Sandalwood Oil ಒತ್ತಡವನ್ನೂ ನಿಯಂತ್ರಿಸುತ್ತೆ, ಕೂದಲು ಉದುರೋದ ತಡೆಯಲೂ ಬೆಸ್ಟ್!

Published : Dec 22, 2022, 05:05 PM IST

ಹೆಚ್ಚು ಹಳೆಯ ಶ್ರೀಗಂಧದ ಮರದಿಂದ ಎಣ್ಣೆ ತಯಾರಿಸಿದಷ್ಟು, ಅದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತೆ. ಹಾಗಾಗಿ, ಶ್ರೀಗಂಧದ ಎಣ್ಣೆ ಬಳಸೋದರಿಂದ ಒಬ್ಬ ವ್ಯಕ್ತಿಗೆ ಎಷ್ಟೆಲ್ಲಾ ಸಹಾಯವಾಗುತ್ತೆ ಎಂದು ತಿಳಿದುಕೊಳ್ಳೋಣ. ಇಲ್ಲಿ ಆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

PREV
18
Sandalwood Oil ಒತ್ತಡವನ್ನೂ ನಿಯಂತ್ರಿಸುತ್ತೆ, ಕೂದಲು ಉದುರೋದ ತಡೆಯಲೂ ಬೆಸ್ಟ್!

ಶ್ರೀಗಂಧವನ್ನು(sandalwood) ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರವಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹ ಬಳಸಲಾಗುತ್ತೆ. ಸ್ಯಾಂಡಲ್ ವುಡ್ ನ ವೈಜ್ಞಾನಿಕ ಹೆಸರು ಸಂತಲಮ್ ಆಲ್ಬಂ. ಇದರ ಮರವನ್ನು ಎಲ್ಲಾ ಮರಗಳಿಗಿಂತ ಹೆಚ್ಚು ಪರಿಮಳಯುಕ್ತವೆಂದು ಪರಿಗಣಿಸಲಾಗಿದೆ. ಶ್ರೀಗಂಧದ ಎಣ್ಣೆಯನ್ನು ಬಳಸೋದರಿಂದ ಒಬ್ಬ ವ್ಯಕ್ತಿ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯುತ್ತಾನೆ ಎಂದು ತಿಳಿಯೋಣ. 

28
ಶ್ರೀಗಂಧದ ಎಣ್ಣೆಯ ಪ್ರಯೋಜನಗಳು

ಒತ್ತಡ(stress) ಅಥವಾ ಖಿನ್ನತೆಯಿಂದ ಬಳಲುತ್ತಿರುವ ಜನರು ಶ್ರೀಗಂಧದ ಎಣ್ಣೆಯನ್ನು ಬಳಸಬಹುದು. ಶ್ರೀಗಂಧದ ಎಣ್ಣೆ α-ಸ್ಯಾಂಟಲೋಲ್ ಕೆಮಿಕಲ್ ಕಾಂಪೌಂಡ್ ಹೊಂದಿರುತ್ತೆ. ಅದರ ಎಣ್ಣೆಯ ಕೆಲವು ಹನಿಗಳ ವಾಸನೆ ತೆಗೆದುಕೊಳ್ಳುವುದರಿಂದ ಒತ್ತಡದ ಸಮಸ್ಯೆ ಕಡಿಮೆ ಮಾಡಬಹುದು. 

38
ಕೂದಲು ಉದುರೋದು(hairfall)ನಿಲ್ಲುತ್ತೆ

ಕೂದಲಿನ ಬೇರುಗಳಲ್ಲಿ ಡೆಡ್ ಸ್ಕಿನ್ ಶೇಖರಣೆಯಾಗೋದರಿಂದ, ಕೂದಲು ಆಗಾಗ್ಗೆ ತುಂಡಾಗುತ್ತ್ರೆ ಮತ್ತು ಉದುರಲು ಪ್ರಾರಂಭಿಸುತ್ತೆ .ಇಷ್ಟೇ ಅಲ್ಲ, ಕೂದಲಿನ ಬೆಳವಣಿಗೆಯೂ ಇದರಿಂದ ನಿಲ್ಲುತ್ತೆ. ಹಾಗಾಗಿ, ಶ್ರೀಗಂಧದ ಎಣ್ಣೆ ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುವ ಮೂಲಕ ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತೆ. 

48
ರಕ್ತದೊತ್ತಡ (Blood pressure) ನಿಯಂತ್ರಿಸುತ್ತೆ

ಅಧಿಕ ರಕ್ತದೊತ್ತಡದ ಸಮಸ್ಯೆಗಳನ್ನು ಹೊಂದಿರುವ ಜನರಿಗೆ, ಶ್ರೀಗಂಧದ ಎಣ್ಣೆ ಅತ್ಯಂತ ಪ್ರಯೋಜನಕಾರಿ. ಶ್ರೀಗಂಧದ ಎಣ್ಣೆಯ ಸುವಾಸನೆಯು ಹಾರ್ಮೋನುಗಳನ್ನು ಸಕ್ರಿಯಗೊಳಿಸುತ್ತೆ, ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತೆ. 

58

ಉತ್ತಮ ರಕ್ತ ಪರಿಚಲನೆಯಿಂದಾಗಿ, ಹೃದಯ(Heart) ಬಡಿತ ಉತ್ತಮವಾಗಿರುತ್ತೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆ ಸಹ ನಿವಾರಣೆಯಾಗುತ್ತೆ. ಹಾಗೆಯೇ ಶ್ರೀಗಂಧದ ಎಣ್ಣೆಯು ರಕ್ತದೊತ್ತಡವನ್ನು ಸಮತೋಲನಗೊಳಿಸುವಲ್ಲಿ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು.
 

68
ಊತದ(Swelling) ಸಮಸ್ಯೆ ಸುಧಾರಿಸುತ್ತೆ

ಶ್ರೀಗಂಧದ ಎಣ್ಣೆ ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಉರಿಯೂತವನ್ನು ಕಡಿಮೆ ಮಾಡೋದು ಮಾತ್ರವಲ್ಲದೆ ಉರಿಯೂತದಿಂದಾಗಿ ಚರ್ಮದ ಮೇಲೆ ಉಂಟಾಗುವ ಕೆಂಪಾಗುವಿಕೆಯನ್ನು ಸಹ ನಿವಾರಿಸುತ್ತೆ. 

78
ನಿದ್ರೆಯ(Sleep) ಸಮಸ್ಯೆಗೆ ಪರಿಹಾರ

ನಿದ್ರಾಹೀನತೆಯ ಸಮಸ್ಯೆಯಿಂದ ತೊಂದರೆಗೊಳಗಾದವರಿಗೆ ಶ್ರೀಗಂಧದ ಎಣ್ಣೆ ತುಂಬಾ ಉಪಯುಕ್ತದೆ. ಅಂತಹ ರೋಗಿಗಳಿಗೆ ಶ್ರೀಗಂಧದ ಎಣ್ಣೆಯಿಂದ ಮಸಾಜ್ ಮಾಡಿದ್ರೆ, ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತೆ. ಶ್ರೀಗಂಧದ ಎಣ್ಣೆಯು ಸೆಂಟ್ರಲ್ ನರ್ವಸ್ ಸಿಸ್ಟಮ್ನಲ್ಲಿ  ಉಂಟಾಗುವ ಒತ್ತಡವನ್ನು ತೆಗೆದುಹಾಕುತ್ತೆ. 

88
ಉತ್ತಮ ಮನಸ್ಥಿತಿಗಾಗಿ

ಮೂಡ್(Mood) ಚೆನ್ನಾಗಿರಲು ಬಯಸಿದರೆ, ನೀವು ಶ್ರೀಗಂಧದ ಎಣ್ಣೆಯನ್ನು ಇತರ ಮಸಾಜ್ ಮಾಡುವ ಎಣ್ಣೆಯ ಜೊತೆ ಬೆರೆಸಿ ಇಡೀ ದೇಹವನ್ನು ಮಸಾಜ್ ಮಾಡಿ. ಶ್ರೀಗಂಧದ ಸುಗಂಧದಿಂದ ಮನಸ್ಸು ಶಾಂತವಾಗುತ್ತೆ. ಇದರಿಂದ ಮೂಡ್ ಚೆನ್ನಾಗಿರಲು ಸಹಾಯವಾಗುತ್ತೆ. 

Read more Photos on
click me!

Recommended Stories