ಪಾಪ್ ಕಾರ್ನರ್‌ನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು ..

First Published | Oct 2, 2021, 3:49 PM IST

ಕೆಲವೊಂದು ವಸ್ತುಗಳನ್ನು ನಿರ್ಲಕ್ಷ್ಯ ಮಾಡಿ ಬಿಡುತ್ತೇವೆ. ಆದರೆ ಅದರ ಪ್ರಯೋಜನಗಳು ಬಹಳಷ್ಟಿರುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಮುಸುಕಿನ ಜೋಳ ಹಾಗೂ  ಪಾಪ್ಕಾರ್ನ್. ಪಾಪ್ಕಾರ್ನ್  ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಇದಕ್ಕೆ ವಯಸ್ಸಿನ ಹಂಗಿಲ್ಲ. ಸಿನಿಮಾಕ್ಕೆ ಹೋದಾಗ ಅಥವಾ ಮನೆಯಲ್ಲಿ ಕ್ರಿಕೆಟ್ ನೋಡುವಾಗ, ಸಿನಿಮಾ ನೋಡುವಾಗ ಇದಿಲ್ಲದೆ ಇದ್ದರೆ ಹೇಗೆ ಆಲ್ವಾ? ಹೀಗೆ ಮುಸುಕಿನ ಜೋಳವನ್ನು ಬೇಯಿಸಿ ಅಥವಾ ಹುರಿದು ಪಾಪ್ಕಾರ್ನ್ಸ್ ಮಾಡಿಕೊಂಡು ತಿನ್ನುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ.

ಕಾರ್ನ್(Corn) ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಸಣ್ಣ ಸಮಾರಂಭಗಳಲ್ಲಿ ಕೂಡ ಇದು ಇದ್ದೇ ಇರುತ್ತದೆ. ಜಾತ್ರೆಯಲ್ಲಿ ಕೂಡ ಸ್ವೀಟ್ ಕಾರ್ನ್ ಇರುತ್ತದೆ. ಇದೊಂದು ಆರೋಗ್ಯಕ್ಕೆ ಅತ್ಯಗತ್ಯವಾದ ಆಹಾರ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. 

ಆದರೆ ಮುಸುಕಿನ ಜೋಳ  ಸೌಂದರ್ಯ ವೃದ್ಧಿಯಲ್ಲಿ ಹಾಗೂ ಆರೋಗ್ಯ(Health) ಅಭಿವೃದ್ದಿಯಲ್ಲಿ  ಬಳಕೆಗೆ ಬರುತ್ತದೆ ಎಂಬ ವಿಚಾರ ಗೊತ್ತಾ? ಹೌದು, ಕೇಳಿದ್ರೆ ಆಶ್ಚರ್ಯವಾಗಬಹುದು  ಆದರೂ ಕೂಡ ಇದು ನಿಜ. ಇದರಲ್ಲಿರುವ ಪೋಷಕಾಂಶಗಳು (Vitamins)  ಸೌಂದರ್ಯವನ್ನು (beauty) ಕಾಪಾಡುತ್ತದೆ.  ಇದರಲ್ಲಿ ವಿಟಮಿನ್ ಸಿ (Vitamin C) ಅಂಶ ಹೆಚ್ಚಾಗಿದೆ , ಅದು ಚರ್ಮದ ಆರೋಗ್ಯಕ್ಕೆ ಉತ್ತಮ.

Tap to resize

ಇದರಲ್ಲಿ ದೇಹಕ್ಕೆ ಅನುಕೂಲಕರವಾದ ಖನಿಜಾಂಶಗಳು (minerals), ಥಯಾಮಿನ್ ಮತ್ತು ನಯಾಸಿನ್ ಅಂಶಗಳು ಚರ್ಮದ ಅಂದವನ್ನು (Skin beauty ಹೆಚ್ಚು ಮಾಡುವಲ್ಲಿ ಕೆಲಸ ಮಾಡುತ್ತವೆ ಎಂದು ಸಾಬೀತಾಗಿದೆ. ಉತ್ತಮ ಸ್ಕಿನ್ ಬೇಕಾದರೆ ಇದನ್ನು ಸೇವಿಸಿ ನೋಡಿ.

ಮುಸುಕಿನ ಜೋಳದಲ್ಲಿ ಕಂಡುಬರುವ ಪ್ರಮುಖವಾದ ಮತ್ತು ಶಕ್ತಿಯುತವಾದ ಆಂಟಿಆಕ್ಸಿಡೆಂಟ್(Antioxident) ಅಂಶ ಎಂದರೆ ಅದು ಲೈಕೋಪಿನ್.  ವಿಟಮಿನ್ ಸಿ ಮತ್ತು ಲೈಕೋಪಿನ್ ಅಂಶಗಳು ತ್ವಚೆಯ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾಗಿದೆ. 

ಕಾರ್ನ್ ಸೇವನೆ ಮಾಡುವುದರ ಒಂದು ಪ್ರಮುಖ ಪ್ರಯೋಜನವೆಂದರೆ ಟೈಪ್ 2 ಮಧುಮೇಹ(Diabetes)ದ ಅಪಾಯವನ್ನು ಕಡಿಮೆ ಮಾಡುವುದು, ಇದು ಮಧ್ಯವಯಸ್ಕ ಪುರುಷರು (Middle aged Men) ಮತ್ತು ಮಹಿಳೆಯರಿಗೆ (Women) ವಿಶೇಷವಾಗಿ ಸಾಬೀತಾಗಿದೆ. ಮಧುಮೇಹಿಗಳು ಇದರ ನಿಯಮಿತ ಸೇವನೆಯಿಂದ ಸಮಸ್ಯೆ ಗುಣಮುಖವಾಗುತ್ತದೆ. 

ಇದರ ಜೊತೆಯಲ್ಲಿ, ಪಾಪ್ ಕಾರ್ನ್ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು (ಜಿಐ) ಹೊಂದಿದೆ, ಅಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar Level) ಸುಲಭವಾಗಿ ನಿರ್ವಹಿಸಲು ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್ ಇರುವ ಜನರು ತಮ್ಮ ಗ್ಲೂಕೋಸ್ (Glucose)ಮತ್ತು ಲಿಪಿಡ್ ಮಟ್ಟವನ್ನು ಸುಧಾರಿಸಲು ಇದು ಬಹಳ ಅಗತ್ಯವಿದೆ.
 

ಪಾಪ್ ಕಾರ್ನ್ನಲ್ಲಿರುವ ಫೈಬರ್‌ನ  ಅಧಿಕ ಸೇವನೆಯು ಹೃದಯರಕ್ತನಾಳದ ಕಾಯಿಲೆ ಹಾಗೂ ಹೃದಯ ಸಂಬಂಧಿ (Heart Disease) ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಡಯಟ್ (Diet) ನಲ್ಲಿ ಜೋಳ ಸೇವನೆ ಮಾಡುವುದರಿಂದ ಹೃದಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 

ತೂಕ ಕಡಿಮೆ(Weight loss) ಮಾಡಿಕೊಳ್ಳುವುದು  ಹಲವಾರು ಜನರಿಗೆ ಸವಾಲಿನ ಕೆಲಸ. ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸಹಾಯ ಮಾಡುವ  ಅಂಶಗಳು ಪಾಪ್ಕಾರ್ನ್ ನಲ್ಲಿದೆ. ಇದರ ಹೆಚ್ಚಿನ ಫೈಬರ್ ಅಂಶ, ಅದರ ಕಡಿಮೆ ಕ್ಯಾಲೋರಿ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ.

ಪಾಪ್ಕಾರ್ನ್ನಲ್ಲಿ ಸಾಕಷ್ಟು ಫೈಬರ್(Fibre) ಮತ್ತು  ಆ್ಯಂಟಿ ಆಕ್ಸಿಡೆಂಟ್ಸ್ ಇರುತ್ತವೆ, ಇದು ಕೆಲವು ಗಂಭೀರ ಆರೋಗ್ಯ  ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆದುದರಿಂದ ಇಂದಿನಿಂದಲೇ ತಪ್ಪದೆ ನಿಯಮಿತವಾಗಿ ಪಾಪ್ ಕಾರ್ನ್ ಅಥವಾ ಕಾರ್ನ್ ಸೇವನೆ ಮಾಡಿ. 

ಮಧುಮೇಹ ಮತ್ತು ಹೃದ್ರೋಗದ(Heart disease) ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ, ಹೆಚ್ಚು ಉಪ್ಪು ಅಥವಾ ಬೆಣ್ಣೆ ಇಲ್ಲದೆ ಪಾಪ್ಕಾರ್ನ್ ತಿನ್ನುವುದು  ರಕ್ತದೊತ್ತಡವನ್ನು (Blood Pressure) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯಾವುದಕ್ಕೂ ಹೆಚ್ಚು ಸೇವನೆ ಮಾಡಲು ಹೋಗಬೇಡಿ. ನಿಯಮಿತವಾಗಿ ಸೇವಿಸಿದರೆ ಅರೋಗ್ಯ ಉತ್ತಮವಾಗಿರುತ್ತದೆ. 

ಈ ಪ್ರಮುಖ ಪೋಷಕಾಂಶಗಳು ಪಾಪ್ಕಾರ್ನಲ್ಲಿದೆ.
ಫೋಲೇಟ್
ನಿಯಾಸಿನ್
ರಿಬೋಫ್ಲಾವಿನ್
ಥಯಾಮಿನ್
ಪ್ಯಾಂಟೊಥೆನಿಕ್ ಆಮ್ಲ
ವಿಟಮಿನ್ ಬಿ 6
ವಿಟಮಿನ್ ಎ(Vitamin A)
ವಿಟಮಿನ್ ಇ
ವಿಟಮಿನ್ ಕೆ
 

Latest Videos

click me!