ಡಾರ್ಕ್ ಚಾಕೊಲೇಟ್ ಕ್ರೇವಿಂಗ್ ಕಡಿಮೆ ಗೊಳಿಸಿ ಹಸಿವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿವಿಧ ಅಧ್ಯಯನಗಳು ತೋರಿಸಿವೆ. ಈ ಮೂಲಕ ತೂಕ ಇಳಿಸಲು ಸಹಾಯವಾಗುತ್ತದೆ.
ಆದರೆ ಮಿಲ್ಕ್ ಚಾಕೊಲೇಟ್‌ಗಳು ಸಹ ದೇಹದ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?
ಬೆಳಿಗ್ಗೆ ಸಮಯದಲ್ಲಿ ಹಾಲಿನ ಚಾಕೊಲೇಟ್ ತಿನ್ನುವುದು ತೂಕ ಇಳಿಸುವ ಪ್ರಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಇದಲ್ಲದೆ, ಮೆನೊಪಾಸ್ ನಂತರದ ಮಹಿಳೆಯರ ಗುಂಪಿನ ಮೇಲೆ ನಡೆಸಿದ ಅಧ್ಯಯನವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿರ್ವಹಿಸಲು ವೈಟ್ ಚಾಕೋಲೇಟ್ ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ.
ಬೆಳಿಗ್ಗೆ ಅಥವಾ ರಾತ್ರಿ ಬಿಳಿ ಚಾಕೊಲೇಟ್ ತಿನ್ನುವುದು ತೂಕ ಹೆಚ್ಚಿಸಲು ಕಾರಣವಾಗಲಿಲ್ಲ.
ಬೆಳಿಗ್ಗೆ ಅಥವಾ ಸಂಜೆ ಚಾಕೊಲೇಟ್ ತಿನ್ನುವುದು ಹಸಿವು, ನಿದ್ರೆ, ಮೈಕ್ರೋಬಯೋಟಾ ಸಂಯೋಜನೆ (ಕರುಳಿನ ಆರೋಗ್ಯ) ಮತ್ತು ಮುಂತಾದವುಗಳಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ.
ಬೆಳಿಗ್ಗೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾಕೊಲೇಟ್ ಸೇವಿಸುವುದರಿಂದ ಫ್ಯಾಡ್ ಬರ್ನ್ ಮಾಡುವುದರ ಜೊತೆಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಂಜೆ ರಾತ್ರಿ ಚಾಕೊಲೇಟ್ ಸೇವನೆ ಮರುದಿನ ಬೆಳಿಗ್ಗೆ ವಿಶ್ರಾಂತಿ ಮತ್ತು ವ್ಯಾಯಾಮದ ಮೆಟಾಬಲಾಸಿಮ್ ಬದಲಾಯಿಸುತ್ತದೆ.
ಕ್ಯಾಲೊರಿ ಸೇವನೆಯನ್ನು ಹೆಚ್ಚಿಸಿದರೂ ತೂಕ ಹೆಚ್ಚಾಗಲಿಲ್ಲ ಎಂದು ಅಧ್ಯಯನವು ತಿಳಿಸಿದೆ. ಬದಲಿಗೆ ಹಸಿವು ಮತ್ತು ಸ್ವೀಟ್ ಕ್ರೇವಿಂಗ್ ಅಲ್ಲಿ ಇಳಿಕೆ ಕಂಡಿದೆ.
ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸ್ವಲ್ಪ ಬಿಳಿ ಚಾಕೊಲೇಟ್ ಅನ್ನು ಎಂಜಾಯ್ ಮಾಡಿ.ಆದರೆ ಯಾವಾಗಲೂ ಚಾಕೊಲೇಟ್ ಸೇವನೆ ಮಿತವಾಗಿರುವುದು ಮುಖ್ಯ ಎಂಬುದನ್ನು ನೆನಪಿಡಿ.