Published : Jun 02, 2021, 02:57 PM ISTUpdated : Jun 02, 2021, 03:18 PM IST
ದಾಳಿಂಬೆ ಈ ಭೂಮಿ ಮೇಲೆ ಸಿಗುವಂತಹ ಔಷಧಗಳ ಭಂಡಾರವೇ ತುಂಬಿರುವ ಹಣ್ಣಾಗಿದೆ. ದಾಳಿಂಬೆ ಹಣ್ಣನ್ನು ಔಷಧವಾಗಿ ಸುಶ್ರುತ ಕಾಲದಿಂದಲೂ ಬಳಕೆ ಮಾಡಿಕೊಂಡು ಬರಲಾಗಿದೆ. ಇಂದಿಗೂ ಸಹ ಹಲವಾರು ಸಮಸ್ಯೆ ನಿವಾರಣೆಯಲ್ಲಿ ಇದು ಸಹಕಾರಿ. ಆದರೆ ಕೇವಲ ದಾಳಿಂಬೆ ಹಣ್ಣು ಮಾತ್ರವಲ್ಲ ಅದರ ಹೂವು ಮತ್ತು ಎಲೆಗಳಲ್ಲೂ ಉತ್ತಮವಾದ ಔಷಧೀಯ ಗುಣಗಳಿವೆ. ಅವುಗಳ ಸೇವನೆಯಿಂದ ಏನೆಲ್ಲಾ ಲಾಭ ಇದೆ ಅನ್ನೋದನ್ನು ನೋಡಿ..
ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಅದರಿಂದ ಅಂಗಾಂಗಗಳನ್ನು ತಿಕ್ಕಿ ಸ್ನಾನ ಮಾಡುವುದರಿಂದ ಶರೀರವು ಕಾಂತಿಯುತವಾಗುತ್ತದೆ

210
ಆರೋಗ್ಯ ವರದಿಗಳು ತೋರಿಸುವಂತೆ ಇದು ದ್ಯುತಿರಾಸಾಯನಿಕ ರಿಸೆರ್ವೋಯರ್ ಒಳಗೊಂಡಿದೆ, ಇದು ಮಧುಮೇಹ ರೋಗಿಗಳಿಗೆ ಉತ್ತಮ ಅಂಶವಾಗಿದೆ.

310
ದಾಳಿಂಬೆ ಹೂವಿನಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ. ನಿಮ್ಮನ್ನು ಸುರಕ್ಷಿತವಾಗಿರಿಸಲು ಮತ್ತು ಬಾಹ್ಯ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ.

410
ಎಲೆಗಳನ್ನು ಅರಿದು ಮೈಗೆ ಹಚ್ಚಿ ಸ್ನಾನ ಮಾಡಿದರೆ ಬೆವರಿನ ವಾಸನೆಯಿಂದ ಮುಕ್ತವಾಗುತ್ತದೆ. ದೇಹದಿಂದ ಬೆವರಿನ ವಾಸನೆ ಬರುವುದು ಕಡಿಮೆಯಾಗುತ್ತದೆ.

510
ಆಹಾರದಲ್ಲಿ ದಾಳಿಂಬೆ ಹೂವಿನ ಮೊಗ್ಗನ್ನು ಬಳಕೆ ಮಾಡಿದರೆ ಅದರಿಂದ ಹೃದಯಕ್ಕೆ ಸಮಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.

610
ಬಿಳಿ ಮುಟ್ಟಿನ ಸಮಸ್ಯೆ ಇರುವವರು ದಾಳಿಂಬೆ ಮೊಗ್ಗಿನ ಜೊತೆ ಕರಿಮೆಣಸಿನ ಪುಡಿ ಹಾಕಿ ನೀರಿನಲ್ಲಿ ಹಾಕಿ ಕುದಿಸಿ, ಆ ನೀರನ್ನು ಸೇವನೆ ಮಾಡಬೇಕು.

710
ದಾಳಿಂಬೆ ಹೂವನ್ನು ಅರೆದು ಮಿಕ್ಸ್ ಮಾಡಿ ಜಜ್ಜಿ ಮುಖದ ಮೇಲಿನ ಮೊಡವೆಗೆ ಹಚ್ಚಿದರೆ ಅದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.

810
ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ದಾಳಿಂಬೆ ಹೂವು ಮತ್ತು ಗರಿಕೆ ಹುಲ್ಲಿನ ರಸ ತೆಗೆದು ಮೂಗಿಗೆ ಹಾಕಬೇಕು. ಇದರಿಂದ ರಕ್ತಸ್ರಾವ ಶೀಘ್ರ ಗುಣಮುಖವಾಗುತ್ತದೆ.

910
ದಾಳಿಂಬೆ ಹೂವಿನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಕೇವಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲ, ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಹೊರಹಾಕುವ ಮೂಲಕ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.

1010
ಬಳಕೆ ಮಾಡುವುದು ಹೇಗೆ? : ದಾಳಿಂಬೆ ಹೂವುಗಳ ಪೂರಕಗಳನ್ನು ಬಳಕೆ ಮಾಡಬಹುದು ಅಥವಾ ಕಚ್ಚಾ ಹೂವುಗಳನ್ನು ಕಂಡುಕೊಂಡರೆ, ಅದರಿಂದ ಸರಳ ಚಹಾವನ್ನು ತಯಾರಿಸುವ ಮೂಲಕ ನಿಮ್ಮ ಆಹಾರದಲ್ಲಿ ಅದನ್ನು ಸೇರಿಸಿ. ಆದರೂ, ಯಾವುದೇ ರೀತಿಯ ಕಿರಿಕಿರಿಯನ್ನು ಹೊಂದಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.