ಬಾಡಿ ಬ್ಯುಲ್ಡ್ ಮಾಡೋ ಕನಸಿದ್ದರೆ, ಬಾಳೆಹಣ್ಣನ್ನು ಹೀಗ್ ತಿನ್ನಿ!

First Published | Dec 18, 2022, 3:41 PM IST

ನೀವು ಬಾಡಿ ಬಿಲ್ಡಿಂಗ್ ಮಾಡಲು ಬಯಸಿದರೆ, ಬಾಳೆಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಬಾಡಿಬಿಲ್ಡಿಂಗ್ ಗಾಗಿ ಬಾಳೆಹಣ್ಣನ್ನು ಹೇಗೆ ತಿನ್ನಬೇಕು? ಇದರಿಂದ ಏನೆಲ್ಲಾ ಲಾಭ ಇದೆ ಅನ್ನೋದನ್ನು ತಿಳಿಯಲು ಇದನ್ನು ನೀವು ಪೂರ್ತಿಯಾಗಿ ಓದಲೇಬೇಕು.
 

ಪ್ರತಿಯೊಬ್ಬರೂ ಫಿಟ್ ಮತ್ತು ಆರೋಗ್ಯಕರವಾಗಿ (fit and  healthy) ಕಾಣಲು ಬಯಸುತ್ತಾರೆ. ಆದರೆ ಕಳಪೆ ಆಹಾರ ಮತ್ತು ಜೀವನಶೈಲಿಯಿಂದ, ಕೆಲವೇ ಜನರು ಸಂಪೂರ್ಣವಾಗಿ ಫಿಟ್ ಮತ್ತು ಆರೋಗ್ಯಕರವಾಗಿದ್ದಾರೆ. ಇತ್ತೀಚಿಗೆ ಕೆಲವರು ಸ್ಥೂಲಕಾಯದಿಂದ ತೊಂದರೆಗೀಡಾಗಿದ್ದರೆ, ಕೆಲವರು ತಮ್ಮ ತೆಳ್ಳಗಿನ ದೇಹದಿಂದ ತೊಂದರೆಗೀಡಾಗಿದ್ದಾರೆ. ಸ್ಥೂಲಕಾಯದ ಜನರು ಹೆಚ್ಚಾಗಿ ಭಾರವಾದ ಜಿಮ್ ಅಥವಾ ಡಿಟಾಕ್ಸ್ ಆಹಾರಗಳನ್ನು ಸೇವಿಸುವ ಮೂಲಕ ತೂಕ ಕಳೆದುಕೊಳ್ಳುತ್ತಾರೆ. ಆದರೆ ತೆಳ್ಳಗೆ ಮತ್ತು ದುರ್ಬಲರಾಗಿರುವ ಜನರು ತಮ್ಮನ್ನು ತಾವು ಫಿಟ್ ಮತ್ತು ಆರೋಗ್ಯಕರವಾಗಿ ಹೇಗೆ ಮಾಡಿಕೊಳ್ಳಬೇಕೆಂದು ಅರ್ಥಮಾಡಿಕೊಳ್ಳುವುದಿಲ್ಲ. ನೀವೂ ತೆಳ್ಳಗಿದ್ದು, ಬಾಡಿ ಬಿಲ್ಡ್ ಮಾಡಲು ಬಯಸಿದ್ರೆ ಬಾಳೆಹಣ್ಣು ನಿಮ್ಮ ಸಹಾಯಕ್ಕೆ ಬರಬಹುದು. ದೇಹದಾರ್ಢ್ಯಕ್ಕಾಗಿ ಬಾಳೆಹಣ್ಣುಗಳನ್ನು ತಿನ್ನುವುದು ಪ್ರಯೋಜನಕಾರಿ ಎಂದು ಅನೇಕ ಜನರು ಸೂಚಿಸುತ್ತಾರೆ. 

ನೀವು ಸಹ ಉತ್ತಮ ವ್ಯಕ್ತಿತ್ವವನ್ನು ಪಡೆಯಲು ಮತ್ತು ಬಾಡಿ ಬಿಲ್ಡ್ ಮಾಡಲು ಬಯಸಿದರೆ, ನಾವು ನಿಮಗೆ ಸಹಾಯ ಮಾಡುತ್ತೇವೆ. ಯಾವುದೇ ಎಫೆಕ್ಟ್ ಇಲ್ಲದೇ ಬಾಡಿ ಬಿಲ್ಡ್ (BodyBuild) ಮಾಡಲು ನೀವು ಬಾಳೆಹಣ್ಣನ್ನು ಯಾವ ರೀತಿಯಾಗಿ ಸೇವಿಸಬಹುದು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡುತ್ತೇವೆ. 

Latest Videos


ಬಾಡಿಬಿಲ್ಡಿಂಗ್ ಗಾಗಿ ಬಾಳೆಹಣ್ಣನ್ನು ತಿನ್ನುವುದು ಹೇಗೆ?

ಬಾಳೆಹಣ್ಣಿನ ಸ್ಮೂಥಿ (banana smoothies)
ನೀವು ತೂಕವನ್ನು ಹೆಚ್ಚಿಸಲು ಅಥವಾ ಬಾಡಿ ಬಿಲ್ಡಿಂಗ್ ಮಾಡಲು ಬಯಸಿದರೆ, ಬಾಳೆಹಣ್ಣಿನ ಸ್ಮೂಥಿ ಸೇವಿಸಬಹುದು. ಬಾಳೆಹಣ್ಣಿನ ಸ್ಮೂಥಿಗಳನ್ನು ಕುಡಿಯುವುದರಿಂದ ಬಾಡಿ ಬಿಲ್ಡ್ ಮಾಡಲು ಸಹಾಯವಾಗುತ್ತೆ. ಪ್ರತಿದಿನ ವ್ಯಾಯಾಮದ ಮೊದಲು ಮತ್ತು ನಂತರ ಬಾಳೆಹಣ್ಣಿನ ಸ್ಮೂಥಿ ಕುಡಿಯೋದ್ರಿಂದ ತೂಕ ಹೆಚ್ಚಾಗುತ್ತೆ. ಅಲ್ಲದೆ, ದೇಹದ ಸ್ನಾಯುಗಳು ಸಹ ಹೆಚ್ಚಾಗುತ್ತವೆ. ಇದಕ್ಕಾಗಿ, ನೀವು ಒಂದು ಲೋಟ ಹಾಲಿಗೆ 2-3 ಬಾಳೆಹಣ್ಣು, ಬಾದಾಮಿ, ಒಣದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ ಮತ್ತು ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಈ ಸ್ಮೂಥಿ ಸೇವಿಸಿ.

ಬಾಳೆಹಣ್ಣು ಮತ್ತು ತುಪ್ಪ (banana and ghee)

ಬಾಡಿಬಿಲ್ಡಿಂಗ್ ಮಾಡಲು ನೀವು ಬಾಳೆಹಣ್ಣು ಮತ್ತು ತುಪ್ಪ ಒಟ್ಟಿಗೆ ಸೇವಿಸಬಹುದು. ಇದಕ್ಕಾಗಿ, ನೀವು 2-3 ಬಾಳೆಹಣ್ಣುಗಳನ್ನು ತೆಗೆದುಕೊಳ್ಳಿ. ಇದಕ್ಕೆ 2-3 ಟೀಸ್ಪೂನ್ ತುಪ್ಪ ಸೇರಿಸಿ ಮತ್ತು ನಂತರ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ. ಪ್ರತಿದಿನ ಬೆಳಿಗ್ಗೆ ಉಪಾಹಾರದಲ್ಲಿ ಬಾಳೆಹಣ್ಣು ಮತ್ತು ತುಪ್ಪ ಸೇವಿಸಬಹುದು. 

ಬಾಳೆಹಣ್ಣು ಮತ್ತು ತುಪ್ಪದಲ್ಲಿರುವ ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್ ಗಳು ಮತ್ತು ಆರೋಗ್ಯಕರ ಕೊಬ್ಬು (healthy fat) ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಆರೋಗ್ಯಕರವಾಗಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದೇನೆ ತೂಕ ಹೆಚ್ಚಾಗುತ್ತದೆ. ಇಂದೇ ಟ್ರೈ ಮಾಡಿ ನೋಡಿ.

ಬಾಳೆಹಣ್ಣು ಮತ್ತು ಮೊಸರು (banana and curd)

ಬಾಡಿಬಿಲ್ಡರ್ ಗಳಿಗೆ, ಬಾಳೆಹಣ್ಣಿನೊಂದಿಗೆ ಬೆರೆಸಿದ ಮೊಸರನ್ನು ತಿನ್ನುವುದು ಸಹ ತುಂಬಾ ಪ್ರಯೋಜನಕಾರಿ. ಇದಕ್ಕಾಗಿ, ನೀವು ಒಂದು ಬೌಲ್ ಪೂರ್ಣ ಕೊಬ್ಬಿನ ಮೊಸರನ್ನು ತೆಗೆದುಕೊಳ್ಳಿ. ಇದರಲ್ಲಿ 2-3 ಬಾಳೆಹಣ್ಣುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ನೀವು ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕಾಗಿ ಬಾಳೆಹಣ್ಣು ಮತ್ತು ಮೊಸರನ್ನು ತಿನ್ನಬಹುದು

ಬಾಳೆಹಣ್ಣು ಮತ್ತು ಮೊಸರನ್ನು ಪ್ರತಿದಿನ ಒಟ್ಟಿಗೆ ತಿನ್ನುವುದು ದೇಹದ ಸ್ನಾಯುಗಳನ್ನು ಶಕ್ತಿಯುತವಾಗಲು ಸಾಕಷ್ಟು ಸಹಾಯ ಮಾಡುತ್ತದೆ. ಇದನ್ನು ನೀವು ವ್ಯಾಯಾಮದ ಮೊದಲು ಅಥವಾ ನಂತರ ತಿನ್ನಬಹುದು. ಮೊಸರಿನಲ್ಲಿ ಗುಡ್ ಫ್ಯಾಟ್ ಇದೆ. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಆಗೋದಿಲ್ಲ. ಆದುದರಿಂದ ಇದನ್ನು ನೀವು ಆರಾಮವಾಗಿ ಸೇವಿಸಬಹುದು,

ಬಾಳೆಹಣ್ಣು ಮತ್ತು ಜೇನುತುಪ್ಪ (Banana and honey)

ಬಾಡಿಬಿಲ್ಡಿಂಗ್ ಮಾಡಲು ಬಯಸಿದರೆ, ಜೇನುತುಪ್ಪದೊಂದಿಗೆ ಬೆರೆಸಿದ ಬಾಳೆಹಣ್ಣುಗಳನ್ನು ಸಹ ಸೇವಿಸಬಹುದು. ಇದಕ್ಕಾಗಿ, ಒಂದು ಬೌಲ್‌ನಲ್ಲಿ 2-3 ಬಾಳೆಹಣ್ಣುಗಳನ್ನು ಕತ್ತರಿಸಿ ಹಾಕಿ. ಈಗ ಅದಕ್ಕೆ 2 ಟೀಸ್ಪೂನ್ ಜೇನುತುಪ್ಪ ಸೇರಿಸಿ. ಬಾಳೆಹಣ್ಣು ಮತ್ತು ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಮತ್ತು ಜೇನುತುಪ್ಪವನ್ನು ತಿನ್ನಬಹುದು. 

ಪ್ರತಿದಿನ ಬಾಳೆಹಣ್ಣು ಮತ್ತು ಜೇನುತುಪ್ಪ ಒಟ್ಟಿಗೆ ಬೆರೆಸಿ ಸೇವಿಸೋದ್ರಿಂದ, ತೂಕವು ಕ್ರಮೇಣ ಹೆಚ್ಚಾಗುತ್ತದೆ. ಬಾಡಿಬಿಲ್ಡಿಂಗ್ ಗಾಗಿ ನೀವು ಪ್ರತಿದಿನ ಬಾಳೆಹಣ್ಣು ಮತ್ತು ಜೇನುತುಪ್ಪವನ್ನು ಸೇವಿಸಬಹುದು. ಈ ಈಸಿ ಟಿಪ್ಸ್ ಟ್ರೈ ಮಾಡಿ ನೋಡಿ ನೀವು ಖಂಡಿತವಾಗಿಯೂ ಕೆಲವೇ ತಿಂಗಳುಗಳಲ್ಲಿ ಬಾಡಿ ಬಿಲ್ಡ್ ಮಾಡಬಹುದು.

click me!