ಹಸಿ ಅಲ್ಲ ಬೇಯಿಸಿದ ಮೊಳಕೆ ಕಾಳು ಆರೋಗ್ಯಕ್ಕೆ ಉತ್ತಮ

First Published | Feb 11, 2021, 4:54 PM IST

ಮೊಳಕೆ ಬರಿಸಿದ ಬೀಜಗಳು ಹೆಚ್ಚಿನ ವಿಟಮಿನ್ ಮತ್ತು ಖನಿಜಾಂಶಗಳಿಂದಾಗಿ ಪೌಷ್ಟಿಕಾಂಶದ ಶಕ್ತಿಕೇಂದ್ರವೆಂದು ಪರಿಗಣಿಸಲ್ಪಟ್ಟಿವೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳಿದ್ದು,  ಪ್ರೋಟೀನ್, ಫೋಲೇಟ್, ಮೆಗ್ನೀಷಿಯಂ, ಫಾಸ್ಪರಸ್, ಮ್ಯಾಂಗನೀಸ್ ಮತ್ತು ವಿಟಮಿನ್ ಸಿ ಮತ್ತು ಕೆ ಅಂಶಗಳಿವೆ. ಆದರೆ ಮೊಳಕೆ ಕಾಳುಗಳನ್ನು ಹಸಿಯಾಗಿ ತಿನ್ನುವ ಕುರಿತು ಮತ್ತು ಬೇಯಿಸಿ ತಿನ್ನುವ ಕುರಿತು ಹಲವು ಸಂಶಯಗಳಿವೆ.

ಮೊಳಕೆಯ ಪ್ರಕ್ರಿಯೆಯು ವಾಸ್ತವವಾಗಿ ಅದರ ಪೌಷ್ಟಿಕಾಂಶದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಆದ್ದರಿಂದ ಇದು ಫಿಟ್ ನೆಸ್ ಫ್ರೀಕ್ ಗಳು ಮತ್ತು ತೂಕ ಇಳಿಕೆ ಮಾಡುವವರ ಆದ್ಯತೆಯ ಸ್ನ್ಯಾಕ್ಸ್ ಐಟಂ ಆಗಿದೆ. ಮೊಳಕೆ ಕಾಳುಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಹೆಚ್ಚು ಹೊತ್ತು ಹೊಟ್ಟೆಯನ್ನು ತುಂಬಲು ಸಹಾಯ ಮಾಡುತ್ತದೆ.
undefined
ಹಸಿ ಮೊಳಕೆಕಾಳುಗಳನ್ನು ತಿನ್ನುವಾಗ ಅನೇಕ ವೇಳೆ ಆಹಾರದಲ್ಲಿ ವಿಷದ ಅಂಶವೂ ಸೇರಿಕೊಳ್ಳುತ್ತದೆ. ಆದುದರಿಂದಾಗಿ ಇದರಿಂದಾಗುವ ಪ್ರಯೋಜನಗಳು ಅಪಾಯಗಳಾಗಿ ಬದಲಾಗಬಹುದು. ಹಾಗಾದರೆ ಬೇಯಿಸಿದ ಮೊಳಕೆ ಕಾಳು ಮತ್ತು ಹಸಿ ಮೊಳಕೆ ಕಾಳು ಇವುಗಳಲ್ಲಿ ಯಾವುದು ಉತ್ತಮ ನೋಡೋಣ.
undefined

Latest Videos


ಹಸಿ ಮೊಳಕೆಗಳು ಮತ್ತು ಆಹಾರ ವಿಷ:ಹಸಿ ಮೊಳಕೆ ಕಾಳುಗಳು ಹೆಚ್ಚಾಗಿ ಆಹಾರ ವಿಷದೊಂದಿಗೆ ಸಂಬಂಧ ಹೊಂದಿವೆ, ಏಕೆಂದರೆ ಇ. ಕೊಲಿ ಮತ್ತು ಸಾಲ್ಮೊನೆಲ್ಲಾಗಳಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳ ಉಪಸ್ಥಿತಿಯಿಂದ ಇವುಗಳಲ್ಲಿ ವಿಷ ಅಂಶ ಸೇರುತ್ತದೆ. ಬೆಚ್ಚಗಿನ ಮತ್ತು ಆರ್ದ್ರಪರಿಸ್ಥಿತಿಯಲ್ಲಿ ಮೊಳಕೆಯೊಡೆದ ಬೀಜಗಳು ಅಂತಹ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ.
undefined
ಮೊಳಕೆಕಾಳುಗಳನ್ನು ತಿಂದ 12-72 ಗಂಟೆಗಳ ನಂತರ ಹೆಚ್ಚಿನ ಜನರಿಗೆ ಅತಿಸಾರ, ಹೊಟ್ಟೆ ಸೆಳೆತ ಮತ್ತುವಾಂತಿಯಂತಹ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಅಪರೂಪವಾಗಿ ಮಾರಣಾಂತಿಕವಾಗಿರುತ್ತವೆ, ಆದರೆ ಮಕ್ಕಳು, ಗರ್ಭಿಣಿಯರು, ವೃದ್ಧರು ಮತ್ತು ರೋಗ ನಿರೋಧಕ ಶಕ್ತಿಗೆ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.
undefined
ಜೀರ್ಣಕ್ರಿಯೆ ಸಮಸ್ಯೆ:ತಜ್ಞರ ಪ್ರಕಾರ ಬೇಯಿಸಿದ ಮೊಳಕೆಕಾಳುಗಳಿಗೆ ಹೋಲಿಸಿದರೆ ಹಸಿ ಮೊಳಕೆಗಳು ಜೀರ್ಣಿಸಲೂ ಕಷ್ಟ. ಬೀಜ ಮತ್ತು ಕಾಳುಗಳ ಎಲ್ಲಾ ಪೋಷಕಾಂಶಗಳನ್ನು ಹಸಿ ರೂಪದಲ್ಲಿ ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗದೇ ಇರಬಹುದು. ಮೊಳಕೆಕಾಳುಗಳನ್ನು ಸ್ವಲ್ಪ ಬೇಯಿಸಿಕೊಳ್ಳುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಹೆಚ್ಚು ಲಭ್ಯವಾಗುವುದು.
undefined
ಮೊಳಕೆ ಕಾಳುಗಳನ್ನು ತಿನ್ನುವ ಸರಿಯಾದ ವಿಧಾನ:ಹಸಿ ಮೊಳಕೆಕಾಳುಗಳನ್ನು ಅನೇಕರು ಪ್ರತಿನಿತ್ಯ ಸೇವಿಸುತ್ತಿದ್ದರೂ, ಯಾವುದೇ ತೊಂದರೆಯನ್ನು ಎದುರಿಸಿಲ್ಲ. ಆದರೆ ಸುರಕ್ಷತೆಗಾಗಿ, ಬಾಣಲೆಗೆ ಸ್ವಲ್ಪ ಎಣ್ಣೆಹಾಕಿ ಮತ್ತು ಮೊಳಕೆಗಳನ್ನು ಸ್ವಲ್ಪ ಹೊತ್ತು ಹುರಿಯಿರಿ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಅಥವಾ 5-10 ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ಕುದಿಯಲು ಬಿಡಿ.
undefined
ಮೊಳಕೆ ಕಾಳುಗಳನ್ನು ಬೇಯಿಸಿ ತಿಂದರೆ ಜೀರ್ಣಾಂಗ ವ್ಯೂಹಕ್ಕೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಇನ್ನೂ ಉತ್ತಮ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.
undefined
ಒಂದು ವೇಳೆ ಆರೋಗ್ಯಕರ ರೋಗ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದರೆ ಮತ್ತು ಹಸಿ ಮೊಳಕೆಕಾಳುಗಳನ್ನು ಸೇವಿಸುವ ಮೂಲಕ ಯಾವುದೇ ಸಮಸ್ಯೆಗಳನ್ನು ಅನುಭವಿಸಲಿಲ್ಲ ಎಂದಾದಲ್ಲಿ, ಅದನ್ನು ಮುಂದುವರಿಸಬಹುದು.
undefined
ಒಂದು ವೇಳೆ ಹಸಿ ಮೊಳಕೆ ಕಾಳುಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿಗೆ ತೊಂದರೆಯಾಗಿದ್ದರೆ, ಸಲಾಡ್ ಅಥವಾ ಅನ್ನದಲ್ಲಿ ಸೇರಿಸುವ ಮೊದಲು ಮೊಳಕೆಕಾಳುಗಳನ್ನು ಸ್ವಲ್ಪ ಬೇಯಿಸಿ.ಇದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ ನಾಶವಾಗಿ ಆರೋಗ್ಯವೂ ಉತ್ತಮವಾಗಿರುತ್ತದೆ.
undefined
ಇನ್ನು ಮುಂದೆ ಮೊಳಕೆಕಾಳುಗಳನ್ನು ಹಾಗೆ ಸೇವಿಸುವ ಮುನ್ನ ಅವುಗಳಲ್ಲಿನ ಬ್ಯಾಕ್ಟಿರಿಯಾ ದೇಹಕ್ಕೆ ಅಪಾಯವನ್ನುಂಟು ಮಾಡುವುದು ಅರಿತು ಬೇಯಿಸಿ ಸೇವಿಸಿದರೆ ಉತ್ತಮ,
undefined
click me!