Ind vs SL ಲಂಕಾ ಎದುರಿನ ಎರಡನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ..?

Published : Jan 05, 2023, 01:01 PM IST

ಪುಣೆ(ಜ.05): ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ  

PREV
111
Ind vs SL ಲಂಕಾ ಎದುರಿನ ಎರಡನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ..?

1. ಶುಭ್‌ಮನ್ ಗಿಲ್‌: ಸ್ಪೋಟಕ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಮೊದಲ ಟಿ20 ಪಂದ್ಯದಲ್ಲಿ ಕೇವಲ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇದೀಗ ಎರಡನೇ ಟಿ20 ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಿಸಿ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.
 

211

2. ಇಶಾನ್ ಕಿಶನ್‌: ವಿಕೆಟ್ ಕೀಪರ್ ಬ್ಯಾಟರ್ ಇಶಾನ್‌ ಕಿಶನ್‌, ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುವ ಕ್ಷಮತೆ ಹೊಂದಿದ್ದಾರೆ

311

3. ಸೂರ್ಯಕುಮಾರ್ ಯಾದವ್: ಟೀಂ ಇಂಡಿಯಾ ಹಂಗಾಮಿ ಉಪನಾಯಕ ಸೂರ್ಯಕುಮಾರ್ ಯಾದವ್, ಮೊದಲ ಪಂದ್ಯದಲ್ಲಿ ಕೇವಲ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ತಂಡ ಸೂರ್ಯ ಅವರಿಂದ ದೊಡ್ಡ ಇನಿಂಗ್ಸ್ ನಿರೀಕ್ಷಿಸುತ್ತಿದೆ.

411

4. ರಾಹುಲ್ ತ್ರಿಪಾಠಿ: ಮಂಡಿ ನೋವಿನ ಸಮಸ್ಯೆಯಿಂದ ಸಂಜು ಸ್ಯಾಮ್ಸನ್‌ ಇದೀಗ  ಟಿ20 ಸರಣಿಯಿಂದ ಹೊರಬಿದ್ದಿದ್ದು, ರಾಹುಲ್ ತ್ರಿಪಾಠಿ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ. ತ್ರಿಪಾಠಿ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

511

5. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ್ದರು. ಬ್ಯಾಟಿಂಗ್‌ನಲ್ಲಿ 27 ಎಸೆತಗಳಲ್ಲಿ 29 ರನ್ ಬಾರಿಸಿದ್ದ ಪಾಂಡ್ಯ, ಬೌಲಿಂಗ್‌ನಲ್ಲಿ 3 ಓವರ್‌ ಮಾಡಿ ಕೇವಲ 12 ರನ್‌ಗಳನ್ನಷ್ಟೇ ನೀಡಿದ್ದರು.
 

611

6. ದೀಪಕ್ ಹೂಡಾ: ಮೊದಲ ಟಿ20 ಪಂದ್ಯದಲ್ಲಿ ದೀಪಕ್ ಹೂಡಾ 23 ಎಸೆತಗಳಲ್ಲಿ ಅಜೇಯ 41 ರನ್ ಬಾರಿಸದ್ದೇ ಹೋಗಿದ್ದರೇ ಟೀಂ ಇಂಡಿಯಾ 160ರ ಗಡಿ ದಾಟುವುದು ಅನುಮಾನ ಎನಿಸುತ್ತಿತ್ತು. ಭಾರತ ತಂಡವು ಎರಡನೇ ಪಂದ್ಯದಲ್ಲೂ ಹೂಡಾ ಅವರಿಂದ ಸ್ಪೋಟಕ ಇನಿಂಗ್ಸ್‌ ನಿರೀಕ್ಷಿಸುತ್ತಿದೆ.

711

7. ಅಕ್ಷರ್ ಪಟೇಲ್: ಆಲ್ರೌಂಡರ್ ಅಕ್ಷರ್ ಪಟೇಲ್, ಬೌಲಿಂಗ್‌ನಲ್ಲಿ ಕೊಂಚ ದುಬಾರಿಯಾದರೂ ಸಹಾ, ಬ್ಯಾಟಿಂಗ್‌ನಲ್ಲಿ ದೀಪಕ್ ಹೂಡಾ ಜತೆಗೂಡಿ ಅಮೂಲ್ಯ ಜತೆಯಾಟ ನಿಭಾಯಿಸಿದ್ದರು. ಅಕ್ಷರ್ ಕೇವಲ 20 ಎಸೆತಗಳಲ್ಲಿ 31 ರನ್ ಸಿಡಿಸಿದ್ದರು.
 

811

8. ಆರ್ಶದೀಪ್ ಸಿಂಗ್: ಯುವ ಎಡಗೈ ವೇಗಿ ಆರ್ಶದೀಪ್ ಸಿಂಗ್, ಎರಡನೇ ಟಿ20 ಪಂದ್ಯಕ್ಕೂ ಮುನ್ನ ಸಂಪೂರ್ಣ ಫಿಟ್ ಆಗಿದ್ದು, ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ. ಹೀಗಾದಲ್ಲಿ ಹರ್ಷಲ್ ಪಟೇಲ್‌ ಹೊರಗುಳಿಯಬೇಕಾಗುತ್ತದೆ.

911

9. ಶಿವಂ ಮಾವಿ: ಚೊಚ್ಚಲ ಟಿ20 ಪಂದ್ಯದಲ್ಲೇ ಮಾರಕ ದಾಳಿ ನಡೆಸುವ ಮೂಲಕ ಶಿವಂ ಮಾವಿ ತಮ್ಮ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದರು. ಶಿವಂ ಮಾವಿ ಮೊದಲ ಪಂದ್ಯದಲ್ಲಿ 22 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದ್ದು, ಅದೇ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
 

1011

10. ಉಮ್ರಾನ್ ಮಲಿಕ್‌: ಟೀಂ ಇಂಡಿಯಾದ ಮಾರಕ ವೇಗಿ ಉಮ್ರಾನ್ ಮಲಿಕ್, ತಮ್ಮ ವೇಗದ ದಾಳಿಯ ಮೂಲಕವೇ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ. ಮೊದಲ ಪಂದ್ಯದಲ್ಲಿ ಮಲಿಕ್ ಕೇವಲ 27 ರನ್ ನೀಡಿ 2 ಬಲಿ ಪಡೆದಿದ್ದರು.
 

1111

11. ಯುಜುವೇಂದ್ರ ಚಹಲ್:  ಅನುಭವಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್‌, ಮೊದಲ ಪಂದ್ಯದಲ್ಲಿ ಕೊಂಚ ದುಬಾರಿಯಾಗಿದ್ದರು. ಎರಡು ಓವರ್‌ನಲ್ಲಿ ಚಹಲ್ 26 ರನ್ ನೀಡಿದ್ದರು. ಹೀಗಿದ್ದೂ ಚಹಲ್‌ಗೆ ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆಯಿದೆ.
 

Read more Photos on
click me!

Recommended Stories