ಸ್ತನಗಳಲ್ಲಿ ಈ ರೀತಿಯ ನೋವು ಕಂಡು ಬಂದರೆ ಕ್ಯಾನ್ಸರ್ ಲಕ್ಷಣವೇ?

First Published | Sep 20, 2021, 4:17 PM IST

ಕ್ಯಾನ್ಸರ್ ಇತ್ತಿಚಿನ ದಿನಗಳಲ್ಲಿ ಜನರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಹೆಚ್ಚಿನ ಸ್ತನ ಗಡ್ಡೆಗಳು ನಿರುಪದ್ರವಿಯಾಗಿವೆ. ಹೆಚ್ಚಿನ ಮಹಿಳೆಯರು ಸ್ತನದ ಸ್ವಯಂ ಪರೀಕ್ಷೆ ನಡೆಸುವಾಗ ಸ್ತನಗಡ್ಡೆಯನ್ನು ಗಮನಿಸಬಹುದು. ಆದಾಗ್ಯೂ, ಎಲ್ಲಾ ಸ್ತನ ಗಡ್ಡೆಗಳು ಕ್ಯಾನ್ಸರ್ ಗೆ ಸಂಬಂಧಿಸಿಲ್ಲ.
 

ಸ್ತನ ಗಡ್ಡೆಗಳು ಕ್ಯಾನ್ಸರ್ ಎಂದು ಸಹ ಹೇಳಲಾಗುತ್ತದೆ
ಆರಂಭಿಕ ಹಂತಗಳಲ್ಲಿ ಕ್ಯಾನ್ಸರ್ ಸ್ತನ ಗಡ್ಡೆಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಬಹುದು. ಆದಾಗ್ಯೂ, ಸಂಪೂರ್ಣ ಸ್ತನ ಪರೀಕ್ಷೆಯೊಂದಿಗೆ, ಇದನ್ನು ಪತ್ತೆ ಹಚ್ಚಬಹುದು. ಅದನ್ನು ಹೇಗೆ ಪತ್ತೆ ಹಚ್ಚಬಹುದು ಅನ್ನೋ ಯೋಚನೆ ಇದ್ದರೆ, ಬಿಡಿ. ಇಲ್ಲಿದೆ ನಿಮಗೆ ಸಹಾಯ ಮಾಡುವ ಸುದ್ದಿ.. 

ಕ್ಯಾನ್ಸರ್ ವರ್ಸಸ್ ಕ್ಯಾನ್ಸರ್ ಅಲ್ಲದ ಸ್ತನ ಗಡ್ಡೆಗಳು: ವ್ಯತ್ಯಾಸ
ಕ್ಯಾನ್ಸರ್ ಮತ್ತು ಕ್ಯಾನ್ಸರ್ ಅಲ್ಲದ, ನಿರುಪದ್ರವಿ ಸ್ತನ ಗಡ್ಡೆಯ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸುವುದು ಎಂಬುದು ಇಲ್ಲಿದೆ.

Tap to resize

ಕ್ಯಾನ್ಸರ್ ಬ್ರೆಸ್ಟ್ ಲಂಪ್ಸ್ ಗಟ್ಟಿಯಾಗಿರಬಹುದು
ಕ್ಯಾನ್ಸರ್ ಬ್ರೆಸ್ಟ್ ಲಂಪ್ಸ್ ಮುಟ್ಟಲು ಗಟ್ಟಿಯಾಗಿರಬಹುದು ಮತ್ತು ಸಾಮಾನ್ಯವಾಗಿ ಸ್ತನದ ಮೇಲ್ಭಾಗ, ಹೊರ ಭಾಗದಲ್ಲಿ ನೆಲೆಗೊಂಡಿವೆ. 

ಅದು ಚಲಿಸುವುದಿಲ್ಲ
ಗಟ್ಟಿಯಾಗಿರುವುದಲ್ಲದೆ, ಸ್ತನದಲ್ಲಿನ ಇತರ ಮೃದು ಮತ್ತು ನಯವಾದ ಗೆಡ್ಡೆಗಳಿಗಿಂತ ಭಿನ್ನವಾಗಿ ಚಲಿಸುವುದು ಕಷ್ಟವಾಗಬಹುದು.

ಇದು ಹೆಚ್ಚಾಗಿ ನೋವು ರಹಿತವಾಗಿದೆ
ಕ್ಯಾನ್ಸರ್ ಗಡ್ಡೆಗಳು ಹೆಚ್ಚಾಗಿ ನೋವುರಹಿತವಾಗಿರುವುದರಿಂದ ಗಮನಕ್ಕೆ ಬರುವುದಿಲ್ಲ.

ಅದು ಚಲಿಸುವುದಿಲ್ಲ
ಗಟ್ಟಿಯಾಗಿರುವುದಲ್ಲದೆ, ಸ್ತನದಲ್ಲಿನ ಇತರ ಮೃದು ಮತ್ತು ನಯವಾದ ಗೆಡ್ಡೆಗಳಿಗಿಂತ ಭಿನ್ನವಾಗಿ ಚಲಿಸುವುದು ಕಷ್ಟವಾಗಬಹುದು.

ಇದು ಹೆಚ್ಚಾಗಿ ನೋವು ರಹಿತವಾಗಿದೆ
ಕ್ಯಾನ್ಸರ್ ಗಡ್ಡೆಗಳು ಹೆಚ್ಚಾಗಿ ನೋವುರಹಿತವಾಗಿರುವುದರಿಂದ ಗಮನಕ್ಕೆ ಬರುವುದಿಲ್ಲ.

ಇದು ಮುಕ್ತವಾಗಿ ಚಲಿಸುತ್ತದೆ
ಆಗಾಗ್ಗೆ ಅವು ನಯ ಮತ್ತು ಮೃದುವಾಗಿರುತ್ತವೆ ಮತ್ತು ಸ್ತನ ಚರ್ಮದ ಕೆಳಗೆ ಮುಕ್ತವಾಗಿ ಚಲಿಸಬಹುದು.

ಸಾಮಾನ್ಯ ರೀತಿಯ ನಿರುಪದ್ರವಿ ಸ್ತನ ಗೆಡ್ಡೆಗಳು
ಕೆಲವು ಕ್ಯಾನ್ಸರ್ ಅಲ್ಲದ ಸ್ತನ ಗಡ್ಡೆಗಳು ಸ್ತನ ಸಿಸ್ಟ್, ಫೈಬ್ರೊಡೆಸ್ಟೋಮಾಸ್, ಅಡೆನೋಸಿಸ್, ಮ್ಯಾಸ್ಟಿಟಿಸ್, ಡಕ್ಟ್ ಎಕ್ಟಾಸಿಯಾ, ಹೆಮಾಂಜಿಯೋಮಾಸ್, ಅಡೆನೊಮಿಯೊಎಪಿಥೆಲಿಯೋಮಾ ಮತ್ತು ನ್ಯೂರೋಫೈಬ್ರೋಮಾಗಳಿಂದ ಉಂಟಾಗುತ್ತವೆ.

ಸ್ತನದ ಗೆಡ್ಡೆಗಳನ್ನು ಸಮರ್ಥವಾಗಿ ಪರೀಕ್ಷಿಸುವುದು ಹೇಗೆ?
ಮ್ಯಾಮೋಗ್ರಾಮ್, ಅಲ್ಟ್ರಾಸೌಂಡ್, ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಎಂ ಆರ್ ಐ ), ಅಥವಾ ಬಯಾಪ್ಸಿ ಮಾತ್ರ  ಕ್ಯಾನ್ಸರ್ ಅಥವಾ ಕ್ಯಾನ್ಸರ್ ಅಲ್ಲದ ಸ್ತನ ಗಡ್ಡೆ ಇದೆಯೇ ಎಂದು ನಿರ್ಧರಿಸಲು ನಿಖರವಾದ ಮಾರ್ಗಗಳಾಗಿವೆ.

Latest Videos

click me!