ಬಹಳಷ್ಟು ಜನ ಸ್ಕಿನ್ ಕೇರ್‌ಗಾಗಿ ದುಬಾರಿ ಉತ್ಪನ್ನಗಳ ಮೊರೆ ಹೋಗ್ತಾರೆ. ಆದರೆ ಬ್ಯೂಟಿಫುಲ್ ತ್ವಚೆಗೆ ಮನೆಯಲ್ಲಿರೋ ವಸ್ತುಗಳೇ ಸಾಕು, ಆರೋಗ್ಯಕರ ಡಯೆಟ್ ಬೇಕಂತಾರೆ ನ್ಯೂಟ್ರಿಷಿಯನ್ಸ್.
ನೀತಾ ಅಂಬಾನಿಯವರು ಪ್ರತಿದಿನ ತಪ್ಪದೆ ಬೀಟ್‌ರೂಟ್ ಜ್ಯೂಸ್ ಕುಡೀತಾರೆ. ಏನಿದೆ ಅದರಲ್ಲಿ..? ಅದು ಸ್ಕಿನ್‌ಗೆ ಹೇಗೆ ಸಹಕಾರಿ..? ನೀತಾ ಅವರ ಸುಂದರ ತ್ವಚೆ ಸೌಂದರ್ಯ ಇದೇ ಬೀಟ್‌ರೋಟ್ ಜ್ಯೂಸ್
ನಾವು ಮನೆಯಲ್ಲೇ ಬೀಟ್‌ರೋಟ್ ಜ್ಯೂಸ್ ಮಾಡಿ ಕುಡಿಯಬಹುದು. ಇದರಿಂದ ಸಿಗೋ ಪ್ರಯೋಜನಗಳು ಹಲವು.
ಬೀಟ್‌ರೂಟ್, ಕೊತ್ತಂಬರಿ ಸೊಪ್ಪು, ನೆಲ್ಲಿಕಾಯಿ ಜೊತೆ ಸೇರಿದರೆ ಅದು ನಮ್ಮ ದೇಹದ ರಕ್ತವನ್ನು ಪ್ಯೂರಿಫೈ ಮಾಡಬಲ್ಲದು. ನೆಲ್ಲಿಕಾಯಿಯಲ್ಲಿರೋ ವಿಟಮಿನ್ ಸಿ ನಮ್ಮ ತ್ವಚೆಗೂ ಸಹಕಾರಿ.
ಇದು ಕಲೆ, ಒಣಚರ್ಮ ನಿವಾರಿಸುತ್ತದೆ. ನಿಮ್ಮ ತ್ವಚೆಯನ್ನು ನೈಸರ್ಗಿಕವಾಗಿ ಹೈಡ್ರೇಟ್ ಆಗಿ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಇದರಲ್ಲಿ ಜೀರ್ಣ ಕ್ರಿಯೆಗೆ ಅಗತ್ಯವಾದ ಬೆಟಲೈನ್ಸ್ ಕೂಡಾ ಇದೆ. ವ್ಯಾಯಾಮದ ನಂತರ ಬೀಟ್‌ರೋಟ್ ಜ್ಯೂಸ್ ಬಹಳ ಉತ್ತಮ.
ಇದು ಜೀರ್ಣಕ್ರಿಯೆ ವೃದ್ಧಿಸಿ, ಅಸಿಡಿಟಿಯನ್ನೂ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಮೆಬಾಲಿಸಂ ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಬೇಕಾದ ವಸ್ತುಗಳು: ಬೀಟ್‌ರೋಟ್, ಕೊತ್ತಂಬರಿ ಸೊಪ್ಪು, ನೆಲ್ಲಿಕಾಯಿ
ಮಾಡುವ ವಿಧಾನ: ಎಲ್ಲವನೂ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಂಡು ಸೋಸಿ ಕುಡಿಯಿರಿ