ಅಪ್ಪಂದಿರಿಗೆ ಕಾಂಗರೂ ಆರೈಕೆ ಟಿಪ್ಸ್: ಮಗುವನ್ನು ಹೀಗ್ ಹಿಡಿಯಿರಿ!

First Published | Aug 5, 2021, 5:41 PM IST

ತಾಯಂದಿರು ಮಾತ್ರ ಶಿಶುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದ ದಿನಗಳು ಕಳೆದು ಹೋಗಿವೆ. ಈಗ, ತಂದೆ ಸಮಾನವಾಗಿ ಮಗುವಿನ ಪೋಷಣೆ ಮತ್ತು ಆರೈಕೆಯಲ್ಲಿ ಭಾಗವಹಿಸುತ್ತಿದ್ದಾರೆ. ನವಜಾತ ಶಿಶುವಿನ ವಿಷಯಕ್ಕೆ ಬಂದಾಗ ಹೊಸ ಅಪ್ಪಂದಿರು ತಮ್ಮ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿದ್ದಾರೆ. ಅವರು ಮಗುವಿನ ಪೂರ್ವ ಮತ್ತು ಪ್ರಸವದ ನಂತರದ ಪ್ರತಿಯೊಂದೂ ವಿಷಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಶಿಶುಗಳೊಂದಿಗಿನ ಬಾಂಧವ್ಯವನ್ನು ಬಲಪಡಿಸುವ ಸಲುವಾಗಿ ಅವರು ಶಿಶುಗಳಿಗೆ ಕಾಂಗರೂ ಆರೈಕೆಯನ್ನು ಸಹ ನೀಡುತ್ತಿದ್ದಾರೆ.

ತಮ್ಮ ಹಿಂದಿನ ಪೀಳಿಗೆಗೆ ಹೋಲಿಸಿದಾಗ ಅಪ್ಪಂದಿರು ಈಗ ವಿಭಿನ್ನವಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಕಾಲದ ತಂದೆಯರಿಗೆ ಹೋಲಿಸಿದರೆ ಈಗಿನ ತಂದೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ಅಪ್ಪಂದಿರು ಮನೆಯ ನಿರ್ವಹಣೆಯ ಸಾಂಪ್ರದಾಯಿಕ ಪರಿಕಲ್ಪನೆಯನ್ನು ಬದಲಾಯಿಸಿ, ತಮ್ಮಿಂದಾಗುವ ಎಲ್ಲಾ ಕಾರ್ಯಗಳನ್ನು ಮಾಡುತ್ತಾರೆ. 

ಅಪ್ಪಂದಿರಿಗೆ ಕಾಂಗರೂ ಆರೈಕೆ ಸಲಹೆಗಳು
ಕಾಂಗರೂ ಆರೈಕೆಯಾದ ಚರ್ಮದಿಂದ ಚರ್ಮದ ಸಂಪರ್ಕ ಕೇವಲ ತಾಯಂದಿರಿಗೆ ಸೀಮಿತವಾಗಿಲ್ಲ. ಈಗ, ಅಪ್ಪಂದಿರು ಕೂಡ ತಮ್ಮ ಮಕ್ಕಳ ಸಲುವಾಗಿ ಅದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಮಗುವಿನೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕವನ್ನು ಮಾಡುವಾಗ ಅಪ್ಪಂದಿರು ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.

Tap to resize

ಮಗುವಿಗೆ ಕಾಂಗರೂ ಆರೈಕೆಯನ್ನು ಒದಗಿಸಲು, ಸ್ತಬ್ಧ ಮತ್ತು ಆರಾಮದಾಯಕ ಸ್ಥಳ ಆರಿಸಿಕೊಳ್ಳಿ ಮತ್ತು ಮಗುವನ್ನು ನಿಮ್ಮ ಬರಿ ಎದೆಯ ಮೇಲೆ ಇರಿಸಿ, ಸಾಕಷ್ಟು ಚರ್ಮದಿಂದ ಚರ್ಮದ ಸಂಪರ್ಕವನ್ನು ಪ್ರಾರಂಭಿಸಿ. ಇದನ್ನು ಅಭ್ಯಾಸ ಮಾಡುವಾಗ ಮಗುವನ್ನು ಜಾಗೃತೆಯಿಂದ ನೋಡಿಕೊಳ್ಳಲು ಮರೆಯಬೇಡಿ.

ಕಾಂಗರೂ ಆರೈಕೆಯನ್ನು ಜನನದ ನಂತರದ ಮೊದಲ ಕೆಲವು ವಾರಗಳಲ್ಲಿ ಅಥವಾ ಪೋಷಕರು ಅಗತ್ಯವೆಂದು ಭಾವಿಸಿದಾಗಲೂ ಅಭ್ಯಾಸ ಮಾಡಬಹುದು. ತಂದೆಯಾಗಿ, ಮಗುವಿನ ಕರ್ತವ್ಯಗಳಿಗೆ ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡುವ ಮೂಲಕ ಇದನ್ನು ಮಾಡಬಹುದು. ಇದು ಮಗುವಿನ ಬಗ್ಗೆ ಕಡಿಮೆ ಆತಂಕವನ್ನು ಅನುಭವಿಸಲು ತಂದೆಗಳಿಗೆ ಸಹಾಯ ಮಾಡುತ್ತದೆ. 

ಮಗುವಿನ ಹಸಿವಿನ ಸೂಚನೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ, ನಿಮ್ಮನ್ನು ಶಾಂತಗೊಳಿಸುತ್ತದೆ ಮತ್ತು ಪ್ರಸವ ನಂತರದ ಕಷ್ಟಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಸಹಾಯ ಮಾಡುತ್ತದೆ. ಮಗುವಿಗೆ ಹಾಯಾಗಿರಲು, ಅವರಿಗೆ ಸರಿಯಾಗಿ ನಿದ್ದೆ ಮಾಡಲು ಮತ್ತು ಸಿರ್ಕಾಡಿಯನ್ ಸೈಕಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮಗುವನ್ನು ಹಿಡಿದುಕೊಳ್ಳುವಾಗ ನೆನಪಿನಲ್ಲಿಡಬೇಕಾದ ವಿಷಯಗಳು
ಮಗುವನ್ನು ಹಿಡಿದಿಟ್ಟುಕೊಳ್ಳುವಾಗ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸುವುದನ್ನು ತಪ್ಪಿಸಿ. ನೀವು ಜ್ವರ ಮತ್ತು ಶೀತದಿಂದ ಬಳಲುತ್ತಿದ್ದರೆ,  ಸುಧಾರಿಸುವವರೆಗೂ ಕಾಂಗರೂ ಆರೈಕೆಯನ್ನು ತಪ್ಪಿಸಿ. 

ಮಗುವಿನೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕಿಸುವಾಗ ಸುಗಂಧ ದ್ರವ್ಯ ಅಥವಾ ಡಿಯೋಡರೆಂಟ್ ಬಳಸಬೇಡಿ. ಏಕೆಂದರೆ ಅದು ಅವರ ಸೂಕ್ಷ್ಮ ಚರ್ಮವನ್ನು ಕೆರಳಿಸಬಹುದು. ಚರ್ಮವು ದದ್ದುಗಳು ಮತ್ತು ಅಲರ್ಜಿಗಳಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಕಾಂಗರೂ ಆರೈಕೆಯ ಮೊದಲು ಧೂಮಪಾನ ಅಥವಾ ಮದ್ಯಪಾನ ಮಾಡಬೇಡಿ.

ತಾಯಿ ಮಗುವಿಗೆ ಎದೆಹಾಲುಣಿಸುವುದರಿಂದ ಆಗುವ ಹಲವು ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ತಂದೆ ಮಗುವಿಗೆ ಸ್ನಾನ ಮಾಡಿಸಲು ಸಹಾಯ ಮಾಡುವುದು, ಡೈಪರ್ ಬದಲಾಯಿಸುವುದು, ಮಸಾಜ್ ಮಾಡುವುದು ಮತ್ತು ಆಹಾರ ಸೇವಿಸಿದ ನಂತರ ತಮ್ಮ ಪುಟ್ಟ ಮಕ್ಕಳಿಗೆ ತೇಗು ಬರುವಂತೆ ಮಾಡುವ  ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು. 

ಪೋಷಕರು ತಮ್ಮ ಮಗುವಿನ ಉತ್ತಮ ಕ್ಷಣಗಳನ್ನು ದಾಖಲಿಸುವ ಮೂಲಕ ನೆನಪುಗಳನ್ನು ಸೃಷ್ಟಿಸುತ್ತಿದ್ದಾರೆ. ಅವರು ಬ್ಲಾಗ್ ಮಾಡುತ್ತಾರೆ ಮತ್ತು ಪೋಷಕರ ಬಗ್ಗೆ ವಿಷಯವನ್ನು ರಚಿಸುತ್ತಾರೆ, ಶಿಶುಗಳಿಗೆ ಪಾಕವಿಧಾನಗಳು, ಅಥವಾ ಮಗುವಿನ ಉತ್ಪನ್ನ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಾರೆ. ಅಂತ ವಿಷಯಗಳ ಬಗ್ಗೆ ತಿಳಿದುಕೊಳ್ಳಿ

ತಂದೆಯರು ಮಕ್ಕಳ ಲಸಿಕೆಯನ್ನು ನೋಡಿಕೊಳ್ಳಬೇಕು ಮತ್ತು ಲಸಿಕೆ-ತಡೆಯಬಹುದಾದ ರೋಗಗಳಿಂದ ಅವರು ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. 

Latest Videos

click me!