ಶುಂಠಿ ಟೀ - ಶೀತ ಕೆಮ್ಮಿನಿಂದ ಹಿಡಿದು ಮುಟ್ಟಿನ ನೋವಿಗೂ ಬೆಸ್ಟ್‌ ಮನೆ ಮದ್ದು

First Published | Aug 25, 2020, 7:37 PM IST

ಅನೇಕ  ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಶುಂಠಿ ಟೀ ಒಂದು ಬೆಸ್ಟ್‌ #HomeRemedy. ಶೀತ ಮತ್ತು ಕೆಮ್ಮನ್ನು ಓಡಿಸಲು ಉತ್ತಮ ಮಾರ್ಗವೆಂದರೆ ಬಿಸಿ ಶುಂಠಿ ಚಹಾ. ವಿಟಮಿನ್ ಸಿ, ಮೆಗ್ನೀಷಿಯಮ್ ಮತ್ತು ಇತರ ಖನಿಜಗಳು ಸಮೃದ್ಧವಾಗಿರುವ ಶುಂಠಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಒಂದು ಕಪ್ ಜಿಂಜರ್‌ ಟೀಯ ಹೆಲ್ತ್‌ ಬೆನಿಫಿಟ್‌ ಇಲ್ಲಿದೆ.

ಶುಂಠಿ ಟೀ ಶೀತ ಕೆಮ್ಮಿನಿಂದ ಹಿಡಿದು, ಮುಟ್ಟಿನ ನೋವಿನವರೆಗೆ ಅನೇಕ ಕಾಯಿಲೆಗಳಿಗೆ ಬೆಸ್ಟ್‌ ಮನೆ ಮದ್ದು.
undefined
ವಾಕರಿಕೆ ನಿವಾರಿಸಲು ಜಿಂಜರ್‌ ಟೀ ತುಂಬಾ ಪರಿಣಾಮಕಾರಿ. ದೂರದೂರಿಗೆ ಪಯಣಿಸುವಾಗ ಮೋಷನ್‌ ಸಿಕ್ನೆಸ್‌ನಿಂದ ಆಗುವ ವಾಂತಿಯನ್ನು ಕೇವಲ ಒಂದು ಕಪ್ಚಹಾ ತಡೆಯಬಲ್ಲದು..
undefined

Latest Videos


ಜೀರ್ಣಕ್ರಿಯೆ ಮತ್ತು ಹೊಟ್ಟೆಸಮಸ್ಯೆಯಿಂದ ಬಳಲುತ್ತಿದ್ದರೆ, ಶುಂಠಿ ಚಹಾ ಇದಕ್ಕೆ ರೆಮಿಡಿ. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಆಹಾರದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಬೆಸ್ಟ್‌.
undefined
ಪ್ರತಿ ಊಟದ ನಂತರದ ಹೊಟ್ಟೆಉಬ್ಬರಿಸುವಿಕೆಯನ್ನು ಒಂದು ಕಪ್‌ ಶುಂಠಿ ಚಹಾ ನಿವಾರಿಸುತ್ತದೆ.
undefined
ದೀರ್ಘಕಾಲದವರೆಗೆ ಕೀಲು ನೋವಿಂದ ಬಳಲುತ್ತಿರುವವರಿಗೆ ಶುಂಠಿ ಚಹಾದಿಂದ ಹೆಲ್ಪ್‌ ಆಗುತ್ತದೆ. ಚಹಾ ಚರಟವನ್ನು ನೋವಿನ ಜಾಗಗಳಿಗೆ ಸಹ ಹಚ್ಚಬಹುದು.
undefined
ಉಸಿರಾಟದ ಸಮಸ್ಯೆಗೆ ಪರಿಹಾರ. ನೆಗಡಿಯಿಂದ ಉಂಟಾಗುವ congestion ನಿವಾರಿಸಲು ಶುಂಠಿ ಚಹಾ ಸಹಾಯ ಮಾಡುತ್ತದೆ. ಅಲರ್ಜಿಗೆ ಸಂಬಂಧಿಸಿದ ಉಸಿರಾಟದ ಖಾಯಿಲೆಗಳಿಗೆ ಈ ಟೀಯಲ್ಲಿರುವ ಅಂಶಗಳು ಉತ್ತಮ.
undefined
ರಕ್ತ ಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಜೀವಸತ್ವಗಳು, ಖನಿಜಗಳು ಮತ್ತು ಅಮೈನೋ ಆಸಿಡ್‌ ಸಮೃದ್ಧವಾಗಿರುವ ಜಿಂಜರ್‌ ಟೀ ರಕ್ತ ಚಲನೆಯನ್ನು ಪುನಾ ಸ್ಥಾಪಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ.
undefined
ಇದು ಹೃದಯ ಸಂಬಂಧಿ ಸಮಸ್ಯೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗದಂತೆ ಇದು ತಡೆಯುವುದರ ಜೊತೆಗೆ ಹೃದಯಾಘಾತ ಮತ್ತು ಪಾರ್ಶ್ವವಾಯು ರಿಸ್ಕ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
undefined
ಋತು ಚಕ್ರದ ನೋವಿಗೆ ಬೆಸ್ಟ್‌. ಮುಟ್ಟಿನ ಸಮಯದ ಕ್ರ್ಯಾಂಪ್ಸ್‌ಗೆ ಉತ್ತಮ ಪರಿಹಾರ.
undefined
ಹೊಟ್ಟೆಯ ಕೆಳಭಾಗದಲ್ಲಿ ಬೆಚ್ಚಗಿನ ಶುಂಠಿ ಚಹಾದಲ್ಲಿ ನೆನೆಸಿದ ಟವೆಲ್ ಇರಿಸಿದರೆ ಸ್ನಾಯುಗಳನ್ನು ಸಡಿಲಗೊಳಿಸುವುದಲ್ಲದೆ, ನೋವನ್ನು ನಿವಾರಿಸುತ್ತದೆ. ಅದೇ ಸಮಯದಲ್ಲಿ, ಜೇನುತುಪ್ಪದೊಂದಿಗೆ ಒಂದು ಕಪ್ ಶುಂಠಿ ಚಹಾ ಕುಡಿಯುವುದರಿಂದ ಋತು ಚಕ್ರದ ಹೊಟ್ಟೆ ನೋವಿಗೆ ಪರಿಹಾರ ಸಿಗುತ್ತದೆ.
undefined
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಶುಂಠಿ ಚಹಾವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮನಸ್ಸಿನ ವಿಶ್ರಾಂತಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ.
undefined
ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
undefined
click me!