ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತೆ ಮೂಲಂಗಿ ಎಲೆ ಜ್ಯೂಸ್

First Published Jan 21, 2023, 5:40 PM IST

ಮೂಲಂಗಿ ಆರೋಗ್ಯಕ್ಕೆ ಒಂದು ದಿವ್ಯೌಷಧ . ಇದು ಪೋಷಕಾಂಶಗಳ ಆಗರ. ಇದನ್ನು ಸಾಮಾನ್ಯವಾಗಿ ಸಾಂಬಾರ್‌ನಲ್ಲಿ ಬಳಸುತ್ತೀರಿ ಗೊತ್ತು. ಆದರೆ ಇದರ ಎಲೆಗಳು ಸಹ ತುಂಬಾ ಪ್ರಯೋಜನಕಾರಿ ಅನ್ನೋದು ಗೊತ್ತಾ?. ಚಳಿಗಾಲದ ಆಹಾರದಲ್ಲಿ ಮೂಲಂಗಿ ಎಲೆಯ ಜ್ಯೂಸ್ ಸೇರಿಸಬಹುದು ಇದರಿಂದ ನೀವು ಅನೇಕ ರೀತಿಯ ಸಮಸ್ಯೆಗಳನ್ನು ತಪ್ಪಿಸಬಹುದು.

ಚಳಿಗಾಲದಲ್ಲಿ(Winter) ಅನೇಕ ರೀತಿಯ ಹಸಿರು ಎಲೆ ತರಕಾರಿಗಳು ಲಭ್ಯವಿವೆ. ಅವು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಇದನ್ನು ಸೇವಿಸುವ ಮೂಲಕ,  ಅನೇಕ ರೋಗಗಳನ್ನು ತಪ್ಪಿಸಬಹುದು. ಈ ಹಸಿರು ಎಲೆಗಳ ತರಕಾರಿಗಳಲ್ಲಿ ಮೂಲಂಗಿ ಸೇರಿದೆ, ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮೂಲಂಗಿ ಜೊತೆಗೆ, ಅದರ ಎಲೆಗಳು ಸಹ ಆರೋಗ್ಯದ ನಿಧಿಯಾಗಿದೆ.

 ಮೂಲಂಗಿ ಎಲೆಗಳಲ್ಲಿ(Radish leaves) ವಿಟಮಿನ್-ಸಿ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತೆ. ನೀವು ಚಳಿಗಾಲದ ಆಹಾರದಲ್ಲಿ ಮೂಲಂಗಿ ಎಲೆಯ ರಸವನ್ನು ಸೇರಿಸಿದ್ರೆ, ಅದು ಈ ಋತುವಿನಲ್ಲಿ ಅನೇಕ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತೆ. ಆದ್ದರಿಂದ ಮೂಲಂಗಿ ಎಲೆಯ ರಸದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

1. ಜೀರ್ಣಾಂಗ ವ್ಯವಸ್ಥೆಗೆ(Digestion) ಸಹಾಯಕ

ಮೂಲಂಗಿ ಎಲೆಗಳಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತೆ. ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನೀವು ಮೂಲಂಗಿ ಎಲೆಗಳ ಜ್ಯೂಸ್ ಸೇವಿಸಬಹುದು. ಆದರೆ ಅದನ್ನು ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು ಅನ್ನೋದನ್ನು ನೀವು ತಜ್ಞರಿಂದ ತಿಳಿದುಕೊಂಡರೆ ಉತ್ತಮ.
 

2. ರೋಗನಿರೋಧಕ ಶಕ್ತಿ(Immunity power) ಹೆಚ್ಚಿಸಲು ಸಹಾಯ ಮಾಡುತ್ತೆ

ತಜ್ಞರ ಪ್ರಕಾರ, ಮೂಲಂಗಿ ಎಲೆಗಳಲ್ಲಿ ರಂಜಕ ಮತ್ತು ಕಬ್ಬಿಣವು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತೆ. ಇದು ಇಮ್ಮ್ಯೂನಿಟಿ  ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತೆ . ಇದರಿಂದ ನೀವು ಅನೇಕ ರೋಗಗಳನ್ನು ತಪ್ಪಿಸಬಹುದು.

3. ಕಡಿಮೆ ರಕ್ತದೊತ್ತಡ(Low blood pressure) ರೋಗಿಗಳಿಗೆ ಪ್ರಯೋಜನಕಾರಿ

ಮೂಲಂಗಿ ಎಲೆ ಜ್ಯೂಸ್ ಕಡಿಮೆ ರಕ್ತದೊತ್ತಡ ರೋಗಿಗಳಿಗೆ ಪ್ರಯೋಜನಕಾರಿ. ಇದರಲ್ಲಿರುವ ಸೋಡಿಯಂ ಕಡಿಮೆ ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತೆ

4. ತೂಕ ಇಳಿಸಿಕೊಳ್ಳಲು(Weight loss) ಸಹಾಯಕ

ತೂಕ ಇಳಿಸಿಕೊಳ್ಳಲು ಬಯಸೋದಾದ್ರೆ, ಮೂಲಂಗಿ ಎಲೆಗಳು ಸಹಾಯಕ. ಚಳಿಗಾಲದಲ್ಲಿ ನಾವು ಹೆಚ್ಚಾಗಿ ಆಕ್ಟೀವ್ ಆಗಿರದೇ ಇರೋದರಿಂದ ತೂಕ ವೇಗವಾಗಿ ಹೆಚ್ಚಾಗುತ್ತೆ, ಈ ಟೈಮ್ ಲ್ಲಿ ನೀವು ಮೂಲಂಗಿ ಎಲೆಯ ರಸವನ್ನು ದೈನಂದಿನ ಆಹಾರದಲ್ಲಿ ಸೇರಿಸಬಹುದು. ಆಗ ತೂಕ ಕಡಿಮೆಯಾಗುತ್ತೆ. 

ಮೂಲಂಗಿ ಎಲೆಗಳಿಂದ ಜ್ಯೂಸ್ (Juice)ಹೀಗೆ ತಯಾರಿಸಿ

ಮೊದಲು ಮೂಲಂಗಿ ಎಲೆಗಳನ್ನು ತೊಳೆಯಿರಿ. ನಂತರ ಎಲೆಗಳನ್ನು ಕತ್ತರಿಸಿ. ಅದನ್ನು ಗ್ರೈಂಡರ್ ನಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ನಿಂಬೆ ರಸ, ಉಪ್ಪು ಮತ್ತು ಒಂದು ಚಿಟಿಕೆ ಕರಿಮೆಣಸಿನ ಪುಡಿಯನ್ನು ಸೇರಿಸಿ.ಈಗ ಮೂಲಂಗಿ ಎಲೆಗಳ ಜ್ಯೂಸ್ ರೆಡಿಯಾಗುತ್ತೆ. 

ಚಳಿಗಾಲದಲ್ಲಿ ಹೀಗೆ ಮೇಲೆ ಹೇಳಿರುವ ಹಾಗೆ ಮೂಲಂಗಿ ಎಲೆಗಳ ಜ್ಯೂಸ್ ಕುಡಿಯಿರಿ, ನಂತರ ಆರೋಗ್ಯಕ್ಕೆ(Health) ಆಗೋ ಜಾದೂವನ್ನು ನೀವೇ ಕಣ್ಣಾರೆ ನೋಡಿ.  
 

click me!