಚೇರಿಗೆ ಹೋಗುವ ಹೆಚ್ಚಿನವರು ಸಂಜೆಯೇ ಮನೆಗೆ ಮರಳುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಇಡೀ ದಿನದ ಆಯಾಸ ಮತ್ತು ಒತ್ತಡವನ್ನು ನಿವಾರಿಸಲು (reduce stress) ರಾತ್ರಿ ಬಂದು ಸ್ನಾನ ಮಾಡಿ.  ಇದರಿಂದ ನಿಮ್ಮ ಆಯಾಸ ನಿವಾರಣೆಯ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ. 

bath

ರಾತ್ರಿ ಸ್ನಾನ ಮಾಡುವುದರಿಂದ ಮೆದುಳು ಕೂಡ ಸರಿಯಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ನೀರಿನಲ್ಲಿ ಎಣ್ಣೆ ಹಾಕಿ ಸ್ನಾನ (oil bath)ಮಾಡಿದರೆ ಇನ್ನಷ್ಟು ತಾಜಾ ಅನುಭವವಾಗುತ್ತದೆ. ಇದರಿಂದ ಮನಸ್ಸು ಕೂಡ ಶಾಂತವಾಗಿರುತ್ತದೆ. ದೇಹದ ದಣಿವು ದೂರಾಗಿ ನೆಮ್ಮದಿಯ ನಿದ್ರೆ ಬರಲು ಸಾಧ್ಯವಾಗುತ್ತದೆ. 

bath

 ರಾತ್ರಿ ಸ್ನಾನ ಮಾಡುವುದರಿಂದ ತೂಕ ಇಳಿಕೆ ಮಾತ್ರವಲ್ಲ, ಮೈಗ್ರೇನ್, ದೇಹನೋವು, ಕೀಲು ನೋವು ನಿವಾರಣೆಯಾಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಸಂಜೆ ಅಥವಾ ರಾತ್ರಿ ಸ್ನಾನ ಮಾಡಬೇಕು. ದೇಹವು ನಿರಾಳವಾಗುತ್ತದೆ. 

bath

ಹೈ ಬಿಪಿ ನಿಯಂತ್ರಿಸಲು 
 ಶಾಖವು ಬಹಳಷ್ಟು ಹೆಚ್ಚಾಗಲು ಪ್ರಾರಂಭಿಸಿದೆ, ಅಂತಹ ಸ್ಥಿತಿಯಲ್ಲಿ, ದೇಹದ ತಾಪಮಾನವೂ ಹೆಚ್ಚಾಗಿದೆ. ಅಧಿಕ ರಕ್ತದೊತ್ತಡ (high blood pressure)ಇರುವ  ಜನರು ನಿದ್ರೆಗೆ ಹೋಗುವ ಮೊದಲು ಸ್ನಾನ ಮಾಡುವ ಮೂಲಕ ನಿಯಂತ್ರಿಸಬಹುದು. ಇದರಿಂದ ರಾತ್ರಿ ಸಮಯದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಇರುತ್ತದೆ. 

bath

 ಮನಸ್ಥಿತಿಯನ್ನು ತಾಜಾಗೊಳಿಸುತ್ತದೆ 
 ರಾತ್ರಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡೂ ತಾಜಾತನಕ್ಕೆ ಬರುತ್ತದೆ.  ಇಷ್ಟು ಮಾತ್ರವಲ್ಲದೆ ರಾತ್ರಿ ಸ್ನಾನ ಮಾಡುವುದರಿಂದ ದೇಹದ ಉದ್ವೇಗವೂ ನಿವಾರಣೆಯಾಗುತ್ತದೆ. ಆದ್ದರಿಂದ ಬೆಳಿಗ್ಗೆ ಸ್ನಾನ ಮಾಡಿ, ಆದರೆ ರಾತ್ರಿ ಸ್ನಾನ ಮಾಡಲು ಮರೆಯಬೇಡಿ.

Latest Videos

click me!