ಊಟ ಮಾಡಿದ ತಕ್ಷಣ ಹೊಟ್ಟೆ ನೋವು ಆಗತ್ತಾ? ಇದನ್ನ ತಡೆಯೋಕೆ ಇಲ್ಲಿದೆ ಸಿಂಪಲ್ ಟಿಪ್ಸ್

First Published | Nov 15, 2022, 4:35 PM IST

ಅನೇಕ ಜನರು ಊಟ ಮಾಡಿದ ತಕ್ಷಣ ಸಣ್ಣದಾದ ಹೊಟ್ಟೆ ನೋವನ್ನು ಅನುಭವಿಸುತ್ತಾರೆ. ಹೊಟ್ಟೆ ನೋವಿನ ಹಿಂದೆ ಅನೇಕ ಬ್ಯಾಡ್ ಹ್ಯಾಬಿಟ್ಸ್ ಕಾರಣವಾಗಿರಬಹುದು. ಅನೇಕ ಜನರು ತಪ್ಪು ಭಂಗಿಯಲ್ಲಿ ಕುಳಿತು ತಿನ್ನುತ್ತಾರೆ. ಈ ತಪ್ಪು ಅಭ್ಯಾಸವು ತಿಂದ ನಂತರ ಹೊಟ್ಟೆ ನೋವಿಗೆ ಕಾರಣವಾಗಬಹುದು. ಇಲ್ಲಿ ಹೇಳಿರೋ ಕೆಲವು ಈಸಿ ಟಿಪ್ಸ್ ಸಹಾಯದಿಂದ ಹೊಟ್ಟೆ ನೋವನ್ನು ತಪ್ಪಿಸಬಹುದು.

ಊಟ ಮಾಡಿದ ತಕ್ಷಣ ಹೊಟ್ಟೆ ನೋವಾಗೋದರ ಹಿಂದೆ ನೀವು ಮಾಡುವ ಕೆಲವು ತಪ್ಪು ಅಭ್ಯಾಸಗಳು ಕಾರಣವಾಗಿರಬಹುದು. ಹೊಟ್ಟೆಗೆ ಸಂಬಂಧಿಸಿದ ರೋಗಗಳಿಂದ ಹೊಟ್ಟೆ ನೋವಿನ ಸಮಸ್ಯೆಯೂ ಆಗಬಹುದು. ಹೊಟ್ಟೆಯಲ್ಲಿ ಹುಣ್ಣು, ಥೈರಾಯ್ಡ್ (Thyroid), ಎದೆಯುರಿ, ಮಲಬದ್ಧತೆ (Constipation), ಒತ್ತಡ (Stress), ಇತ್ಯಾದಿಗಳಿಂದಾಗಿ ತಿಂದ ನಂತರವೂ ಹೊಟ್ಟೆ ನೋವು(Stomach pain) ಕಾಣಿಸಿಕೊಳ್ಳಬಹುದು. ಇಲ್ಲಿ ಕೆಲವು ಸಲಹೆಗಳನ್ನು ಹೇಳಲಾಗಿದೆ, ಅದರ ಸಹಾಯದಿಂದ ತಿಂದ ನಂತರ ಹೊಟ್ಟೆ ನೋವಿನ ಸಮಸ್ಯೆಯನ್ನು ನಿವಾರಿಸಬಹುದು, ಅದು ಹೇಗೆ ಅನ್ನೋದನ್ನು ನೋಡೋಣ. 
 

ಅಸಿಡಿಕ್ ಆಹಾರಗಳಿಂದ(Acidic food) ದೂರವಿರಿ

ಅಸಿಡಿಕ್ ಆಹಾರಗಳನ್ನು ಸೇವಿಸೋದರಿಂದ ಊಟದ ನಂತರ ಹೊಟ್ಟೆಯ ಕಿರಿಕಿರಿ ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು. ಅಸಿಡಿಕ್ ಆಹಾರಗಳಲ್ಲಿ ಹಣ್ಣಿನ ರಸ, ಸಂಸ್ಕರಿಸಿದ ಚೀಸ್ ಇತ್ಯಾದಿಗಳು ಸೇರಿವೆ. 

Tap to resize

ಕೆಲವರು ಹಣ್ಣಿನ ರಸವನ್ನು (Fruit Juice) ಬ್ರೇಕ್ ಫಾಸ್ಟ್ ನೊಂದಿಗೆ ಸೇವಿಸುತ್ತಾರೆ, ಹಾಗೆ ಮಾಡೋದನ್ನು ತಪ್ಪಿಸಬೇಕು. ಈ ಅಭ್ಯಾಸ ಹೊಟ್ಟೆ ನೋವಿಗೆ ಕಾರಣವಾಗಬಹುದು. ಊಟ ಮಾಡಿದ ತಕ್ಷಣ ಸಿಹಿ ಸೇವಿಸಿದರೆ, ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು. ಹಾಗಾಗಿ ಈ ಅಭ್ಯಾಸವನ್ನು ತಪ್ಪಿಸಬೇಕು.

ಅತಿಯಾಗಿ ತಿನ್ನೋದನ್ನು(Eatring more) ತಪ್ಪಿಸಿ

 ಊಟ ಮಾಡಿದ ತಕ್ಷಣ ಹೊಟ್ಟೆ ನೋವಿನ ಸಮಸ್ಯೆ ಇದ್ದರೆ, ಆಹಾರದ ಪ್ರಮಾಣವನ್ನು ನೋಡಬೇಕು. ನೀವು ಒಂದೇ ಬಾರಿಗೆ ಸಾಕಷ್ಟು ಅಹಾರ ಸೇವಿಸಿದ್ರೆ, ಹೊಟ್ಟೆ ನೋವು ಉಂಟಾಗಬಹುದು. ಆದುದರಿಂದ ನಿಮ್ಮ ಆಹಾರವನ್ನು ನಿಯಂತ್ರಿಸೋದು ಉತ್ತಮ. ಆಹಾರ ಹೆಚ್ಚಾದರೆ ಸಮಸ್ಯೆ ಹೆಚ್ಚಾಗುತ್ತೆ.

ಜಠರವು ನಮ್ಮ ಕೈಯ ಮುಷ್ಟಿಯ ಗಾತ್ರದಂತೆಯೇ ಇದೆ. ಅಂತಹ ಸಣ್ಣ ಹೊಟ್ಟೆಯಲ್ಲಿ ಹೆಚ್ಚು ಆಹಾರ ತುಂಬಿದ್ರೆ ಹೊಟ್ಟೆ ನೋವಿಗೆ ಕಾರಣವಾಗಬಹುದು. ಹಾಗಾಗಿ ಒಂದೇ ಸಲ‌ ಹೆಚ್ಚಿನ ಆಹಾರ ಸೇವಿಸೋ ಬದಲು, ಸ್ವಲ್ಪ ಗ್ಯಾಪ್(Gap) ಬಿಟ್ಟು  ತಿನ್ನೋದನ್ನು ಮುಂದುವರಿಸಿ ಆದರೆ ಒಂದೇ ಸಮಯದಲ್ಲಿ ಹೆಚ್ಚು ಆಹಾರ ಸೇವಿಸೋದನ್ನು ತಪ್ಪಿಸಿ.       

ತುಂಬಾ ಬೇಗ ತಿನ್ನಬೇಡಿ(Don't eat fast)

ಬೇಗನೆ ತಿಂದು ಮುಗಿಸುವ ಜನರಿಗೆ, ಹೆಚ್ಚು ಹೊಟ್ಟೆಯ ಸಮಸ್ಯೆಗಳಾಗುತ್ತವೆ. ಆಹಾರವನ್ನು ತ್ವರಿತವಾಗಿ ತಿನ್ನೋದ್ರಿಂದ, ಹೊಟ್ಟೆಯಲ್ಲಿ ಉಬ್ಬರ, ವಾಕರಿಕೆ, ಆಸಿಡ್ ರಚನೆ, ಎದೆಯಲ್ಲಿ ಸುಡುವ ಅನುಭವ ಆಗುತ್ತೆ. ಆರಾಮವಾಗಿ ಆಹಾರವನ್ನು ಅಗಿಯಿರಿ ಮತ್ತು ಅದನ್ನು ತಿನ್ನಿ. ಟಿವಿ ನೋಡುವಾಗ ಆಹಾರ ಸೇವಿಸಬೇಡಿ, ಇದರಿಂದ‌‌ ನೀವು ಎಷ್ಟು ಆಹಾರ ತಿಂದಿರಿ. ಏನನ್ನು ತಿಂದಿರಿ ಅನ್ನೋದೆ ಕೆಲವೊಮ್ಮೆ ತಿಳಿಯೋದಿಲ್ಲ.

ನೀರಿನ(Water) ಕೊರತೆಯನ್ನು ತಪ್ಪಿಸಿ

ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳಲು, ದೇಹದಲ್ಲಿ ಸಾಕಷ್ಟು ನೀರು ಇರಬೇಕು. ನೀರಿನ ಸಹಾಯದಿಂದ, ಆಹಾರವನ್ನು ವಿಭಜಿಸಲು ಮತ್ತು ದೇಹಕ್ಕೆ ಪೋಷಕಾಂಶಗಳನ್ನು ತಲುಪಿಸಲು ಸಹಾಯ ಮಾಡುತ್ತೆ. ದೇಹದಲ್ಲಿ ನೀರಿನ ಕೊರತೆಯಿಂದಾಗಿ, ಗ್ಯಾಸ್, ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಊಟ ಮಾಡಿದ ತಕ್ಷಣ ಹೊಟ್ಟೆ ನೋಯುತ್ತಿದ್ದರೆ, ದೇಹವು ನಿರ್ಜಲೀಕರಣದಿಂದ ಬಳಲುತ್ತಿರಬಹುದು, ಆದ್ದರಿಂದ ಪ್ರತಿದಿನ 2 ರಿಂದ 3 ಲೀಟರ್ ನೀರನ್ನು ಸೇವಿಸಿ.
 

ಊಟವಾದ ತಕ್ಷಣ ಮಲಗುವ ತಪ್ಪನ್ನು ಮಾಡಬೇಡಿ

ಊಟ ಮಾಡಿದ ತಕ್ಷಣ ನಿದ್ರೆಗೆ(Sleep) ಜಾರಿದರೆ, ಆಗ ಹೊಟ್ಟೆ ನೋವು ಉಂಟಾಗಬಹುದು. ಊಟ ಮಾಡಿದ ಸ್ವಲ್ಪ ಸಮಯದ ನಂತರ ಮಲಗೋದರಿಂದ ಹೊಟ್ಟೆಯಲ್ಲಿ ಆಸಿಡ್ ರೂಪುಗೊಳ್ಳುತ್ತೆ  ಮತ್ತು ಹೊಟ್ಟೆ ನೋವು ಉಂಟಾಗಬಹುದು. 

ಊಟದ ನಂತರ ಹೊಟ್ಟೆ ನೋವನ್ನು ತಪ್ಪಿಸಲು ಬಯಸಿದರೆ, ಸ್ವಲ್ಪ ಸಮಯದವರೆಗೆ ನಡೆಯಿರಿ (Walk), ವಿಶೇಷವಾಗಿ ರಾತ್ರಿಯ ಊಟದ ನಂತರ, ನೀವು ಸ್ವಲ್ಪ ಸಮಯದವರೆಗೆ ನಡೆಯಬೇಕು. ವೈದ್ಯರು ಊಟ ಮಾಡಿದ ನಂತರ ಅರ್ಧ ಗಂಟೆ ನಡೆಯಲು ಶಿಫಾರಸು ಮಾಡುತ್ತಾರೆ.   

ನೀವು ಈ ಸಲಹೆಗಳನ್ನು ಫಾಲೋ ಮಾಡಿದ್ರೆ,  ಊಟ ಮಾಡಿದ ತಕ್ಷಣ ಹೊಟ್ಟೆ ನೋವಿನ ಸಮಸ್ಯೆಯನ್ನು ತಪ್ಪಿಸಬಹುದು.

Latest Videos

click me!