ಊಟ ಮಾಡಿದ ಕೂಡಲೇ ನಿದ್ದೆ ಬರೋದು ಯಾಕೆ?

First Published Aug 6, 2021, 1:56 PM IST

ಆಹಾರ ಸೇವನೆ ದೇಹಕ್ಕೆ ಒಂದು ದಿನದ ಶಕ್ತಿ ನೀಡುತ್ತದೆ. ಆದರೆ, ಮತ್ತೊಂದೆಡೆ, ವ್ಯಕ್ತಿಯು ಹೊಟ್ಟೆ ತುಂಬಿದ ಕೂಡಲೇ ಅಲಸ್ಯನಾಗುತ್ತಾನೆ. ನಂತರ ದಣಿಯುತ್ತಾನೆ. ಊಟ ಮಾಡಿದ ನಂತರ, ಅವನು ನಿದ್ರೆಗೆ ಜಾರಲು ಪ್ರಾರಂಭಿಸುತ್ತಾನೆ. ತಿಂದ ನಂತರ ಆಯಾಸ ಅನುಭವಿಸುವುದು ತುಂಬಾ ಸಾಮಾನ್ಯ. ಊಟ ಮಾಡಿದ ತಕ್ಷಣ ನಿದ್ದೆ ಬರಲು ಕಾರಣಗಳೇನು? 

ಆಹಾರ ಒಳಗೆ ಹೋದಾಗ, ವಿವಿಧ ಅಂಗಾಂಗಳು ಆಹಾರ ಒಡೆಯಲು ಕೆಲಸ ಮಾಡುತ್ತವೆ ಮತ್ತು ದೇಹ ತನ್ನ ಕೆಲಸವನ್ನು ಮುಂದುವರಿಸಲು ಸಹಾಯ ಮಾಡುವ ಸ್ಥಳಗಳಿಗೆ ಕಳುಹಿಸುತ್ತದೆ. ಇದು ಸಾಕಷ್ಟು ಶಕ್ತಿಯನ್ನು ತೆಗೆದುಕೊಳ್ಳುತ್ತದೆ, ಊಟ ಮಾಡಿದ ಬಳಿಕ ನಿಮಗೂ ಆಯಾಸವೆನಿಸುತ್ತಿದ್ದರೆ, ಕೆಲವು ಕಾರಣಗಳು ಇಲ್ಲಿವೆ. ಅವುಗಳನ್ನು ತಿಳಿದುಕೊಳ್ಳುವುದು ಮತ್ತು ಕಾರ್ಯಗತಗೊಳಿಸಿದರೆ ಊಟದ ನಂತರ ಸಂಪೂರ್ಣವಾಗಿ ನಿದ್ದೆ ಕಣ್ಮರೆಯಾಗುತ್ತದೆ ಮತ್ತು ಎನರ್ಜಿಟಿಕ್ ಆಗಿರುತ್ತೀರಿ.  

ಅತಿಯಾಗಿ ತಿನ್ನುವುದು 
ಕೆಲವೊಮ್ಮೆ ತಿಂದ ನಂತರ ದಣಿದ ಅನುಭವವು ನೀವು ಎಷ್ಟು ತಿಂದಿದ್ದೀರಿ ಎಂಬುದಕ್ಕೆ ಸಂಬಂಧಿಸಿದೆ. ಹೆಚ್ಚು ಆಹಾರವನ್ನು ತಿಂದಷ್ಟೂ, ಅದನ್ನು ಕರಗಿಸಲು ಹೆಚ್ಚು ಶಕ್ತಿ ಬೇಕು. ಎಲ್ಲಾ ಶಕ್ತಿ ಖರ್ಚು ಮಾಡುವುದು ಆಯಾಸಕ್ಕೆ ಕಾರಣವಾಗಬಹುದು. 

ಸಾಧ್ಯವಾದಷ್ಟು ತಿನ್ನುವ ಪ್ರಮಾಣ ಕಡಿಮೆ ಮಾಡಿ ಮತ್ತು ಊಟದ ಮಧ್ಯದಲ್ಲಿ ಹಸಿವಾದಾಗ ಹೆಚ್ಚಿನ ಪ್ರೋಟೀನ್ ತಿಂಡಿಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿ.
 

ಹೆಚ್ಚಿನ ಕೊಬ್ಬು ಮತ್ತು ಕಾರ್ಬ್ಸ್
ಆಹಾರದಲ್ಲಿ ಕೊಬ್ಬು ಮತ್ತು ಕಾರ್ಬ್ಸ್ ಹೆಚ್ಚಾಗಿದ್ದರೆ ಅದು ನಿಮ್ಮನ್ನು ಮಂಕಾಗಿಸುತ್ತದೆ. ಸಣ್ಣ ಕರುಳಿನಿಂದ ಹೊರಸೂಸುವ ಕೊಲೆಸ್ಟ್ರಾಲ್ ಕಿಕಿನ್ ಹಾರ್ಮೋನ್ ಅನ್ನು ಇಲ್ಲಿ ನಿದ್ದೆಗೆ ಕಾರಣ.

ಹೆಚ್ಚಿನ ಕೊಬ್ಬು ಮತ್ತು ಕ್ಯಾಲೊರಿಗಳಿಂದ ಸಮೃದ್ಧವಾಗಿರುವ ಪನ್ನೀರ್ ಪಿಜ್ಜಾ ತುಂಡನ್ನು ತಿನ್ನುತ್ತೀರಿ ಎಂದಿಟ್ಟು ಕೊಳ್ಳಿ, ಇದರಿಂದ ಕೊಬ್ಬು ಹೆಚ್ಚುತ್ತದೆ. ಹೆಚ್ಚು ಕೊಬ್ಬಿನ ಆಹಾರ ಸೇವಿಸಿದರೆ ಬೇಗ ನಿದ್ರೆ ಬರುತ್ತದೆ. 

ಮದ್ಯ ಸೇವನೆ
ಮದ್ಯ ಸೇವಿಸಿದರೆ ಊಟದ ನಂತರ ಆಲಸ್ಯ ಬರಬಹುದು. ಆರೋಗ್ಯ ತಜ್ಞರ ಪ್ರಕಾರ, ಆಲ್ಕೋಹಾಲ್ ನಮ್ಮ ಕೇಂದ್ರ ನರಮಂಡಲವನ್ನು ನಿಗ್ರಹಿಸುತ್ತದೆ, ಇದು ನಿದ್ರೆಯನ್ನು ಉಂಟುಮಾಡುತ್ತದೆ. ಆದಾಗ್ಯೂ, ಈ ಪರಿಣಾಮ ಹೆಚ್ಚು ಕಾಲ ಉಳಿಯುವುದಿಲ್ಲ. ಆದರೆ ಮಲಗುವ ಸಮಯ ಆಲ್ಕೋಹಾಲ್ ಕುಡಿಯುವುದು ಖಂಡಿತವಾಗಿಯೂ ಮಲಗುವ ಚಕ್ರವನ್ನು ತೊಂದರೆಗೊಳಿಸುತ್ತದೆ. ನಿಯಮಿತ ಶಕ್ತಿಯ ಮಟ್ಟವು ಕುಸಿಯುತ್ತಿದ್ದರೆ ಆಲ್ಕೋಹಾಲ್ ಸೇವನೆಗೆ ಕಡಿವಾಣ ಹಾಕಿ. 

ಹಾರ್ಮೋನ್ ಅಸಮತೋಲನದ ಸಮಸ್ಯೆ
ಆಹಾರ ಸೇವಿಸಿದ ನಂತರ ನಿರಂತರವಾಗಿ ದಣಿದಿದ್ದರೆ, ಇನ್ನಿತರ ಸಮಸ್ಯೆ ಕಾಡುತ್ತಿದ್ದರೆ, ವೈದ್ಯರೊಂದಿಗೆ ಮಾತನಾಡಬೇಕು. ಇದಲ್ಲದೆ, ಹಾರ್ಮೋನ್ ಅಸಮತೋಲನ, ಇನ್ಸುಲಿನ್ ಸೂಕ್ಷ್ಮತೆ, ರಕ್ತಹೀನತೆಯಂತಹ ಆಧಾರವಾಗಿರುವ ಪರಿಸ್ಥಿತಿಗಳು ಊಟದ ನಂತರ ಆಯಾಸ ಅಥವಾ ನಿದ್ರೆಗೂ ಕಾರಣವಾಗಬಹುದು

ಟ್ರಿಪ್ಟೋಫಾನ್ ಹೆಚ್ಚಿನ ಸೇವನೆ
ಟ್ರಿಪ್ಟೋಫಾನ್ ಹೊಂದಿರುವ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ, ವಿಶೇಷವಾಗಿ ಕಾರ್ಬೋಹೈಡ್ರೇಟ್ ಸಮೃದ್ಧ ಆಹಾರಗಳು, ತಿಂದ ಕೆಲವೇ ಗಂಟೆಗಳಲ್ಲಿ ದಣಿದ ಅನುಭವ ನೀಡುತ್ತದೆ. ಟ್ರಿಪ್ಟೋಫಾನ್ ಹೆಚ್ಚಾಗಿ ಚಾಕೊಲೇಟ್, ಹಾಲಿನ ಬ್ರೆಡ್, ಚಿಕನ್, ಕಡಲೆಕಾಯಿ ಮತ್ತು ಓಟ್‌‌ನಲ್ಲಿ ಕಂಡುಬರುತ್ತದೆ. 

ಟ್ರಿಪ್ಟೋಫಾನ್ ಹೆಚ್ಚಿನ ಸೇವನೆ
ಟ್ರಿಪ್ಟೋಫಾನ್ ಹೊಂದಿರುವ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ, ವಿಶೇಷವಾಗಿ ಕಾರ್ಬೋಹೈಡ್ರೇಟ್ ಸಮೃದ್ಧ ಆಹಾರಗಳು,  ತಿಂದ ಕೆಲವೇ ಗಂಟೆಗಳಲ್ಲಿ ದಣಿದ ಅನುಭವವನ್ನು ಉಂಟು ಮಾಡುತ್ತದೆ. ಟ್ರಿಪ್ಟೋಫಾನ್ ಹೆಚ್ಚಾಗಿ ಚಾಕೊಲೇಟ್, ಹಾಲಿನ ಬ್ರೆಡ್, ಚಿಕನ್, ಕಡಲೆಕಾಯಿ ಮತ್ತು ಓಟ್ ನಲ್ಲಿ ಕಂಡುಬರುತ್ತದೆ. 

ಊಟದ ನಂತರ ದಿನದ ಯಾವುದೇ ಸಮಯದಲ್ಲಿ ದಣಿದಿರುವಂತೆ ಅನುಭವಿಸಲು ಇನ್ನೂ ಅನೇಕ ಕಾರಣಗಳಿವೆ, ಆದ್ದರಿಂದ ಆಯಾಸವಾಗಿದ್ದರೆ, ತುಂಬಾ ದಣಿದ ಅನುಭವ ಆದರೆ, ಅದರ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ.

click me!