Asianet Suvarna News Asianet Suvarna News

ದೇಶಾದ್ಯಂತ ವ್ಯಾಪಕ ಜ್ವರ, ಕೆಮ್ಮಿನ ಹಾವಳಿ, H3N2 ವೈರಸ್ ಕಾರಣ ಎಂದ ತಜ್ಞರು

ದೇಶಾದ್ಯಂತ ಹೆಚ್ಚಾಗ್ತಿರೋ ಜ್ವರ, ಶೀತ, ಕೆಮ್ಮಿನ ಸಮಸ್ಯೆಗೆ ಎಚ್‌3ಎನ್‌2 ವೈರಸ್‌ನ ಉಪತಳಿ ಪ್ರಮುಖ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯ ತಜ್ಞರು ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Widespread fever and cough throughout the country Caused by H3N2 virus, ICMR Vin
Author
First Published Mar 5, 2023, 9:05 AM IST

ನವದೆಹಲಿ: ದೇಶಾದ್ಯಂತ ಕಳೆದ ಮೂರು ತಿಂಗಳಿನಿಂದ ಜ್ವರ, ಶೀತ, ಕೆಮ್ಮಿನ ಸಮಸ್ಯೆ ವ್ಯಾಪಕವಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಎಚ್‌3ಎನ್‌2 ವೈರಸ್‌ನ ಉಪತಳಿ ಪ್ರಮುಖ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯ ತಜ್ಞರು ಹೇಳಿದ್ದಾರೆ. ದೇಶಾದ್ಯಂತ ಇರುವ ತನ್ನ ವೈರಸ್‌ ಸಂಶೋಧನೆ ಮತ್ತು ಪತ್ತೆ ಪ್ರಯೋಗಾಲಯ ಜಾಲದಲ್ಲಿನ ಅಂಕಿ ಅಂಶಗಳನ್ನು ಆಧರಿಸಿ ಈ ಮಾಹಿತಿ ನೀಡಿರುವ ಐಸಿಆರ್‌ಎಂಆರ್‌, ‘ಕಳೆದ ಮೂರು ತಿಂಗಳಿನಿಂದ ದೇಶಾದ್ಯಂತ ಶೀತಜ್ವರ, ಕೆಮ್ಮು ಸಾಮಾನ್ಯ ಸಮಸ್ಯೆಯಾಗಿ ಹೊರಹೊಮ್ಮಿದೆ. ಇದಕ್ಕೆ ಎಚ್‌3ಎನ್‌2 ವೈರಸ್‌ನ ಉಪತಳಿ ಕಾರಣ. ಬೇರೆ ಉಪತಳಿಗಿಂತ ಇದು ಹೆಚ್ಚು ಪ್ರಮಾಣದಲ್ಲಿ ಜನರು ಆಸ್ಪತ್ರೆ ದಾಖಲಾಗುವಂತೆ ಮಾಡಿದೆ. ಆದರಾ ಪ್ರಾಣಾಂತಿಕವಲ್ಲ’ ಎಂದು ಹೇಳಿದೆ.

ದೀರ್ಘಾವಧಿ ಕೆಮ್ಮು: ಈ ನಡುವೆ ಹವಾಮಾನ ಬದಲಾವಣೆ (Weather change), ವಾಯುಮಾಲಿನ್ಯ ಮೊದಲಾದ ಕಾರಣಗಳಿಂದ ಕಾಣಿಸಿಕೊಳ್ಳುತ್ತಿರುವ ಈ ಶೀತಜ್ವರ 5ರಿಂದ 7 ದಿನಗಳಲ್ಲಿ ಗುಣವಾಗುತ್ತದೆ. ಆದರೆ ಕೆಮ್ಮು 2-3 ವಾರಗಳ ಕಾಲ ಮುಂದುವರೆಯುತ್ತದೆ. ಸಾಮಾನ್ಯವಾಗಿ 15 ವರ್ಷದಿಂದ ಕೆಳಗಿನ ಮತ್ತು 50 ವರ್ಷ ಮೇಲ್ಪಟ್ಟವರಲ್ಲಿ ಇದು ಶ್ವಾಸಕೋಶದ (Lungs) ಸೋಂಕಿನ ರೂಪದಲ್ಲಿ ಹರಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್‌ಗಿಂತ ಡೇಂಜರಸ್ ಕಾಯಿಲೆ ಪತ್ತೆ, ಮಾರ್ಬರ್ಗ್ ವೈರಸ್‌ನಿಂದ 9 ಮಂದಿ ಸಾವು

ಆ್ಯಂಟಿಬಯೋಟಿಕ್ಸ್‌ ಬೇಡ: ಇಂಥ ಜ್ವರಕ್ಕೆ ಹಲವೆಡೆ ಜನರು ನೇರವಾಗಿ ಅಜಿತ್ರೋಮೈಸಿನ್‌, ಅಮೋಕ್ಸಿಕ್ಲಾವ್‌ನಂಥ ಆ್ಯಂಟಿ ಬಯೋಟಿಕ್ಸ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗೆ ಗೊತ್ತುಗುರಿಯಿಲ್ಲದೆ, ಯಾವುದೇ ಮುಂಜಾಗ್ರತೆ ಇಲ್ಲದೆ ಆ್ಯಂಟಿ ಬಯೋಟಿಕ್ಸ್‌ ಪಡೆಯುವುದು ರೋಗ ನಿರೋಧಕ ಶಕ್ತಿಯನ್ನು (Immunity power) ಕುಂದಿಸುತ್ತದೆ. ಹೀಗಾದಾಗ ಯಾವಾಗ ನಮ್ಮ ದೇಹಕ್ಕೆ ನಿಜವಾಗಿಯೂ ಆ್ಯಂಟಿ ಬಯೋಟಿಕ್ಸ್‌ನ ಅಗತ್ಯವಿರುತ್ತದೆಯೋ ಆಗ ಅದನ್ನು ಪಡೆದುಕೊಂಡಾಗ ಅದು ಪರಿಣಾಮ ಬೀರುವುದಿಲ್ಲ. 

ಈಗಾಗಲೇ ಕೋವಿಡ್‌ ಸಮಯದಲ್ಲೂ ಇಂಥ ಔಷಧಗಳನ್ನು (Medicine) ಭಾರೀ ಪ್ರಮಾಣದಲ್ಲಿ ಬಳಸಿದ್ದರಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದನ್ನು ನಾವು ಗಮನಿಸಿದ್ದೇವೆ. ಹೀಗಾಗಿ ವೈದ್ಯರು ಕೂಡಾ ಇಂಥ ಶೀತಜ್ವರಕ್ಕೆ ಏಕಾಏಕಿ ಆ್ಯಂಟಿ ಬಯೋಟಿಕ್ಸ್‌ ಶಿಫಾರಸು ಮಾಡಬಾರದು. ಅಗತ್ಯ ಬಿದ್ದರೆ ಬ್ಯಾಕ್ಟೀರಿಯಾದಿಂದ ಸೋಂಕು ತಗುಲಿದೆಯೇ ಇಲ್ಲವೇ ಎಂಬುದನ್ನು ರೋಗ ಪತ್ತೆ ಪರೀಕ್ಷೆ ಮೂಲಕ ಖಚಿತಪಡಿಸಿಕೊಂಡು ಬಳಿಕ ಆ್ಯಂಟಿ ಬಯೋಟಿಕ್ಸ್‌ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ರೋಗಲಕ್ಷಣಕ್ಕೆ (Symptoms) ಅನುಗುಣವಾದ ಸಾಮಾನ್ಯ ಔಷಧ ನೀಡಬೇಕು ಎಂದು ಐಎಂಎ ಎಚ್ಚರಿಸಿದೆ.

ಯಾಕೋ ಏನೋ ಮಾಡಿದ್ರೂ ಕೆಮ್ಮು ಹುಷಾರಾಗ್ತಿಲ್ವಾ? ಇಗ್ನೋರ್ ಮಾಡ್ಬೇಡಿ

ವೈರಸ್‌ನ ಲಕ್ಷಣಗಳೇನು
ಕೆಮ್ಮು
ವಾಕರಿಕೆ
ವಾಂತಿ
ಗಂಟಲುನೋವು
ಸ್ನಾಯುಸೆಳೆತ
ಅತಿಸಾರ

ಏನು ಮಾಡಬೇಕು?
ಆಗಾಗ ಸೋಪು ನೀರು ಬಳಸಿ ಕೈಗಳನ್ನು ತೊಳೆಯಿರಿ
ಮಾಸ್ಕ್‌ ಧರಿಸಿ, ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಅನಗತ್ಯ ಓಡಾಟವನ್ನು ತಪ್ಪಿಸಿ
ಪದೇ ಪದೇ ಮೂಗು ಬಾಯಿ ಮುಟ್ಟಬೇಡಿ. ಹೆಚ್ಚು ನೀರು ಕುಡಿಯಿರಿ
ಜ್ವರ ಅಥವಾ ಮೈಕೈ ನೋವು ಇದ್ದರೆ ಪ್ಯಾರಾಸಿಟಮಾಲ್ ಸೇವಿಸಿ.

ಭಾರತದ ಮೊದಲ ಕೋವಿಡ್ ಪತ್ತೆಯಾಗಿ 3 ವರ್ಷ, ಸರಿಯಾಗಿ ನೆನಪಿದೆ ಕೊರೋನಾ ಸಂಕಷ್ಟ!

ಏನು ಮಾಡಬಾರದು?
ಕೈ ಕುಲುಕುವುದು, ಸ್ಪರ್ಶಿಸುವ ರೀತಿ ಯಾವುದೇ ವ್ಯಕ್ತಿಗಳಿಗೂ ಶುಭಾಶಯ ಕೋರಬೇಡಿ
ಸಾರ್ವಜನಿಕ ಪ್ರದೇಶಗಳಲ್ಲಿ ಉಗಿಯುವ ಅಭ್ಯಾಸ ಬಿಡಿ
ವೈದ್ಯರನ್ನು ಸಂಪರ್ಕಿಸದೆ ಸ್ವತಃ ಔಷಧಗಳನ್ನು ಸೇವಿಸಬೇಡಿ
ಇನ್ನೊಬ್ಬರಿಗೆ ತೀರಾ ಸಮೀಪದಲ್ಲಿ ಕುಳಿತು ತಿಂಡಿ-ತಿನಿಸು ತಿನ್ನಬೇಡಿ

H3N2 ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಗಮನ ಕೊಡುವಂತೆ ತಿಳಿಸಿದೆ. ಈ ಬಗ್ಗೆ ಆಯುಕ್ತರು ಪ್ರಧಾನ ಕಾರ್ಯದರ್ಶಿ ಜೊತೆ ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ. ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಕ್ರಮ ತೆಗೆದು ಕೊಳ್ಳಬೇಕು ಅಂತ ನಾಳೆ ಸಭೆ ಮಾಡಿ ತೀರ್ಮಾನ ಮಾಡಲಾಗುವುದು. ಸಭೆಯಲ್ಲಿ ತಜ್ಞರು ಕೂಡ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ವಹಿಸುವ ಕ್ರಮಗಳ ಬಗ್ಗೆ ನಾಳೆ ಮಾಹಿತಿ ಕೊಡ್ತೀವಿ ಎಂದು ದೆಹಲಿ ಏಮ್ಸ್ ನ ನಿರ್ದೇಶಕ ಡಾ. ರಣ್ ದೀಪ್ ಗುಲೇರಿಯಾ ಹೇಳಿದ್ದಾರೆ.

Follow Us:
Download App:
  • android
  • ios