ಪಿಜ್ಜಾ, ಫ್ರೆಂಚ್ ಫ್ರೈಸ್ ಪ್ರಿಯರೇ, ನಿಮ್ಮ ಆರೋಗ್ಯದ ಕಡೆ ಇರಲಿ ಗಮನ

First Published | Aug 31, 2021, 5:16 PM IST

ಅಮೆರಿಕದಲ್ಲಿ ನಡೆಸಿದ ಸಂಶೋಧನೆಯೊಂದರಲ್ಲಿ ಪ್ರತಿ 37 ಸೆಕೆಂಡುಗಳಿಗೆ ಒಬ್ಬರು ಕಾರ್ಡಿಯೋವಸ್ಕ್ಯುಲರ್ ಸಮಸ್ಯೆಯಿಂದ ಸಾವನ್ನಪ್ಪುತ್ತಾರೆ ಎಂದು ತಿಳಿದು ಬಂದಿದೆ. ಹಾಗಾದರೆ ಅಂತಹ ಯಾವ ಆಹಾರಗಳು ಹೃದಯ ಸಮಸ್ಯೆಯನ್ನು ತರುತ್ತವೆ. ಇಲ್ಲಿ ಎಂಟು ಆಹಾರಗಳ ಮಾಹಿತಿ ಇದೆ. ಅವು ನಿಮ್ಮ ಹೃದಯಕ್ಕೆ ಸಮಸ್ಯೆಯನ್ನು ತಂದೊಡ್ಡುವುದು ಖಂಡಿತಾ. 

ಪಿಜ್ಜಾ : 
ಹೃದಯಕ್ಕೆ ಸಮಸ್ಯೆಯನ್ನು ತಂದೊಡ್ಡುವ ಅತ್ಯಂತ ಕೆಟ್ಟ ಆಹಾರಗಳಲ್ಲಿ ಪಿಜ್ಜಾ ಒಂದಾಗಿದೆ. ಆದರೆ ಎಲ್ಲಾ ಪಿಜ್ಜಾಗಳಿಂದ ಹೃದಯಕ್ಕೆ ಹಾನಿ ಉಂಟಾಗೋದಿಲ್ಲ, ಆರೋಗ್ಯಯುತ ಪಿಜ್ಜಾಗಳನ್ನು ಮನೆಯಲ್ಲಿಯೇ ಮಾಡಬಹುದು. ಆದರೆ ಅಂಗಡಿಗಳಲ್ಲಿ ಸಿಗುವಂತಹ ಪಿಜ್ಜಾಗಳು ಹೆಚ್ಚಿನ ಮಟ್ಟದ ಕ್ಯಾಲರಿ, ಸೋಡಿಯಂ ಮತ್ತು ಫ್ಯಾಟ್ಸ್ ಒಳಗೊಂಡಿದೆ. ಹೆಚ್ಚು ಪಿಜ್ಜಾ ಸೇವಿಸಿದರೆ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲ ಇದರಿಂದ ರಕ್ತದ ಒತ್ತಡ ಉಂಟಾಗುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮಿತಿ ಮೀರಿ ಹೆಚ್ಚಾಗುತ್ತದೆ. 

ಫ್ರೆಂಚ್ ಫ್ರೈಸ್ : 
ಹೆಚ್ಚಿನ ಫ್ರೈಸ್ ತಿನ್ನುವವರು, ಅದನ್ನು ಕಡಿಮೆ ತಿನ್ನುವವರಿಕ್ಕಿಂತ ಸಾವನ್ನಪ್ಪುವ ದರ 2ರಿಂದ 3 ಪಟ್ಟು ಹೆಚ್ಚಿರುತ್ತದೆ. ಮ್ಯಾಕ್ ಡೋನಾಲ್ಡ್ ನಲ್ಲಿ ನೀಡುವ ಸ್ವಲ್ಪ ಪ್ರಮಾಣದ ಫ್ರೆಂಚ್ ಫ್ರೈಸ್‌ನಲ್ಲಿ ಬರೋಬ್ಬರಿ 230 ಕ್ಯಾಲೋರಿಗಳಿರುತ್ತವೆ. ಇದರ ಜೊತೆಗೆ ಈ ಫ್ರೈಸ್ ನಲ್ಲಿ 11 ಗ್ರಾಂ ನಷ್ಟು ಸ್ಯಾಚುರೇಟೆದ್ ಫ್ಯಾಟ್ ಇರುತ್ತದೆ. ಅಂದರೆ ಅದು ವ್ಯಕ್ತಿಗೆ ಪ್ರತಿದಿನ ಬೇಕಾಗುವ ಫ಼್ಯಾಟ್ ಕ್ಕಿಂತ ಶೇ.14ರಷ್ಟು ಹೆಚ್ಚು.

Tap to resize

ಫ್ರೈಡ್ ಚಿಕನ್ : 
ಸಾಮಾನ್ಯವಾಗಿ ಎಲ್ಲರೂ ಬಕೆಟ್ ಫ್ರೈಡ್ ಚಿಕನ್ ಸೇವನೆ ಮಾಡಿರುತ್ತೀರಿ. ನೀವು ಅವರಲ್ಲಿ ಒಬ್ಬರಾಗಿದ್ದರೆ ಯಾವುದು ನಿಮ್ಮ ದೇಹಕ್ಕೆ ಅನಾರೋಗ್ಯಕರವಾಗಿದೆ ಎಂಬುದನ್ನು ತಿಳಿಯಿರಿ. ಒಂದು ಸಿಂಗಲ್ ಪೀಸ್ ಫ್ರೈಡ್ ಚಿಕನ್ ನಲ್ಲಿ ಶೇ. ಕೊಲೆಸ್ಟ್ರಾಲ್ ಇರುತ್ತದೆ. ಜೊತೆಗೆ ಶೇ.13ರಷ್ಟು ಸ್ಯಾಚುರೇಟೆಡ್ ಫ್ಯಾಟ್ ಇರುತ್ತದೆ. ನೀವು ರೆಸ್ಟೋರೆಂಟ್‌ನಿಂದ ಫ್ರೈಡ್ ಚಿಕನ್ ಆರ್ಡರ್ ಮಾಡುತ್ತಿದ್ದರೆ , ಅದರಲ್ಲಿರುವ ಟ್ರಾನ್ಸ್ ಫ್ಯಾಟ್ ಬಗ್ಗೆ ಎಚ್ಚರದಿಂದಿರಿ.

ಐಸ್ ಕ್ರೀಂ : 
ಐಸ್ ಕ್ರೀಂ ಎಂಬುದು ಕ್ಯಾಲರಿ, ಶುಗರ್ ಮತ್ತು ಸ್ಯಾಚಿರೇಟೆಡ್ ಫ್ಯಾಟ್‌ಗಳಿಂದ ತುಂಬಿರುವ ಆಹಾರ. ಐಸ್ ಕ್ರೀಂ ಸೇವನೆ ಹೆಚ್ಚು ಮಾಡಿದರೆ ಅದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಒಂದು ಬೌಲ್ ಚಾಕಲೇಟ್ ಐಸ್ ಕ್ರೀಂ ಸೇವನೆ ಮಾಡಿದರೆ, ಅದರಿಂದ ಸೊಂಟದ ಅಳತೆ ಹೆಚ್ಚುವ ಸಾಧ್ಯತೆ ಇದೆ. ನಿಮ್ಮ ಫೆವರಿಟ್ ಬ್ರಾಂಡ್ ನ ಒಂದು ಕಪ್ ಐಸ್ ಕ್ರೀಂನಲ್ಲಿ ಸುಮಾರು 270 ಕ್ಯಾಲರಿಗಳಿವೆ. 

ಚಿಪ್ಸ್ : 
ಹೃದಯದ ಆರೋಗ್ಯ ಮತ್ತು ತೂಕ ಹೆಚ್ಚುವಿಕೆ ವಿಷಯಕ್ಕೆ  ಬಂದಾಗ ತುಂಬಾ ಕೆಟ್ಟದಾದ ಆಹಾರ ಎಂದರೆ ಅದು ಆಲೂಗಡ್ಡೆ ಚಿಪ್ಸ್. ಪೊಟಾಟೊ ಚಿಪ್ಸಿನ ಒಂದು ಸಾಮಾನ್ಯ ಪ್ಯಾಕೆಟ್‌ನಲ್ಲಿ ಬರೋಬ್ಬರಿ 153 ಕ್ಯಾಲೋರಿಗಳಿವೆ. ಇದರಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್ ನಿಮ್ಮ ದಿನದ ಫ್ಯಾಟ್‌ನ ಶೇ.15ರಷ್ಟಿದೆ. 

ಸೋಡಾ: 
ಇದನ್ನು ಕೇಳಿದ್ರೆ ನಿಮಗೆ ಶಾಕ್ ಆಗಬಹುದು. ಒಂದು ಕ್ಯಾನ್ ಸೋಡಾ ಸೇವನೆ ಮಾಡೋದರಿಂದ ಹೃದಯಕ್ಕೆ ಹೆಚ್ಚಿನ ಅಪಾಯ ಇದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಸಕ್ಕರೆ ಅಂಶಗಳುಳ್ಳ ಸೋಡಾ, ಮತ್ತಿತರ ಪಾನೀಯಗಳಿಂದ ಹೃದಯ ಸಮಸ್ಯೆ ಹೆಚ್ಚಾಗುತ್ತದೆ. ಅತಿ ಹೆಚ್ಚು ಸೋಡಾ ಸೇವನೆ ಮಾಡಿದಷ್ಟು, ಹೃದಯಾಘಾತದಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ. 

ಕ್ಯಾಂಡ್ ಸೂಪ್ : 
ಒಂದು ಸಿಂಗಲ್ ಕ್ಯಾನ್ ಚಿಕನ್ ಸೂಪ್ ನ ಕ್ರೀಂ ನಲ್ಲಿ 1600 ಎಂಜಿಕ್ಕಿಂತಲೂ ಹೆಚ್ಚು ಸೋಡಿಯಮ್ ಇದೆ. ಡಯಟ್‌ನಲ್ಲಿ ಅತಿ ಹೆಚ್ಚು ಸೋಡಿಯಂ ಸೇವನೆ ಮಾಡಿದಷ್ಟು ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಬೀರುತ್ತದೆ. ಇದರಿಂದಾಗಿ ಸ್ಟ್ರೋಕ್ ಅಥವಾ ಹಾರ್ಟ್ ಅಟ್ಯಾಕ್ ಸಂಭವಿಸುವ ಸಾಧ್ಯತೆ ಹೆಚ್ಚಾಗುತ್ತದೆ. 

ಬೇಕನ್ : 
ಒಂದು ಸಿಂಗಲ್ ಪೀಸ್ ಬೇಕನ್ ನಲ್ಲಿ ನಿಮಗೆ ದಿನಪೂರ್ತಿ ಬೇಕಾಗುವಂತಹ ಶೇ.5 ರಷ್ಟು ಸೋಡಿಯಂ ಇರುತ್ತದೆ. ಒಂದು ಸಲ ಬೈಟ್ ತೆಗೆದುಕೊಂಡರೆ ಅದು ಎಷ್ಟು ಬೇಗ ಖಾಲಿಯಾಗುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಬ್ರೇಕ್ ಫಾಸ್ಟ್ ಮಾಡಿ ಮುಗಿಸುವ ಹೊತ್ತಿದೆ ನೀವು ಒಟ್ಟು 6 ಸ್ಲೈಸ್ ಬೇಕನ್ ತಿಂದಿರುತ್ತೀರಿ. ಅಂದರೆ ಒಂದೇ ಸಲಕ್ಕೆ 30% ಸೋಡಿಯಂ ದೇಹಕ್ಕೆ ಸೇರುತ್ತದೆ. 
 

Latest Videos

click me!