ಬೆಂಡೆಕಾಯಿ ನೀರು ಸೇವನೆ diabetic ರೋಗಿಗಳಿಗೆ ರಾಮಬಾಣ

First Published | Apr 7, 2022, 6:25 PM IST

ಇತ್ತೀಚಿನ ದಿನಗಳಲ್ಲಿ, ಮಧುಮೇಹದ ಸಮಸ್ಯೆ ಜನರಿಗೆ ಸಾಕಷ್ಟು ಹೆಚ್ಚಾಗಿದೆ. ಈ ಹಿಂದೆ ಶ್ರೀಮಂತರ ಕಾಯಿಲೆ ಎಂದು ಇದನ್ನು ಕರೆಯಲಾಗುತ್ತಿತ್ತು, ಆದರೆ ಇಂದು ಹೆಚ್ಚಿನ ಜನರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಮಧುಮೇಹವನ್ನು ನಿಯಂತ್ರಿಸಲು ಎಲ್ಲಾ ರೀತಿಯ ಪಾಕವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ, ಆದರೆ ಅವು ಯಾವುದೇ ವಿಶೇಷ ಪರಿಣಾಮವನ್ನು ಬೀರುವುದಿಲ್ಲ. 

ಮಧುಮೇಹವನ್ನು ನಿಯಂತ್ರಿಸಲು ಔಷಧಿಗಳು ಅಗತ್ಯ, ಮತ್ತು ಆಹಾರದಲ್ಲಿ (Food Care) ಕಾಳಜಿ ಇಟ್ಟುಕೊಳ್ಳುವುದು ಅಗತ್ಯ. ರಕ್ತದಲ್ಲಿನ ಸಕ್ಕರೆಯನ್ನು (Sugar in Blood) ನಿಯಂತ್ರಿಸಲು ಅಂತಹ ಕೆಲವು ತರಕಾರಿಗಳನ್ನು ಸೇವಿಸಬೇಕು. ಇದಕ್ಕಾಗಿ, ಬೆಂಡೆಕಾಯಿಯನ್ನು(Ladyfinger) ಸೇವಿಸುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಇದರಿಂದ ಅನೇಕ ಪ್ರಯೋಜನಗಳಿವೆ ಎಂದು ತಿಳಿದು ಬಂದಿದೆ. 
 

ವಾಸ್ತವವಾಗಿ, ಬೆಂಡೆಕಾಯಿಯಲ್ಲಿ ಇರುವ ಅನೇಕ ಅಂಶಗಳು ಮಧುಮೇಹದಿಂದ(Diabetes) ಪರಿಹಾರ ನೀಡುತ್ತವೆ. ಅಂದಹಾಗೆ, ಬೆಂಡಿಯನ್ನು ಎಲ್ಲಾ ಜನರು ತುಂಬಾ ಇಷ್ಟಪಡುತ್ತಾರೆ, ಆದರೆ ಬೆಂಡೆಕಾಯಿಯನ್ನು ಇಷ್ಟಪಡದ ಜನರೂ ಇದ್ದಾರೆ. ನೀವು ಮಧುಮೇಹದಿಂದ ಬಳಲುತ್ತಿದ್ದರೆ, ನೀವು ಖಂಡಿತವಾಗಿಯೂ ಬೆಂಡೆಕಾಯಿಯನ್ನು ಸೇವಿಸಬೇಕು. ಬೆಂಡೆಕಾಯಿಯನ್ನು ಹೇಗೆ ಸೇವಿಸಬೇಕು ಮತ್ತು ಅದು ಯಾವ ಪ್ರಯೋಜನಗಳನ್ನು ಪಡೆಯುವಿರಿ ಎಂಬುದನ್ನು ತಿಳಿದುಕೊಳ್ಳಿ. 

Latest Videos


ಬೆಂಡೆಕಾಯಿಯನ್ನು ಹೇಗೆ ಸೇವಿಸುವುದು -  ಬೆಂಡೆಕಾಯಿಯನ್ನು ಬೇಯಿಸಿ ತಿನ್ನಲಾಗುತ್ತದೆ, ಆದರೆ ಮಧುಮೇಹವನ್ನು ಹತೋಟಿಗೆ ತರಲು ನೀವು ಬೆಂಡೆಕಾಯಿಯನ್ನು ಸೇವಿಸುತ್ತಿದ್ದರೆ, ಅದನ್ನು ಹಸಿಯಾಗಿ ತಿನ್ನಿ. ಬೆಂಡೆಕಾಯಿಯಲ್ಲಿರುವ ಫೈಬರ್(Fibre) ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಎನ್ನಲಾಗಿದೆ. ಆದುದರಿಂದ ಇದನ್ನು ನೀವು ಖಂಡಿತವಾಗಿಯೂ ಹಸಿಯಾಗಿ ಸೇವಿಸಬೇಕು.

ಬೆಂಡೆಕಾಯಿ ನೀರನ್ನು ತಯಾರಿಸುವುದು ಹೇಗೆ?

ನಿಮ್ಮ ಸಕ್ಕರೆ (Sugar) ಮಟ್ಟವನ್ನು ನಿಯಂತ್ರಣದಲ್ಲಿಡಲು ನೀವು ಬಯಸಿದರೆ, ಖಂಡಿತವಾಗಿಯೂ ಬೆಂಡೆಕಾಯಿ ನೀರನ್ನು ಸೇವಿಸಿ. ಇದು ದೇಹದಿಂದ ಹೆಚ್ಚಿನ ಮಟ್ಟದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹಾಗಾದರೆ ಬೆಂಡೆ ನೀರನ್ನು ಸಂಗ್ರಹಿಸೋದು ಹೇಗೆ ನೋಡೋಣ... 

1- ಎರಡು ಬೆಂಡೆಕಾಯಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ.
2- ಈಗ ಈ ಬೆಂಡೆಕಾಯಿಯ ಮುಂಭಾಗ ಮತ್ತು ಹಿಂಭಾಗವನ್ನು ಕತ್ತರಿಸಿ.  
3- ಅದರಲ್ಲಿ ಒಂದು ಬಿಳಿಯಾದ ಅಂಟಿನ  ವಸ್ತು ಹೊರಬರುತ್ತದೆ.
4-   ಈ ಕತ್ತರಿಸಿದ ಬೆಂಡೆಕಾಯಿ ನೀರು(Water) ತುಂಬಿದ ಲೋಟದಲ್ಲಿ ಹಾಕಿ ಮುಚ್ಚಿಡಿ.
5-   ಬೆಳಿಗ್ಗೆ, ಖಾಲಿ ಹೊಟ್ಟೆಯಲ್ಲಿ, ಆ ಬೆಂಡೆಕಾಯಿಯನ್ನು ಲೋಟದಿಂದ ತೆಗೆದು ಆ ನೀರನ್ನು ಕುಡಿಯಿರಿ.

ಟೈಪ್ 2 ಮಧುಮೇಹಕ್ಕೆ(Type 2 diabetes) ಬೆಂಡೆಕಾಯಿ ಹೇಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ವಿಧಾನವನ್ನು ನಿಯಮಿತವಾಗಿ ಅನುಸರಿಸುವುದರಿಂದ ಉತ್ತಮ ಅರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ. ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಸಹ ನಿಯಂತ್ರಿಸಲು ಬೆಂಡೆಕಾಯಿ ನೀರು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತೆ. 

ಬೆಂಡೆಕಾಯಿಯ ಸೇವನೆ ಮಧುಮೇಹಕ್ಕೆ ಮಾತ್ರವಲ್ಲದೆ ಮೂತ್ರಪಿಂಡದ (Kidney) ಸಮಸ್ಯೆಗೆ ಸಹ ಪ್ರಯೋಜನಕಾರಿ. ಮಧುಮೇಹದಿಂದ ಬಳಲುತ್ತಿರುವ ಜನರು ಆಗಾಗ್ಗೆ ಅಂತಹ ತರಕಾರಿಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ, ಇದು ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುತ್ತದೆ.  ಕೇವಲ 20% ಗ್ಲೈಸಿಮಿಕ್ ಸೂಚ್ಯಂಕವು ಬೆಂಡೆಕಾಯಿಯಲ್ಲಿ ಕಂಡುಬರುತ್ತದೆ. ಆದ್ದರಿಂದ ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ.

click me!