Ligament injury : ಕ್ರಿಕೆಟರ್ ರಿಷಭ್ ಪಂತ್‌ಗೆ ಕಾಡುತ್ತಿರುವ ಲೆಗಮೆಂಟ್ ಗಾಯದ ಬಗ್ಗೆ ನಿಮಗೆಷ್ಟು ಗೊತ್ತು..?

First Published Jan 5, 2023, 6:41 PM IST

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಸದ್ಯ ಡೆಹರಾಡೂನ್‌ನಿಂದ ಮುಂಬೈಗೆ ಏರ್‌ಲಿಫ್ಟ್‌ ಮಾಡಲಾಗಿದೆ. ಡಿಸೆಂಬರ್ 30ರಂದು ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ರಿಷಭ್ ಪಂತ್ ಅವರ ಮೊಣಕಾಲು ಹಾಗೂ ಪಾದದ ಲಿಗಮೆಂಟ್ ಗಾಯಕ್ಕೆ ತುತ್ತಾಗಿದ್ದಾರೆ. ಹಾಗಿದ್ದರೇ ಲಿಗಮೆಂಟ್ ಟಿಯರ್ ಎಂದರೇನು ಮತ್ತು ಈ ಗಾಯವು ಎಷ್ಟು ಗಂಭೀರವಾಗಿದೆ ಎಂದು ಇಲ್ಲಿ ತಿಳಿಯೋಣ ಬನ್ನಿ

ಭೀಕರ ಅಪಘಾತದ ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ಭಾರತದ ಸ್ಟಾರ್ ಕ್ರಿಕೆಟಿಗ ರಿಷಭ್ ಪಂತ್(Rishab Pant) ಅವರನ್ನು ಡೆಹ್ರಾಡೂನ್‌ನ ಖಾಸಗಿ ಆಸ್ಪತ್ರೆಯಿಂದ ಮುಂಬೈಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಮೊಣಕಾಲು ಮತ್ತು ಪಾದದ ಲಿಗಮೆಂಟ್ ಟಿಯರ್ ಚಿಕಿತ್ಸೆ ಪಡೆಯಲಿದ್ದಾರೆ. ರಿಷಬ್ ಪಂತ್ (25) ದೆಹಲಿಯಿಂದ ತನ್ನ ಸ್ವಗ್ರಾಮ ರೂರ್ಕಿಗೆ ತೆರಳುತ್ತಿದ್ದಾಗ ಭೀಕರ ಕಾರು ಅಪಘಾತದಲ್ಲಿ ಜೀವ ಅಪಾಯದಿಂದ ಪಾರಾಗಿದ್ದಾರೆ, 

ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ನಿಯಂತ್ರಣ ತಪ್ಪಿದ ನಂತರ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ(Accident) ರಿಷಭ್ ತಲೆಗೆ ಪೆಟ್ಟಾಗಿದ್ದು, ಬೆನ್ನಿನ ಮೇಲೆ ಅನೇಕ ಗಾಯಗಳು ಮತ್ತು ಮೊಣಕಾಲು ಮತ್ತು ಪಾದದ ಮುರಿತವಲ್ಲ, ಆದರೆ ಲಿಗಮೆಂಟ್ ಟಿಯರ್ ನಿಂದ ಬಳಲುತ್ತಿದ್ದಾರೆ. ಏನಿದು ಲಿಗಮೆಂಟ್ ಇಂಜುರಿ ಎಂದು ತಿಳಿಯೋಣ.
 

 ಲಿಗಮೆಂಟ್ ಇಂಜುರಿ(Ligament injury) ಎಂದರೇನು?
 ಲಿಗಮೆಂಟ್ ಇಂಜುರಿ ಅಥವಾ ಲಿಗಮೆಂಟ್ ಟಿಯರ್ ಒಂದು ರೀತಿಯ ಗಾಯವಾಗಿದೆ. ವಾಸ್ತವವಾಗಿ, ಲಿಗಮೆಂಟ್ ಫೈಬರ್ಸ್ ಟಿಶ್ಯೂವಿನ ಒಂದು ಗಟ್ಟಿಯಾದ ಬೈಂಡಾಗಿದೆ, ಇದು ಎರಡು ಮೂಳೆಗಳನ್ನು ಸಂಪರ್ಕಿಸುತ್ತೆ. ಇದು ಮೂಳೆಗಳನ್ನು ಕಾರ್ಟಿಲೇಜ್ ಜೊತೆ ಸಹ ಸಂಪರ್ಕಿಸುತ್ತೆ. ಲಿಗಮೆಂಟ್ ಗಳು ಸಾಕಷ್ಟು ಬಲವಾಗಿದ್ದರೂ, ಬಲವಾದ ಆಘಾತಗಳು ಅಥವಾ ಒತ್ತಡವು ಅವುಗಳನ್ನು ನೋಯಿಸಬಹುದು, ಇದನ್ನು ಟಿಯರ್ ಎಂದೂ ಕರೆಯಲಾಗುತ್ತೆ.

ಆಟಗಾರರು(Players) ಆಗಾಗ್ಗೆ ಅಂತಹ ಗಾಯಗಳನ್ನು ಎದುರಿಸುತ್ತಾರೆ. ಸಾಮಾನ್ಯವಾಗಿ, ಪಾದ, ಮೊಣಕಾಲು, ಹೆಬ್ಬೆರಳು, ಕುತ್ತಿಗೆ ಅಥವಾ ಬೆನ್ನಿನ ಮೇಲೆ  ಲಿಗಮೆಂಟ್ ಇಂಜುರಿ ಸಂಭವಿಸುತ್ತವೆ.  ಲಿಗಮೆಂಟ್ ಇಂಜುರಿಗಳಲ್ಲಿ ಎಷ್ಟು ವಿಧಗಳಿವೆ, ಅದರ ರೋಗಲಕ್ಷಣ ಮತ್ತು ಅದಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

 ಲಿಗಮೆಂಟ್ ಇಂಜುರಿ ವಿಧಗಳು ಯಾವುವು?
ಲಿಗಮೆಂಟ್ ಇಂಜುರಿಯನ್ನು ಎಕ್ಸ್-ರೇ (Xray)ಅಥವಾ MRI ಮೂಲಕ ಕಂಡುಹಿಡಿಯಲಾಗುತ್ತೆ. ಇದರಲ್ಲಿ ಮೂರು ವಿಧಗಳಿವೆ:
ಗ್ರೇಡ್ 1: ಗಾಯ ಹಗುರವಾಗಿರುತ್ತೆ ಮತ್ತು ಲಿಗಮೆಂಟ್ ಗೆ ಹೆಚ್ಚಿನ ಹಾನಿ ಉಂಟುಮಾಡೋದಿಲ್ಲ.
ಗ್ರೇಡ್ 2: ಈ ರೀತಿಯ ಗಾಯದಲ್ಲಿ, ಲಿಗಮೆಂಟ್ ಟಿಯರ್ ಉಂಟಾಗಿರುತ್ತದೆ..
ಗ್ರೇಡ್ 3: ಇದು ಗಂಭೀರ ರೀತಿಯ ಗಾಯವಾಗಿದೆ. ಇದರಲ್ಲಿ ಲಿಗಮೆಂಟ್ ಸಂಪೂರ್ಣವಾಗಿ ಮುರಿದಿರುತ್ತೆ ಮತ್ತು ಸಾಕಷ್ಟು ನೋವು ಇರುತ್ತೆ.

ಲಿಗಮೆಂಟ್ ಟಿಯರ್‌ನ(Ligament tear) ಲಕ್ಷಣಗಳೇನು?
ಲಿಗಮೆಂಟ್ ಇಂಜುರಿಯಾದಾಗ, ಗಾಯದ ಸ್ಥಳವನ್ನು ಸ್ಪರ್ಶಿಸುವಾಗ ಸಾಕಷ್ಟು ನೋವು ಉಂಟಾಗುತ್ತೆ.
ಸ್ನಾಯು ಸೆಳೆತವನ್ನು ಅನುಭವಿಸಬಹುದು.
ಗಾಯವು ಎಲ್ಲೆಲ್ಲಿ ಸಂಭವಿಸಿದೆಯೋ ಅಲ್ಲಿ, ಊತವೂ ಇರಬಹುದು.

ನಡೆದಾಡೋದರಿಂದ(Walk) ಅಥವಾ ಗಾಯ ಆದ ಅಂಗವನ್ನು ಮೂವ್ ಮಾಡೋದ್ರಿಂದ ಸಾಕಷ್ಟು ತೊಂದರೆಗಳಾಗುತ್ತೆ.
ಲಿಗಮೆಂಟ್ ಕೀಲುಗಳನ್ನು ಬೆಂಬಲಿಸಲು ಮತ್ತು ಅವುಗಳನ್ನು ಬಲಪಡಿಸಲು ಸಾಕಷ್ಟು ಕೆಲಸ ಮಾಡುತ್ತೆ, ಆದ್ದರಿಂದ ಗಾಯದಿಂದಾಗಿ ಕೀಲುಗಳು ಬಾಗಿದರೂ ಸಹ ಇದು ಸಾಕಷ್ಟು ನೋವನ್ನು ಉಂಟುಮಾಡಬಹುದು.

ಲಿಗಮೆಂಟ್ ಟಿಯರ್‌ನ ಚಿಕಿತ್ಸೆ ಏನು?
ಲಿಗಮೆಂಟ್ ಟಿಯರ್ ಚಿಕಿತ್ಸೆಯು ವಯಸ್ಸು, ಉಳುಕಿನ ತೀವ್ರತೆ ಮತ್ತು ವ್ಯಕ್ತಿಯ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತೆ. ಗಾಯವು ಗಂಭೀರವಾಗಿಲ್ಲದಿದ್ದರೆ, ವ್ಯಕ್ತಿಯು ವಿಶ್ರಾಂತಿ ಪಡೆಯಲು, ಕೋಲ್ಡ್ ಕಂಪ್ರೆಷನ್ (Cold Compression)ಮತ್ತು ಕಾಲನ್ನು ಎತ್ತರದಲ್ಲಿಡಲು ಸಲಹೆ ನೀಡಲಾಗುತ್ತೆ. 

ಲಿಗಮೆಂಟ್ ಇಂಜುರಿಯಿಂದ ನೋವು ತುಂಬಾ ಹೆಚ್ಚಿದ್ದರೆ ಡಾಕ್ಟರ್ ಹತ್ತಿರ ಹೋಗಿ, ಅವರು ನಿಮಗೆ ಪೈನ್ ಕಿಲ್ಲರ್(Pin killer) ಔಷಧಿಗಳನ್ನು ನೀಡಬಹುದು. ಗಾಯವು ಮೊಣಕಾಲಿನ ಮೇಲಿದ್ದರೆ, ಬ್ರೇಸ್ ಧರಿಸುವುದು ಒಳ್ಳೆಯದು. ಉರಿಯೂತ  ಕಡಿಮೆ ಮಾಡಲು ಐಸ್ ಯೂಸ್ ಮಾಡೋದು ಪ್ರಯೋಜನಕಾರಿ. ತೀವ್ರವಾದ ಸಂದರ್ಭಗಳಲ್ಲಿ ಸರ್ಜರಿ ಸಹ ಮಾಡಬೇಕಾಗಬಹುದು.

click me!