ಧರ್ಮ ಮಾತ್ರವಲ್ಲ, ವಿಜ್ಞಾನವೂ ಹಗಲಿನ ನಿದ್ರೆಯಿಂದ ಸಮಸ್ಯೆಯೇ ಹೆಚ್ಚೆನ್ನುತ್ತೆ

First Published Nov 6, 2020, 6:00 PM IST

ಒಬ್ಬ ಆರೋಗ್ಯವಂತ ಮನುಷ್ಯನಿಗೆ ನಿದ್ರೆ ತುಂಬಾನೇ ಅಗತ್ಯವಿದೆ. ಮೆಡಿಕಲ್ ಸಯನ್ಸ್ ಹೇಳುವಂತೆ ಒಬ್ಬ ಮನುಷ್ಯನಿಗೆ ರಾತ್ರಿ ಕಡಿಮೆ ಎಂದರೆ 6 ಗಂಟೆಯಿಂದ 7 ಗಂಟೆ ನಿದ್ರೆ ಅತ್ಯಗತ್ಯವಾಗಿದೆ.  ಸರಿಯಾಗಿ ನಿದ್ರೆ ಮಾಡಿದರೆ ಅರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುವುದಿಲ್ಲ. ಜೊತೆಗೆ ನಿಮ್ಮ ದಿನವೂ ಚೆನ್ನಾಗಿರುತ್ತದೆ. ಆದರೆ ದಿನದ ಹೊತ್ತಲ್ಲಿ ನಿದ್ರೆ ಮಾಡುವುದು ಉತ್ತಮವೇ? 

ಮೆಡಿಕಲ್ ಸಯನ್ಸ್ ಕೂಡ ಹೇಳುತ್ತದೆ. ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವುದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಬೇಕು ಎಂದು. ಹಗಲಿನಲ್ಲಿ ನಿದ್ರೆ ಮಾಡಿದರೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ನಮ್ಮ ಧರ್ಮ ಗ್ರಂಥಗಳಲ್ಲೂ ಸಹ ದಿನದಲ್ಲಿ ನಿದ್ರೆ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
undefined
ದಿನದಲ್ಲಿ ನಿದ್ರೆ ಯಾಕೆ ಮಾಡಬಾರದು? ಇದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ. ಇವುಗಳ ಬಗ್ಗೆ ತಿಳಿದು ಅದರಂತೆ ನಡೆದರೆ ಸಮಸ್ಯೆಗಳೆಲ್ಲ ದೂರವಾಗಿ ನೀವು ಆರೋಗ್ಯದಿಂದಿರುವುದರಲ್ಲಿ ಸಂಶಯವಿಲ್ಲ...
undefined
ಮನೆಯಲ್ಲಿಯೇ ಕೆಲಸ ಮಾಡುವ ಮಹಿಳೆಯರು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವುದನ್ನು ನಾವು ಕಾಣುತ್ತೇವೆ. ಆದರೆ ಹೀಗೆ ನಿದ್ರೆ ಮಾಡುವುದು ರೋಗಗಳಿಗೆ ಆಮಂತ್ರಣ ನೀಡಿದಂತೆ.
undefined
ಆಯುರ್ವೇದದ ಪ್ರಕಾರ ದಿನದಲ್ಲಿ ನಿದ್ರೆ ಮಾಡಿದರೆ ಶೀತ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ನೆಗಡಿ ಜಾಸ್ತಿ ಆದರೆ ನಂತರ ಕೆಮ್ಮು ಮೊದಲಾದ ಸಮಸ್ಯೆಗಳು, ಶ್ವಾಸ ಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ
undefined
ದಿನದಲ್ಲಿ ಮಲಗುವುದು ಕೇವಲ ಶಾಸ್ತ್ರದಲ್ಲಿ ಮಾತ್ರವಲ್ಲ, ಆಯುರ್ವೇದದಲ್ಲೂ ಹಗಲಿನಲ್ಲಿ ನಿದ್ರೆ ಮಾಡುವುದು ಕೆಟ್ಟದು ಎನ್ನಲಾಗುತ್ತದೆ. ಯಾಕೆಂದರೆ ಹಗಲಿನಲ್ಲಿ ಮಲಗಿದರೆ ಹಲವು ರೀತಿಯ ಸಮಸ್ಯೆಗಳು ಆವರಿಸುತ್ತದೆ ಎಂದು ಹೇಳಲಾಗುತ್ತದೆ.
undefined
ಹಗಲು ಹೊತ್ತಿನಲ್ಲಿ ಮಲಗುವುದರಿಂದ ಶ್ವಾಸ ರೋಗಿಯ ಶ್ವಾಸಕೋಶ ನಿಧಾನವಾಗಿ ಹಾಳಾಗುತ್ತದೆ ಮತ್ತು ಇದರಿಂದ ನಂತರ ಕ್ಷಯ ಮೊದಲಾದ ರೋಗಗಳು ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.
undefined
ವೈಜ್ಞಾನಿಕ ದೃಷ್ಟಿಕೋನದಲ್ಲಿ ರಾತ್ರಿ ಚೆನ್ನಾಗಿ ನಿದ್ರೆ ಮಾಡಿ ಬೆಳಗ್ಗಿನ ಸಮಯದಲ್ಲಿ ಕೆಲಸ ಮಾಡುವುದೇ ಉತ್ತಮ ಎನ್ನಲಾಗುತ್ತದೆ.
undefined
ರಾತ್ರಿ ನಿದ್ರೆ ಮಾಡುವುದರಿಂದ ದೇಹಕ್ಕೆ ಸರಿಯಾಗಿ ಆರಾಮ ಸಿಗುತ್ತದೆ. ಇದರಿಂದ ಬೆಳಗ್ಗೆ ಎದ್ದೆಳುತ್ತಲೇ ಶರೀರಕ್ಕೆ ಹೊಸ ಶಕ್ತಿ ಸಿಗುತ್ತದೆ. ಇದು ದಿನ ಪೂರ್ತಿ ಉಲ್ಲಾಸದಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ.
undefined
ಹಗಲು ಹೊತ್ತಿನಲ್ಲಿ ನಿದ್ರೆ ಮಾಡುವ ಮೂಲಕ ನಾವು ನಮ್ಮ ದೇಹವನ್ನು ಆಲಸ್ಯದ ಗೂಡಾಗಿಸುತ್ತೇವೆ. ಆದುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಮಾಡಿ ಬೆಳಗ್ಗಿನ ಹೊತ್ತು ಚೆನ್ನಾಗಿ ಕೆಲಸ ಮಾಡಿ ಇದರಿಂದ ನೀವು ಆರೋಗ್ಯದಿಂದ ಇರುತ್ತೀರಿ.
undefined
click me!