ನರ್ಸ್‌ಗಳಿಗೆ ಹೊಸ ಹೆಸರು ನೀಡಿದ ಕೇಂದ್ರ ಸಚಿವ, ನಮ್ಮಿಂದಲೂ ವಂದನೆ!

First Published May 12, 2020, 9:03 PM IST

ನವದೆಹಲಿ(ಮೇ 12) ವಿಶ್ವ ದಾದಿಯರ ದಿನ. ಈ ದಿನಕ್ಕೆ ಸಂಬಂಧಿಸಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾತನಾಡಿದ್ದಾರೆ. ಕೊರೋನಾದಂತಹ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಲಕ್ಷಾಂತರ ನರ್ಸ್ ಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ದಾದಿಯರನ್ನು ಶಕ್ತಿಶಾಲಿ ಆಧಾರ ಸ್ತಂಭಗಳು ಎಂದು ಹರ್ಷವರ್ಧನ್ ಕರೆದಿದ್ದಾರೆ. ದಾದಿಯರು ಮತ್ತು ಇತರ ಆರೋಗ್ಯ ಸಿಬ್ಬಂದಿ ಇಲ್ಲವಾಗಿದ್ದರೆ ಕೊರೋನಾದಂತಹ ಮಹಾಮಾರಿ ವಿರುದ್ಧ ಹೋರಾಟ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
undefined
ಬೇರೆಯವರ ಆರೋಗ್ಯ ಕಾಪಾಡುವುದು ಮಾತ್ರವಲ್ಲದೇ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಲು ಕೇಂದ್ರ ಸಚಿವರು ಮರೆಯಲಿಲ್ಲ.
undefined
ಕೊರೋನಾ ವಿರುದ್ಧದ ಸಮರದಲ್ಲಿ ಜೀವ ಸವೆಸಿದ ಪುಣೆಯ ಸ್ಟಾಫ್ ನರ್ಸ್ ಜ್ಯೋತಿ ವಿಠ್ಠಲ್ ರಕ್ಷಾ, ಜಿಲ್ ಮಿಲ್ ಇಎಸ್‌ ಐ ಆಸ್ಪತ್ರೆಯ ಅನಿತಾ ಗೋವಿಂದರಾವ್ ರಾಥೋಡ್ ಅವರನ್ನು ಸ್ಮರಿಸುತ್ತೇನೆ ಎಂದರು.
undefined
ಎಲ್ಲರೂ ಸರ್ಕಾರ ನೀಡಿದ ಆದೇಶಗಳನ್ನು ಪಾಲನೆ ಮಾಡಬೇಕು, ಕೊರೋನಾ ವಿರುದ್ಧದ ಹೋರಾಟ ಮುಂದುವರಿಸಲೇಬೇಕು ಎಂದರು.
undefined
ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ಅದು ಜಾಮೀನು ರಹಿತ ಅಪರಾಧ ಎಂಬ ಎಚ್ಚರಿಕೆ ಮತ್ತೆ ನೀಡಿದರು.
undefined
ಆರೋಗ್ಯ ಸಿಬ್ಬಂದಿಯ ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರ ಅವರಿಗೆ ವಿಮಾ ಸೌಲಭ್ಯ ಒದಗಿಸಿದೆ.
undefined
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ನಲ್ಲಿ ಆರೋಗ್ಯ ಸಿಬ್ಬಂದಿಗೆ 50 ಲಕ್ಷ ರೂ. ವಿಮೆ ನೀಡಲಾಗಿದೆ.
undefined
'ದೆಹಲಿಯ ಏಮ್ಸ್ ಆಸ್ಪತ್ರೆ ವೈದ್ಯ ಸಿಬ್ಬಂದಿಗೆ ನೀಡಿರುವ ಸೌಲಭ್ಯ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
undefined
ದಾದಿಯರ ದಿನದಂದೂ ಅವರ ಕೆಲಸ ಸ್ಮರಿಸಲೇಬೇಕು.
undefined
click me!