Insulin resistance ಬಗ್ಗೆ ಎಚ್ಚರದಿಂದಿರಿ… ಇಲ್ಲಾಂದ್ರೆ ಆರೋಗ್ಯಕ್ಕೆ ಮಾರಕ
First Published | Aug 17, 2022, 6:48 PM ISTಮಧುಮೇಹ ಮತ್ತು ಇನ್ಸುಲಿನ್ ನಡುವೆ ನೇರ ಸಂಬಂಧವಿದೆ. ಟೈಪ್ 1 ಡಯಾಬಿಟಿಸ್ ಇದ್ದರೆ, ರೋಗಿಯ ದೇಹ ಇನ್ಸುಲಿನ್ ತಯಾರಿಸೋದನ್ನು ನಿಲ್ಲಿಸುತ್ತೆ ಅಥವಾ ಕೆಲವೊಮ್ಮೆ ಅದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ತಯಾರಿಸಲಾಗುತ್ತೆ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತೆ. ಟೈಪ್ 2 ಮಧುಮೇಹದಲ್ಲಿ, ರೋಗಿಯ ದೇಹದಲ್ಲಿ ಇನ್ಸುಲಿನ್ ತಯಾರಿಸಲಾಗುತ್ತೆ, ಆದರೆ ಪ್ರತಿರೋಧದ ಕಾರಣದಿಂದಾಗಿ, ಅದನ್ನು ಸರಿಯಾಗಿ ಬಳಸಲಾಗೋದಿಲ್ಲ. ಇನ್ಸುಲಿನ್ ಉತ್ಪಾದಿಸಿದರೆ ಮತ್ತು ದೇಹದಲ್ಲಿ ಸರಿಯಾಗಿ ಬಳಸಿದರೆ, ಆಗ ಮಧುಮೇಹದ ಅಪಾಯವಿರೋದಿಲ್ಲ .