ಜಗತ್ತಿನಾದ್ಯಂತ ಹಲವಾರು ಬಗೆಯ ಕ್ಯಾನ್ಸರ್ ಗಳ ಜೊತೆ, ಪ್ರತಿಯೊಂದು ವಿಧದ ಕ್ಯಾನ್ಸರ್ ಅನ್ನು ಮತ್ತು ಅದು ಮನುಷ್ಯನ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ವಿಶ್ವ ಕ್ಯಾನ್ಸರ್ ದಿನದಂದು ಎಲ್ಲರೂ ಒಂದಾಗಿ ಕ್ಯಾನ್ಸರ್ ಮುಕ್ತ ಆರೋಗ್ಯಕರ ಜಗತ್ತನ್ನು ಸೃಷ್ಟಿಸೋಣ....

ಕ್ಯಾನ್ಸರ್ ದಿನದ ಇತಿಹಾಸ : 2000ನೇ ಇಸದಲ್ಲಿ, ಕ್ಯಾನ್ಸರ್ ವಿರುದ್ಧ ಮೊದಲ ವಿಶ್ವ ಸಮ್ಮಿಟ್ ನಲ್ಲಿ ವಿಶ್ವ ಕ್ಯಾನ್ಸರ್ ದಿನವು ಹುಟ್ಟಿಕೊಂಡಿತು. ಈ ಶೃಂಗಸಭೆಯು ಪ್ಯಾರಿಸ್ ನಲ್ಲಿ ನಡೆಯಿತು ಮತ್ತು ಇದನ್ನು ಯುನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿ) ಸ್ಥಾಪಿಸಿತ್ತು.

ಪ್ರತಿ 10 ಮಂದಿ ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್ ಗೆ ತುತ್ತಾಗುತ್ತಿದ್ದು, ವಾರ್ಷಿಕವಾಗಿ 16 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಜಾಗತಿಕವಾಗಿ ಪ್ರತಿ ವರ್ಷ 6 ಜನರಲ್ಲಿ 1 ಜನರು ಕ್ಯಾನ್ಸರ್ ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಯುನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ತಿಳಿಸಿದೆ. ಇದರೊಂದಿಗೆ ಮಾರಣಾಂತಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.

ಕ್ಯಾನ್ಸರ್ ಗೆ ಕಾರಣಗಳೇನು?: ಕ್ಯಾನ್ಸರ್ ಬೆಳೆಯಲು ಬಲವಾದ ಕಾರಣವಿಲ್ಲ. ಆದರೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ವಿಷಕಾರಿ ಜೀವನಶೈಲಿಯ ಅಭ್ಯಾಸಗಳಂತಹ ಕೆಲವೊಂದು ಅಂಶಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲೇಬೇಕು.

ತಂಬಾಕು: ತಂಬಾಕಿನಲ್ಲಿ ಕಂಡುಬರುವ ನಿಕೋಟಿನ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ಹಲವಾರು ವರದಿಗಳು ಹೇಳುತ್ತವೆ.

ಆಹಾರಗಳು: ಸಂರಕ್ಷಕಗಳು, ಕೀಟನಾಶಕಗಳು ಮತ್ತು ಇತರ ಹಾನಿಕಾರಕ ಪದಾರ್ಥಗಳೊಂದಿಗೆ ಸರ್ವ್ ಮಾಡಿದ ಆಹಾರಗಳು ಕ್ಯಾನ್ಸರ್ ಅಪಾಯವನ್ನು ಉಂಟುಮಾಡುತ್ತವೆ. ಇಂತಹ ಆಹಾರಗಳನ್ನು ತ್ಯಜಿಸುವುದರಿಂದ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡಬಹುದು.

ವಂಶವಾಹಿಗಳು: ಕೆಲವು ಕ್ಯಾನ್ಸರ್ ಗಳು ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರಿದರೆ, ಕೆಲವು ವಿಧದ ಕ್ಯಾನ್ಸರ್ ಗಳು ಅನುವಂಶೀಯವಾಗಿರುತ್ತವೆ. ಕುಟುಂಬದಲ್ಲಿ ದೋಷಪೂರಿತವಾಗಿರುವ ಜೀನ್ ಗಳು ಇದ್ದರೆ ಅದು ಕ್ಯಾನ್ಸರ್ ಗೆ ಕಾರಣವಾಗಬಹುದು.

ವಿಕಿರಣ: ವಿಕಿರಣವು ಕಣಗಳನ್ನು ಬೇರ್ಪಡಿಸಬಹುದು ಮತ್ತು ಜೀವಕೋಶಗಳಲ್ಲಿ ಡಿಎನ್ ಎ ಹಾನಿಯನ್ನು ಉಂಟುಮಾಡಬಹುದು, ಇದು ಕ್ಯಾನ್ಸರ್ ನಂತಹ ತೀವ್ರ ಕಾಯಿಲೆಯನ್ನು ಉಂಟುಮಾಡಬಹುದು. ನೀವು ವಿಕಿರಣಕ್ಕೆ ಒಡ್ಡಿಕೊಂಡಿರುವುದರಿಂದ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಭಾವಿಸಿದ್ದರೆ ವೈದ್ಯರೊಂದಿಗೆ ಮಾತನಾಡಿ.

ಜಡ ಜೀವನಶೈಲಿ: ಕಡಿಮೆ ಅಥವಾ ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿಯನ್ನು ನಡೆಸುವುದರಿಂದ ಕ್ಯಾನ್ಸರ್ ನಂತಹ ದೀರ್ಘಕಾಲೀನ ಕಾಯಿಲೆಗೆ ಕಾರಣವಾಗಬಹುದು. ವ್ಯಾಯಾಮ, ನೃತ್ಯ, ಏರೋಬಿಕ್ಸ್ ಮುಂತಾದ ದೈಹಿಕ ಚಟುವಟಿಕೆಗಳತ್ತ ಗಮನ ಹರಿಸಿ.

ಕ್ಯಾನ್ಸರ್ ನ ಲಕ್ಷಣಗಳೇನು? ಜಗತ್ತಿನಲ್ಲಿ ಹಲವಾರು ಬಗೆಯ ಕ್ಯಾನ್ಸರ್ ಗಳು ಇರುವ ಕಾರಣ, ಒಂದೊಂದು ಬಗೆಯ ಕ್ಯಾನ್ಸರ್ ನ ಲಕ್ಷಣಗಳು ಬದಲಾಗುತ್ತವೆ. ಆದರೆ, ಕೆಲವು ವಿಧದ ಕ್ಯಾನ್ಸರ್ ಗಳು ಸಾಮಾನ್ಯ ಚಿಹ್ನೆಗಳನ್ನು ಹೊಂದಿದ್ದು, ಅವುಗಳು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

ತೀವ್ರ ತೂಕ ನಷ್ಟ, ವಿಪರೀತ ಆಯಾಸ, ಮೂತ್ರಕೋಶ ಮತ್ತು ಕರುಳಿನ ಕಾರ್ಯನಿರ್ವಹಿಸುವಲ್ಲಿ ಬದಲಾವಣೆಗಳು, ತೀವ್ರವಾದ ಚರ್ಮದ ಬದಲಾವಣೆಗಳು, ತೀವ್ರ ನೋವು

ಆದರೆ, ಈ ಮಾರಕ ರೋಗದ ವಿರುದ್ಧ ಹೋರಾಡಲು ಮತ್ತು ಗೆಲ್ಲಲು ಸಾಧ್ಯವಿರುವ ಏಕೈಕ ಮಾರ್ಗವೆಂದರೆ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು. ತಜ್ಞರೊಂದಿಗೆ ಸಮಾಲೋಚಿಸಿ ಸೂಕ್ತ ಸಮಯದಲ್ಲಿ ಸಲಹೆ ಮತ್ತು ಸಹಾಯ ವನ್ನು ಪಡೆದುಕೊಳ್ಳಿ.