ಬಿಳಿ ಈರುಳ್ಳಿಯಲ್ಲಿ ಕಂಡುಬರುವ ಪೋಷಕಾಂಶಗಳು
ಸಲ್ಫರ್ ಸಂಯುಕ್ತಗಳು ಮತ್ತು ಫ್ಲೇವೊನೈಡ್ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈರುಳ್ಳಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಅದಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ. ವಿಟಮಿನ್ ಎ, ಬಿ 6, ಬಿ-ಕಾಂಪ್ಲೆಕ್ಸ್, ಕಬ್ಬಿಣ, ಫೋಲೇಟ್ ಮತ್ತು ಪೊಟ್ಯಾಷಿಯಮ್ ಕೂಡ ಬಿಳಿ ಈರುಳ್ಳಿಯಲ್ಲಿ ಕಂಡುಬರುತ್ತವೆ. ಇದರೊಂದಿಗೆ, ಬಿಳಿ ಈರುಳ್ಳಿ ಸೇವನೆಯಿಂದ ಗೆಡ್ಡೆಗಳ ಅಪಾಯವೂ ಕಡಿಮೆಯಾಗುತ್ತದೆ.