ರೀಹೈಡ್ರೇಷನ್‌ಬೇಸಿಗೆಯಲ್ಲಿ ಎಳನೀರು ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್‌ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾಡಿಯನ್ನು ರೀಹೈಡ್ರೇಟ್ ಮಾಡುತ್ತದೆ.
ಸಕ್ಕರೆಯಿಂದ ತುಂಬಿರುವ ಎನರ್ಜಿ ಡ್ರಿಂಕ್ಸ್‌ಗೆ ಪರ್ಯಾಯವಾದ ನೈಸರ್ಗಿಕ ಪಾನೀಯ ಇದು. ಜಿಮ್ ಸೆಷನ್‌ನಂತರ ಕುಡಿಯಲು ಬೆಸ್ಟ್ ಗೋ-ಟು ಡ್ರಿಂಕ್ ಅಂದರೆ ಎಳನೀರು.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಎಳನೀರಿನಲ್ಲಿರುವ ಪೊಟ್ಯಾಷಿಯಮ್ ಅಂಶ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಸಹಕರಿಸುತ್ತದೆ.
ಪೊಟ್ಯಾಷಿಯಮ್ ಮತ್ತು ಮ್ಯಾಂಗನೀಸ್ ಸಮೃದ್ಧ ಟೆಂಡರ್ ಕೋಕನೆಟ್ ವಾಟರ್‌ನೈಸರ್ಗಿಕವಾಗಿ ಕಡಿಮೆ ಕ್ಯಾಲೊರಿ ಹೊಂದಿದ್ದು,ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ಮೆಟಾಬಲಿಸಂ ಅನ್ನು ಉತ್ತಮಗೊಳಿಸುತ್ತದೆ. ಇದಲ್ಲದೇ, ಟಾಕ್ಸಿನ್ ಹೊರಹಾಕಲು ಹೆಲ್ಪ್ ಮಾಡುವುದರೊಂದಿಗೆ, ದೇಹದಲ್ಲಿ ನೀರಿನ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಹ್ಯಾಂಗ್ ಓವರ್‌ನಿಂದ ಬಳಲುತ್ತಿದ್ದರೆ ಎಳನೀರು ಬೆಸ್ಟ್ ರೆಮಿಡಿ. ಇದರಲ್ಲಿ ಎಲೆಕ್ಟ್ರೊಲೇಟ್ಸ್ ದೇಹವನ್ನು ರೀಹೈಡ್ರೇಟ್ ಮಾಡುತ್ತದೆ ಮತ್ತು ಆಂಟಿಆಕ್ಸಿಡೆಂಟ್‌ಹೊಟ್ಟೆಯಲ್ಲಿನ ಆ್ಯಸಿಡಿಟಿ ಕಡಿಮೆ ಮಾಡಬಲ್ಲದು.
ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣ.
ಖನಿಜಗಳು ಮತ್ತು ಪೊಟ್ಯಾಸಿಯಮ್ ಅಂಶಗಳನ್ನು ಹೊಂದಿರುವ ಈ ಪಾನೀಯ ದೇಹದ ವಿಷ ಅಂಶಗಳನ್ನು ಹೊರ ಹಾಕುತ್ತದೆ.
ಕೊತ್ತಂಬರಿ ಜ್ಯೂಸ್ ಜೊತೆ ಎಳನೀರು ನಿದ್ರೆಯನ್ನು ಹೆಚ್ಚಿಸುತ್ತದೆ.
ಮೂತ್ರಪಿಂಡ ಮತ್ತು ಹೊಟ್ಟೆಉರಿಯೂತದಿಂದ ಬಳಲುತ್ತಿರುವವರಿಗೆಇದು ಬೆಸ್ಟ್ ಪಾನೀಯ. ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಜೀರ್ಣ ಮತ್ತು ಮಲಬದ್ಧತೆ ಇರುವವರು ಎಳನೀರನ್ನು ಕುಡಿದಷ್ಟೂ ಒಳಿತು.
ಟೆಂಡರ್ ಕೋಕನೆಟ್ ವಾಟರ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮ್ಯಾಂಗನೀಸ್, ಪೊಟ್ಯಾಷಿಯಮ್ ಮತ್ತು ಕ್ಯಾಲ್ಸಿಯಂ ಅಂಶವಿರುವ ಇದು ಹೃದಯದ ಆರೋಗ್ಯವನ್ನು ಕಾಪಾಡಬಲ್ಲದು.