ಪಿಜ್ಜಾದ ಒಂದು ಸ್ಲೈಸ್ ಜೀವನದ 8 ನಿಮಿಷವನ್ನು ಕಡಿಮೆ ಮಾಡುತ್ತಂತೆ

First Published | Aug 30, 2021, 5:52 PM IST

ಬದಲಾಗುತ್ತಿರುವ ಜೀವನಶೈಲಿ ಜನರ ಸರಾಸರಿ ಜೀವನದ ಮೇಲೆ ಪರಿಣಾಮ ಬೀರಿದೆ. ಜನರ ಜೀವಿತಾವಧಿ ಕಡಿಮೆಯಾಗುತ್ತಿದೆ. ವಿಶೇಷವಾಗಿ ಆಹಾರ ಮತ್ತು ಪಾನೀಯಗಳು ವ್ಯಕ್ತಿಯ ಜೀವನದ ಗುಣ ಮಟ್ಟವನ್ನು ಕಡಿಮೆ ಮಾಡಿದೆ. ಅದರಲ್ಲೂ ಜನರ ಜೀವನದ ಮೇಲೆ ಪಿಜ್ಜಾ ಅತಿದೊಡ್ಡ ಪ್ರಭಾವ ಬೀರಿದೆ. ಕೇವಲ ಒಂದು ಸ್ಲೈಸ್ ಪಿಜ್ಜಾವನ್ನು ತಿನ್ನುವುದರಿಂದ ವ್ಯಕ್ತಿಯ ಜೀವನವನ್ನು 7-8 ನಿಮಿಷಗಳಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನವೊಂದರಲ್ಲಿ ತಿಳಿದುಬಂದಿದೆ.
 

ನಮ್ಮಲ್ಲಿ ಹೆಚ್ಚಿನವರು ಪಿಜ್ಜಾವನ್ನು ಇಷ್ಟ ಪಡುತ್ತಾರೆ. ಇದು ಬೆಚ್ಚಗಿದೆ, ತುಂಬಾ ಟೇಸ್ಟಿಯಾಗಿರುತ್ತದೆ ಮತ್ತು ಪೆಪ್ಪರೋನಿಯಿಂದ ಪೈನಾಪಲ್ ವವರೆಗೆ ಇಷ್ಟವಾದ ಟಾಪಿಂಗ್ ಜೊತೆ ಪಿಜ್ಜಾ ಸಿಗುತ್ತದೆ. ಆದರೆ ಎಲ್ಲಾ ಬ್ರೆಡ್, ಚೀಸ್, ಸಾಸ್ ಮತ್ತು ಉಪ್ಪು ರುಚಿಕರವಾದ ಆಹಾರ ಜೊತೆ ಸೇರಿದರೆ ಇಷ್ಟವಾಗದೇ ಇರದು. ಆದರೆ ಇದು ದೇಹದ ಬೀರೋ ದುಷ್ಪರಿಣಾಮ ಅಷ್ಟಿಷ್ಟಲ್ಲ. ಪಿಜ್ಜಾ ತಿನ್ನುವಾಗ ನಿಜವಾಗಿಯೂ ಏನಾಗುತ್ತದೆ? ಮಿಚಿಗನ್ ವಿಶ್ವವಿದ್ಯಾನಿಲಯದ ತಜ್ಞರು ಆಹಾರ ಪದಾರ್ಥಗಳ ಬಗ್ಗೆ ಲೆಕ್ಕಾಚಾರವನ್ನು ಮಾಡಿದ್ದಾರೆ ಮತ್ತು ಜೀವನದ ಬೆಳವಣಿಗೆಯ ಮೇಲೆ ಅದರ ಪರಿಣಾಮವನ್ನು ನಿರ್ಣಯಿಸಿದ್ದಾರೆ.

ಬಾದಾಮಿ ಜೀವನದ ದಿನಗಳನ್ನು ಹೆಚ್ಚಿಸುತ್ತದೆ
ವರದಿಯ ಪ್ರಕಾರ, ಬಾದಾಮಿಯನ್ನು ತಿನ್ನುವುದು ಜೀವನವನ್ನು 26 ನಿಮಿಷಗಳಷ್ಟು ಹೆಚ್ಚಿಸುತ್ತದೆ. ಇದು ಆರೋಗ್ಯವನ್ನು ಅನೇಕ ತೊಂದರೆಗಳಿಂದ ರಕ್ಷಿಸಲು ಸಹ ಸಹಾಯ ಮಾಡುತ್ತದೆ. ಆದರೆ ಅದೇ ಸಮಯದಲ್ಲಿ, ಪೀನಟ್ ಬಟರ್ ಮತ್ತು ಜಾಮ್ ಸ್ಯಾಂಡ್‌ವಿಚ್‌ಗಳು ಸಹ ವ್ಯಕ್ತಿಯ ವಯಸ್ಸನ್ನು ಅರ್ಧ ಗಂಟೆಗಿಂತ ಹೆಚ್ಚು ಹೆಚ್ಚಿಸುತ್ತದೆ. ಆದರೆ ಪಿಜ್ಜಾ ಖಂಡಿತಾ ಜೀವಿತಾವಧಿಯನ್ನು ಕಡಿತಗೊಳಿಸಿದೆ. 
 

Tap to resize

ಬಾಳೆಹಣ್ಣು-ಟೊಮೆಟೊ ಕೂಡ ಜೀವನವನ್ನು ಹೆಚ್ಚಿಸುತ್ತದೆ
ಬಾಳೆಹಣ್ಣು ತಿನ್ನುವುದು 13.5 ನಿಮಿಷಗಳು, ಟೊಮೆಟೊ ತಿನ್ನುವುದು 3.5 ನಿಮಿಷಗಳು, ಆವಕಾಡೊ ತಿನ್ನುವುದು 2.8 ನಿಮಿಷಗಳು ಜೀವಿತಾವಧಿ ಹೆಚ್ಚಾಗುತ್ತದೆ. ಇದರ ಹೊರತಾಗಿ, ಸಾಲ್ಮನ್ ಮೀನುಗಳನ್ನು ತಿನ್ನುವುದರಿಂದ 16 ನಿಮಿಷಗಳ ಜೀವಿತಾವಧಿಯು ಹೆಚ್ಚಾಗುತ್ತದೆ, ಆದರೆ ಪರಿಸರದ ದೃಷ್ಟಿಯಿಂದ, ಕಡಿಮೆ ತಿನ್ನುವುದು ಉತ್ತಮ. ಹೆಚ್ಚು ತಿಂದರೆ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. 

ತ್ವರಿತ ಆಹಾರ-ತಂಪು ಪಾನೀಯಗಳು ವಯಸ್ಸನ್ನು ಕಡಿಮೆ ಮಾಡುತ್ತದೆ
ಒಂದು ಸ್ಲೈಸ್ ಪಿಜ್ಜಾ ಜೀವನದ 8 ನಿಮಿಷಗಳು ಮತ್ತು ತಂಪು ಪಾನೀಯವನ್ನು ಸೇವಿಸುವುದರಿಂದ ಜೀವನದ 12.04 ನಿಮಿಷ ಕಡಿಮೆಯಾಗುತ್ತವೆ. ಇದಲ್ಲದೇ, ಬರ್ಗರ್‌ಗಳು, ಸಂಸ್ಕರಿಸಿದ ಮಾಂಸವು ಜೀವಿತಾವಧಿಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಆದ್ದರಿಂದ, ಅವುಗಳನ್ನು ತಿನ್ನುವುದನ್ನು ತಪ್ಪಿಸಬೇಕು.

ನೀವು ಪೆಪ್ಪರೋನಿಯಂತಹ ಸಾಕಷ್ಟು ಮಾಂಸಗಳೊಂದಿಗೆ ಪಿಜ್ಜಾವನ್ನು ಸೇವಿಸಿದರೆ ಇದರಿಂದ ಬೊಜ್ಜು, ಕೆಲವು ಕ್ಯಾನ್ಸರ್  ಮತ್ತು ಹೃದ್ರೋಗ ಸಮಸ್ಯೆಗಳು ಕಾಡುತ್ತವೆ. ಈ ಸಂಸ್ಕರಿಸಿದ ಮಾಂಸಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು, ವಿಶೇಷವಾಗಿ ಮಾಂಸದ ಮೂಲದ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.

ಪಿಜ್ಜಾದಲ್ಲಿ ಸೋಡಿಯಂ ಮಟ್ಟ ಹೆಚ್ಚಾಗಿರುತ್ತದೆ. ಇಂತಹ ಪಿಜ್ಜಾವನ್ನು ನೀವು ಪ್ರತಿದಿನ ಸೇವಿಸಿದರೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ನೀವು ಒಂದೇ ಸಮಯದಲ್ಲಿ ಇಡೀ ಪಿಜ್ಜಾವನ್ನು ಸೇವಿಸಿದರೆ, ದೈನಂದಿನ ಸೋಡಿಯಂ ಸೇವನೆಯನ್ನು ಅತಿಯಾಗಿ ಮಾಡುತ್ತಿದ್ದೀರಿ ಎಂದು ಅರ್ಥ. ಇದರಿಂದ ರಕ್ತದ ಒತ್ತಡ ಅಧಿಕವಾಗುವ ಸಾಧ್ಯತೆ ಇದೆ. ಇದರಿಂದ ಹೃದಯ ಸಮಸ್ಯೆ ಕಾಡುತ್ತದೆ. 

ಹಾಟ್ ಡಾಗ್ ಕೂಡ ತುಂಬಾ ಅಪಾಯಕಾರಿ
ನೇಚರ್ ಫುಡ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಆರೋಗ್ಯಕರ ಜೀವನ ಮತ್ತು ಜೀವಿತಾವಧಿಯನ್ನು ಆಧರಿಸಿದೆ. ಜೀವನದ ದಿನಗಳಲ್ಲಿ ಆಹಾರ ಮತ್ತು ಪಾನೀಯದ ಪರಿಣಾಮವನ್ನು ತಿಳಿಯಲು, ವಿಜ್ಞಾನಿಗಳು ಅನೇಕ ರೀತಿಯ ಆಹಾರ ಪದಾರ್ಥಗಳ ಮೇಲೆ ಈ ಸಂಶೋಧನೆ ಮಾಡಿದರು. ಇದರಿಂದ ಶಾಕಿಂಗ್ ಫಲಿತಾಂಶ ಪ್ರಕಟವಾಗಿದೆ. 

ಅಮೆರಿಕದಲ್ಲಿ ಸಂಸ್ಕರಿಸಿದ ಮಾಂಸವನ್ನು ತಿನ್ನುವ ಜನರ ಸರಾಸರಿ ವಯಸ್ಸು 0.45 ನಿಮಿಷಗಳಷ್ಟು ಕಡಿಮೆಯಾಗುತ್ತಿದೆ ಎಂದು ಈ ಅಧ್ಯಯನದ ಸಂಶೋಧನೆಗಳು ಹೇಳುತ್ತವೆ. ಅಂದರೆ, ಹಾಟ್ ಡಾಗ್ ಸ್ಯಾಂಡ್‌ವಿಚ್‌ನಲ್ಲಿ 61 ಗ್ರಾಂ ಸಂಸ್ಕರಿಸಿದ ಮಾಂಸವಿದ್ದರೆ, ಅದನ್ನು ತಿನ್ನುವುದರಿಂದ ವ್ಯಕ್ತಿಯ ಜೀವನವನ್ನು 27 ನಿಮಿಷಗಳಷ್ಟು ಕಡಿಮೆ ಮಾಡಬಹುದು. ಆದುದರಿಂದ ಸಾಧ್ಯವಾದಷ್ಟು ಅವುಗಳನ್ನು ತಿನ್ನುವುದನ್ನು ಅವಾಯ್ಡ್ ಮಾಡಿ. 

ಸಸ್ಯ ಆಧಾರಿತ ಆಹಾರಗಳು ಉತ್ತಮ
ಸಸ್ಯಗಳಿಂದ ಬರುವ ಆಹಾರಗಳು ಅತ್ಯುತ್ತಮವಾಗಿವೆ. ಕೆಲವು ತಜ್ಞರು ಕೂಡ ಸಸ್ಯಗಳು ಮತ್ತು ಪ್ರಾಣಿಗಳಿಂದ ಕಂಡುಬರುವ ವಸ್ತುಗಳ ಪ್ರೋಟೀನ್ ಅನ್ನು ಪ್ರಾಣಿ ಆಧಾರಿತ ಪ್ರೋಟೀನ್‌ಗಿಂತ ಉತ್ತಮವೆಂದು ವಿವರಿಸಿದ್ದಾರೆ. ಇವುಗಳ ನಿಯಮಿತ ಸೇವನೆಯಿಂದ ಹೆಚ್ಚು ಕಾಲ ಬದುಕಲು ಸಾಧ್ಯವಾಗುತ್ತದೆ. ಜೊತೆಗೆ ಆರೋಗ್ಯದಿಂದ ಇರಲು ಸಹ ಇದು ಸಹಕಾರಿ ಎನ್ನಲಾಗಿದೆ. 

Latest Videos

click me!