ಈ ಕಾರಣಕ್ಕೆ ನಿದ್ರೆಯಲ್ಲೇ ಹೋಗಬಹುದು ನವಜಾತ ಶಿಶುವಿನ ಜೀವ: ತಪ್ಪಿಸೋದು ಹೇಗೆ?

First Published | Nov 28, 2022, 1:01 PM IST

ನವಜಾತ ಶಿಶುಗಳ ಆರೈಕೆ ಬಹಳ ಮುಖ್ಯ. ಅವರ ಪ್ರತಿಯೊಂದು ಚಟುವಟಿಕೆಯ ಮೇಲೆ ಕಣ್ಣಿಡಬೇಕು. ಯಾಕೆಂದರೆ ಕೆಲವೊಂದು ಸಣ್ಣಪುಟ್ಟ ವಿಷಯಗಳು ಮಗುವಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ. ನಿದ್ರೆಯಲ್ಲಿ ಮಗುವಿನ ಸಾವು ಗಂಭೀರ ಸಮಸ್ಯೆಯಾಗಿದೆ. ಮಲಗಿರುವ ಮಗುವಿನ ಜೀವ ಹೋಗೋದು ಯಾಕೆ ಅನ್ನೋದರ ಬಗ್ಗೆ ಮಾಹಿತಿ ತಿಳಿಯೋಣ.

ಆರೋಗ್ಯವಂತ ಶಿಶುಗಳು ಯಾವುದೇ ಕಾರಣವಿಲ್ಲದೆ ಸಾವನ್ನಪ್ಪುತ್ತಿರುವ ಘಟನೆ ಕೆಲವೆಡೆ ನಡೆಯೋದನ್ನು ನಾವು ನೋಡಿದ್ದೇವೆ. ಮಗು ಜನಿಸಿದ ಮೂರು ತಿಂಗಳೊಳಗೆ ಇದು ಸಂಭವಿಸುವ ಸಾಧ್ಯತೆ ಹೆಚ್ಚು. ಈ ಸ್ಥಿತಿಯನ್ನು ಸಡನ್ ಇನ್ಫೆಂಟ್ ಡೆತ್ ಸಿಂಡ್ರೋಮ್ (SIDS) ಎಂದು ಕರೆಯಲಾಗುತ್ತದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ತೊಟ್ಟಿಲು ಸಾವು ಎಂದೂ ಕರೆಯಬಹುದು. ಆದರೆ, ಸಾವಿಗೆ ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ಅಧ್ಯಯನಗಳು ಮತ್ತು ತಜ್ಞರ ಪ್ರಕಾರ, ಮಗುವಿನ ಮೆದುಳಿನಿಂದ ಎಸ್ಐಡಿಎಸ್ ಉಂಟಾಗುತ್ತದೆ. 

ನವಜಾತ ಶಿಶು (New Born Baby) ಮಂಚದಲ್ಲಿ ಮಲಗುವ ಹಂತದಲ್ಲಿ ಎಸ್ ಐಡಿಎಸ್ ಹೆಚ್ಚಾಗಿರುತ್ತದೆ. ಆದರೆ, ಮಗು ಸಾಮಾನ್ಯವಾಗಿ ಎಲ್ಲಿ ಮಲಗಿದರೂ ಕೂಡ ಇದು ಸಂಭವಿಸುವ ಸಾಧ್ಯತೆ ಇದೆ. ಆದರೆ ಹೆಚ್ಚಿನ ಪ್ರಕರಣಗಳು ಮಕ್ಕಳು ಮಂಚದಲ್ಲಿ ಮಲಗಿದ್ದಾಲೇ ಬೆಳಕಿಗೆ ಬರುತ್ತವೆ. ವಾಸ್ತವವಾಗಿ, ಮೆದುಳಿನ ಒಂದು ಭಾಗವು ನಿದ್ರೆಯಲ್ಲಿ ಉಸಿರಾಟ ಮತ್ತು ಪ್ರಚೋದನೆಯನ್ನು ನಿಯಂತ್ರಿಸುತ್ತದೆ. ಅದು ಸರಿಯಾಗಿ ಕೆಲಸ ಮಾಡದಿದ್ದರೆ ಅದು ಸಾವಿಗೆ ಕಾರಣವಾಗುತ್ತದೆ. ತಜ್ಞರು ಇದನ್ನು ಜನನದೊಂದಿಗೆ ಬರುವ ಮೆದುಳಿನ ದೋಷವೆಂದು ಪರಿಗಣಿಸುತ್ತಾರೆ.

Tap to resize

SIDS ಗೆ ಕಾರಣಗಳು ಯಾವುವು?: ಮಗುವಿಗೆ ಅಕಾಲಿಕ ಜನನವಾದರೆ, ಅವನ ಮೆದುಳು ಪಕ್ವವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಉಸಿರಾಟ ಮತ್ತು ಹೃದಯ ಬಡಿತವು (Heartbeat) ಅನಿಯಂತ್ರಿತವಾಗುತ್ತದೆ. ಇದರಿಂದಾಗಿ ಎಸ್ಐಡಿಎಸ್ ನ ಅಪಾಯ ಹೆಚ್ಚಾಗುತ್ತದೆ. ಆದುದರಿಂದ ವೈದ್ಯರ ಬಳಿ ಈ ಕುರಿತು ಮಾಹಿತಿ ತಿಳಿಯೋದು ಮುಖ್ಯ.

ಚಳಿಗಾಲವು ಎಸ್ಐಡಿಎಸ್ ಉತ್ತೇಜಿಸುತ್ತದೆ. ಒಂದು ವರದಿಯ ಪ್ರಕಾರ, ಈ ಋತುವಿನಲ್ಲಿ ಉಸಿರಾಟದ ಸಮಸ್ಯೆ (Breathing Problem) ಹೆಚ್ಚಾಗಿ ಕಂಡು ಬರುತ್ತದೆ. ಚಳಿಯಿಂದಾಗಿ ನವಜಾತ ಶಿಶುಗಳಲ್ಲಿ ಸಹ ಮಲಗಿದ್ದಾಗ ಉಸಿರಾಟದ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ನವಜಾತ ಶಿಶುಗಳು ಸಾವನ್ನಪ್ಪುತ್ತವೆ.. 

ಮಗುವಿನ ಮಲಗುವ ಭಂಗಿ ಮತ್ತು ಅಲ್ಲಿ ಇರುವ ವಸ್ತುಗಳು ಸಹ ಅವರ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಉದಾಹರಣೆಗೆ, ಮಗುವು ಹೊಟ್ಟೆಯ ಮೇಲೆ ಮಲಗಿದ್ದರೆ, ಅಥವಾ ಅವನು ಬದಿಯಲ್ಲಿ ಮಲಗಿದ್ದರೆ, ಆಗ ಸಾವಿನ ಅಪಾಯವು ಹೆಚ್ಚಾಗುತ್ತದೆ. ಏಕೆಂದರೆ ಅವರು ಹೀಗೆ ಮಲಗಿದಾಗ ಶ್ವಾಸನಾಳದ ಮೇಲೆ ಒತ್ತಡ ಬೀರುತ್ತದೆ ಮತ್ತು ಉಸಿರಾಡಲು ಸಾಧ್ಯವಾಗುವುದಿಲ್ಲ.

ಈ ಸಮಸ್ಯೆಯಿಂದ ರಕ್ಷಣೆ ಹೇಗೆ?: ಹಠಾತ್ ಶಿಶು ಮರಣ ಸಿಂಡ್ರೋಮ್ (sudden infant death syndrome) ಅನ್ನು ಹೊಂದಿರುವುದು ಅಪರೂಪ. ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇದರ ಪ್ರಕರಣಗಳು ತುಂಬಾ ಕಡಿಮೆ. ಆದರೆ ರಕ್ಷಣೆ ಬಹಳ ಮುಖ್ಯ. ಆದುದರಿಂದ ಮಗು ಎಚ್ಚರವಾಗಿದ್ದಾಗಲೂ, ಮಲಗಿದ್ದಾಗಲೂ ಮಗುವಿನ ಮೇಲೆ ಗಮನ ಹರಿಸೋದನ್ನು ಕಡಿಮೆ ಮಾಡಬೇಡಿ.

ಮಗುವನ್ನು ನಿಮ್ಮೊಂದಿಗೆ ಮಂಚದಲ್ಲಿ ಬೆನ್ನಿನ ಮೇಲೆ ಮಲಗಿಸಿ.  ನವಜಾತ ಶಿಶುಗಳನ್ನು ಬೆನ್ನಿನ ಮೇಲೆ ಮಲಗಿಸಿ ಮಲಗಿಸಿದರೆ, ಅವು ಉಸಿರುಗಟ್ಟುವುದಿಲ್ಲ. ಅಲ್ಲದೆ, ಯಾವಾಗಲೂ ಮಗುವಿನ ಮೇಲೆ ಕಣ್ಣಿಡಿ. ಮಗು ಮಲಗಿದ್ದಾಗ ದೇಹದಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದರೂ ಸಹ ಅದನ್ನು ನಿರ್ಲಕ್ಷ ಮಾಡಬೇಡಿ.

ತೊಟ್ಟಿಲಿನಲ್ಲಿ ಬಲವಾದ ಹಾಸಿಗೆಯನ್ನು ಇರಿಸಿ. ದಪ್ಪ ಕ್ವಿಲ್ಟ್ ಗಳು, ಹಾಳೆಗಳು ಮಗುವನ್ನು ಮುಚ್ಚಬಾರದು. ಇಷ್ಟೇ ಅಲ್ಲ, ಅವುಗಳ ಸುತ್ತಲೂ ಯಾವುದೇ ಆಟಿಕೆಗಳನ್ನು ಇಡಬೇಡಿ.

ಮಗುವಿನ ಕೋಣೆಯಲ್ಲಿ 23 ರಿಂದ 25 ಡಿಗ್ರಿ ಸೆಲ್ಸಿಯಸ್ ಆರಾಮದಾಯಕ ತಾಪಮಾನ (room temreture) ಇರುವಂತೆ ನೋಡಿ. ಹೀಟರ್ ಗಳು, ಬ್ಲೋವರ್ ಗಳು, ಬೆಂಕಿ ಅಥವಾ ಸೂರ್ಯನ ಬೆಳಕಿನ ಮುಂದೆ ಅವರನ್ನು ಮಲಗಿಸಬೇಡಿ.

Latest Videos

click me!