ಕರುಳ ಕ್ಲೀನ್ ಮಾಡೋ ಮನೆ ಮದ್ದು ಹಾಗಲಕಾಯಿ!

Suvarna News   | Asianet News
Published : Oct 09, 2020, 03:58 PM IST

ಹಾಗಲಕಾಯಿ ಹೆಸರು ಕೇಳುತ್ತಿದ್ದಂತೆ ಮನಸ್ಸಲ್ಲಿ ಮೊದಲು ಬರೋದು.. ಅಯ್ಯೋ ಸಿಕ್ಕಾಪಟ್ಟೆ ಕಹಿ... ಆದರೆ ಸರಿಯಾಗಿ ನೋಡಿದರೆ ನಾವು ಯಾವುದಾದರೂ ಆರೋಗ್ಯ ಸಮಸ್ಯೆಗಳಿಗೆ ತೆಗೆದುಕೊಳ್ಳುವ ಔಷಧಿ ಕೂಡ ಕಹಿ ಇರುತ್ತದೆ. ಹಾಗೆಂದು ಔಷಧಿ ಸೇವನೆಯನ್ನು ಬಿಟ್ಟುಬಿಡುತ್ತೇವೆಯೇ ? ಹಾಗಿದ್ದ ಮೇಲೆ ಹಾಗಲಕಾಯಿ ಕಂಡರೆ ಹಿಂದೆ ಸರಿಯುವುದು ಸರಿನಾ  ?...

PREV
110
ಕರುಳ ಕ್ಲೀನ್ ಮಾಡೋ ಮನೆ ಮದ್ದು ಹಾಗಲಕಾಯಿ!

ಸೌಂದರ್ಯದಿಂದ ಹಿಡಿದು ನಮ್ಮ ದೇಹದ ಆರೋಗ್ಯದ ರಕ್ಷಣೆಗೆ ಅತ್ಯಂತ ಪರಿಣಾಮಕಾರಿಯಾಗಿ ಹೋರಾಡುವ ಗುಣ ಲಕ್ಷಣ ಹಾಗಲಕಾಯಿಗೆ ಇದೆ.ಹಾಗಲಕಾಯಿಯ ಕೆಲವು ಗೊತ್ತಿರುವ.. ಇನ್ನೂ ಕೆಲವು ಗೊತ್ತಿಲ್ಲದ ಪ್ರಯೋಜನಗಳನ್ನೂ ತಿಳಿಯೋಣ ಬನ್ನಿ..

210

ಹಾಗಲಕಾಯಿ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಇದು ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಎ ಮತ್ತು ಸಿ ವಿಟಮಿನ್ ಹೊಂದಿರುತ್ತದೆ. 

310

ಈ ಕಹಿ ತರಕಾರಿಯಲ್ಲಿ ಪಾಲಕನಲ್ಲಿರುವ ಕ್ಯಾಲ್ಸಿಯಂ ಮತ್ತು ಬ್ರೊಕೊಲಿಯ ಬೀಟಾ ಕ್ಯಾರೋಟಿನ್ ಎರಡು ಪಟ್ಟು ಇರುತ್ತದೆ ಇದು ಆರೋಗ್ಯಕ್ಕೆ ಉತ್ತಮ. 

410

ಹಾಗಲಕಾಯಿಯಲ್ಲಿ ಪಾಲಿಪೆಪ್ಟೈಡ್-ಪಿ ಅಥವಾ ಪಿ-ಇನ್ಸುಲಿನ್ ಇದೆ. ಇದು ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ. ಆದುದರಿಂದ ಮಧುಮೇಹಿಗಳು ಪ್ರತಿ ದಿನ ತಪ್ಪದೆ ಈ ಜ್ಯೂಸು ಸೇವಿಸಿದ್ರೆ ಉತ್ತಮ. 

510

ಹಾಗಲಕಾಯಿ ರಸವು ವಿಟಮಿನ್ ಎ ಮತ್ತು ಸಿ ಜೊತೆಗೆ ಶಕ್ತಿಯುತವಾದ ಆಂಟಿ-ಆಕ್ಸಿಡೆಂಟ್‌ ಗಳಿವೆ.  ಇದು ಚರ್ಮದಲ್ಲಿ ನೆರಿಗೆ, ಸುಕ್ಕು ಉಂಟಾಗುವುದನ್ನು ತಡೆಯುತ್ತದೆ. 

610

 ನಿಮಗೆ ಗೊತ್ತಾ? ಮೊಡವೆಗಳನ್ನು ಕಡಿಮೆ ಮಾಡುವ ಶಕ್ತಿಯೂ ಹಾಗಲಕಾಯಿ ರಸಕ್ಕಿದೆ. ಜೊತೆಗೆ ಎಸ್ಜಿಮಾ ಮತ್ತು ಸೋರಿಯಾಸಿಸ್ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ, ಅಲ್ಲದೆ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ.

710

 ಹಾಗಲಕಾಯಿ ರಸವು ಕರುಳನ್ನು ಶುದ್ಧೀಕರಿಸುವುದರ ಜೊತೆಗೆ ಅನೇಕ ಯಕೃತ್ತಿನ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಇದು ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. 

810

 ಹಾಗಲಕಾಯಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

910

ಅಲರ್ಜಿ ಮತ್ತು ಅಜೀರ್ಣವನ್ನು ಸಮಸ್ಯೆ ಇದ್ದರೆ ಹಾಗಲಕಾಯಿ ರಸ ರಾಮಬಾಣ. ಇದನ್ನ ಪ್ರತಿದಿನ ಮಿಸ್ ಮಾಡದೇ ಸೇವಿಸಿ. 

1010

ಕ್ಯಾನ್ಸರ್ ಉಂಟು ಮಾಡುವ ಕಾರಕಗಳನ್ನು ಮುಕ್ತ ಮಾಡಲು ಸಹ ಹಾಗಲಕಾಯಿ ಬೆಸ್ಟ್. ಮತ್ತ್ಯಾಕೆ ತಡ ಇವತ್ತಿಂದಲೇ ಹಾಗಲಕಾಯಿ ರಸ ಸೇವನೆ ಆರಂಭಿಸಿ. 

click me!

Recommended Stories