ತೂಕ ಇಳಿಸೋದಲ್ಲ, ಹೆಚ್ಚಿಸ್ಬೇಕು ಅನ್ನೋರು ಇದನ್ನು ಮಿಸ್ ಮಾಡದೆ ಓದಿ

First Published Jan 27, 2021, 10:19 AM IST

ಆಧುನಿಕ ಯುಗದಲ್ಲಿ ಕೆಲವರು ಸ್ಥೂಲಕಾಯದಿಂದ ಬಳಲುತ್ತಿದ್ದು, ಕೆಲವರು ಹೆಚ್ಚು ಸಣ್ಣಗಿನ ದೇಹದಿಂದ ಬೇಸರ ಪಟ್ಟುಕೊಳ್ಳುತ್ತಾರೆ. ಈ ಎರಡೂ ಸಮಸ್ಯೆಯು ಕಳಪೆ ಆಹಾರ ಮತ್ತು ಅಸಮರ್ಪಕ ಆಹಾರ ಕ್ರಮದಿಂದ ಉಂಟಾಗುತ್ತದೆ. ಇದರ ಜೊತೆಗೆ, ಇದು ಒಂದು ವಂಶವಾಹಿ ಕಾಯಿಲೆಯಾಗಿದ್ದು, ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುತ್ತಾ ಹೋಗುತ್ತದೆ. ಒಮ್ಮೆ ತೂಕ ಹೆಚ್ಚಾದರೆ, ಬೆಳೆಯುತ್ತಿರುವ ತೂಕವನ್ನು ನಿಯಂತ್ರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗೆಯೇ ತೂಕ ಹೆಚ್ಚು ಮಾಡುವುದು ಸಹ ಸುಲಭದ ಕೆಲಸ ಅಲ್ಲ. 

ತೂಕ ಹೆಚ್ಚಾಗ ಬೇಕು ಎಂದಾದರೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ತಜ್ಞರ ಪ್ರಕಾರ ತೆಳ್ಳಗಾಗುವುದಕ್ಕೆ ಹಲವಾರು ಕಾರಣಗಳಿವೆ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ಕೆಲವರು ಹೆಚ್ಚು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ. ಕೇವಲ ನಾಲ್ಕು ಬಾರಿ ಮಾತ್ರ ಆಹಾರ ಸೇವನೆ ಮಾಡುವುದರಿಂದ ತೂಕ ಹೆಚ್ಚಾಗುವುದಿಲ್ಲ, ಆದರೆ ಆಹಾರದಲ್ಲಿ ಕ್ಯಾಲೋರಿಗಳು ತುಂಬಾ ಮುಖ್ಯ. ಇದಕ್ಕಾಗಿ ಪ್ರತಿದಿನವೂ ಅತ್ಯಧಿಕ ಕ್ಯಾಲೊರಿ ಇರುವ ಪದಾರ್ಥಗಳನ್ನು ತಿನ್ನಬೇಕು.
undefined
ದೇಹ ತುಂಬಾನೆ ತೆಳ್ಳಗೆ ಇದ್ದು, ದಪ್ಪಗಾಗಲು ಪ್ರಯತ್ನಿಸುತ್ತಿರುವಿರಾದರೆ ಮತ್ತು ತೂಕವನ್ನು ಹೆಚ್ಚಿಸಬೇಕೆಂದು ಬಯಸಿದರೆ, ಈ ಅಂಶಗಳನ್ನು ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಕೆಲವೇ ಕೆಲವು ದಿನಗಳಲ್ಲಿ ತೂಕ ಹೆಚ್ಚುವುದು ಖಂಡಿತಾ.
undefined
ಒಂದು ಸಂಶೋಧನೆಯ ಪ್ರಕಾರ ಒಬ್ಬ ವ್ಯಕ್ತಿ ತನ್ನ ಆಹಾರದಲ್ಲಿ ಪ್ರತಿದಿನ 500 ಕ್ಯಾಲೊರಿಗಳನ್ನು ತೆಗೆದುಕೊಂಡರೆ, ಒಂದು ವಾರದಲ್ಲಿ ಆತನ ತೂಕ ಅರ್ಧ ಕಿಲೋ ನಷ್ಟು ಹೆಚ್ಚಾಗಬಹುದು. ಈ ರೀತಿಯಲ್ಲಿ ಒಂದು ತಿಂಗಳಲ್ಲಿ 2 ಕೆಜಿ ತೂಕ ಹೆಚ್ಚಿಸಬಹುದು. ಕೇವಲ ಆಹಾರ ಕ್ರಮದಲ್ಲಿ ಅಧಿಕ ಕ್ಯಾಲೋರಿ ಇರುವ ಪದಾರ್ಥಗಳನ್ನು ಮಾತ್ರ ಸೇವಿಸುವತ್ತ ಗಮನ ಹರಿಸಿ.
undefined
ಜೋಳ ತಿನ್ನಿ:ಯಟ್ ಚಾರ್ಟ್ ಪ್ರಕಾರ ಪ್ರತಿ ಗ್ರಾಂ ಮೆಕ್ಕೆ ಜೋಳಕ್ಕೆ ಒಂದು ಕ್ಯಾಲೋರಿ ಇದೆ. 100 ಗ್ರಾಂ ಜೋಳವನ್ನು ಸೇವಿಸಿದರೆ, 100 ಕ್ಯಾಲೋರಿಗಳು ಸಿಗಬಹುದು. ಇದರಿಂದ ತೂಕ ದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
undefined
ಆಲೂಗಡ್ಡೆ ಸೇವಿಸಿ:ಜಿಮ್ ಟ್ರೈನರ್‌ಗಳು ಯಾವಾಗಲೂ ಬೇಯಿಸಿದ ಆಲೂಗಡ್ಡೆಯನ್ನು ವ್ಯಾಯಾಮ ಮಾಡುವವರು ತಿನ್ನಬೇಕೆಂದು ಶಿಫಾರಸು ಮಾಡುತ್ತಾರೆ. ಏಕೆಂದರೆ ಸರಾಸರಿ 1 ಆಲೂಗಡ್ಡೆಯಲ್ಲಿ 110 ಕ್ಯಾಲೋರಿಗಳಿರುತ್ತವೆ. ಒಂದು ಆಲೂಗಡ್ಡೆಯ ತೂಕ ಸುಮಾರು 150 ಗ್ರಾಂ.ತೂಕ ಹೆಚ್ಚಿಸಿಕೊಳ್ಳಬೇಕೆಂದಿದ್ದರೆ, ಪ್ರತಿದಿನ ಆಲೂಗಡ್ಡೆಯನ್ನು ಬಳಸಬೇಕು.
undefined
ಸಿಹಿ ಗೆಣಸು:ತೂಕವನ್ನು ಹೆಚ್ಚಿಸಬೇಕೆಂದಿದ್ದರೆ, ಆಹಾರಕ್ರಮದಲ್ಲಿ ಸಿಹಿ ಗೆಣಸನ್ನು ಸೇರಿಸಿಕೊಳ್ಳಬೇಕು. 130 ಗ್ರಾಂ ಸಿಹಿ ಗೆಣಸು 100 ಕ್ಯಾಲೋರಿಗಳನ್ನು ಹೊಂದಿದೆ. ಪ್ರತಿದಿನ 250 ಗ್ರಾಂ ಸಿಹಿ ಗೆಣಸನ್ನು ಸೇವಿಸಿದಲ್ಲಿ, ನೀವು 200 ಕ್ಯಾಲೋರಿಗಳನ್ನು ಪಡೆಯಬಹುದು.
undefined
ಬಾಳೆಹಣ್ಣು:ವೈದ್ಯರು ಯಾವಾಗಲೂ ಬಾಳೆಹಣ್ಣು ಮತ್ತು ಹಾಲನ್ನು ಸೇವಿಸುವುದರಿಂದ ತೂಕ ಬೇಗನೇ ಏರುತ್ತದೆ ಎನ್ನುತ್ತಾರೆ. ತಜ್ಞರ ಪ್ರಕಾರ ಒಂದು ಬಾಳೆಹಣ್ಣು ಸುಮಾರು 105 ಕ್ಯಾಲರಿಗಳನ್ನು ಹೊಂದಿರುತ್ತದೆ. ಪ್ರತಿದಿನ ಅರ್ಧ ಡಜನ್ ಬಾಳೆಹಣ್ಣುಗಳನ್ನು ತಿನ್ನುತ್ತೀರಿ ಎಂದಾದಲ್ಲಿ, ದಿನಕ್ಕೆ 600 ಕ್ಯಾಲರಿಗಳು ದೊರೆಯುತ್ತದೆ.
undefined
ಬಾಳೆಹಣ್ಣನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿದರೆ, ಬೇಗನೆ ತೂಕ ಹೆಚ್ಚಿಸಿಕೊಳ್ಳಬಹುದು. ಇದನ್ನು ಬೆಳಗ್ಗೆ ಎದ್ದ ಕೂಡಲೇ ಬೇಯಿಸಿ ತುಪ್ಪದ ಜೊತೆ ಸೇವಿಸಿದರೂ ಸಹ ತೂಕ ಹೆಚ್ಚುತ್ತದೆ.
undefined
click me!