ಉದ್ದಿನ ಬೇಳೆಯಲ್ಲಿ ಏನಿದೆ?ಪ್ರೋಟೀನ್ನ ಹೊರತಾಗಿ, ಉದ್ದಿನ ಬೇಳೆಯಲ್ಲಿ ಕೊಬ್ಬು, ಕಾರ್ಬೋಹೈಡ್ರೇಟ್ಗಳು, ವಿಟಮಿನ್ ಬಿ, ಕಬ್ಬಿಣ, ಫೋಲಿಕ್ ಆಮ್ಲ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಎಂಬ ಪೋಷಕಾಂಶಗಳಿವೆ. ಅನೇಕ ರೋಗಗಳಿಂದ ದೇಹವನ್ನು ರಕ್ಷಿಸಲು ಇದು ಸಹಾಯಕವೆಂದು ಪರಿಗಣಿಸಲಾಗಿದೆ.
ಆರೋಗ್ಯ ತಜ್ಞರ ಪ್ರಕಾರ, ಇಂಥಅನೇಕ ಪೋಷಕಾಂಶಗಳು ಉದ್ದಿನ ಬೇಳೆಯಲ್ಲಿವೆ, ಇವು ದೇಹಕ್ಕೆ ಒಳ್ಳೆಯದು. ಮಧುಮೇಹಕ್ಕೆ ಉದ್ದಿನ ಬೇಳೆಯನ್ನು ತುಂಬಾ ಒಳ್ಳೆಯದು.
ಆರೋಗ್ಯ ತಜ್ಞರ ಪ್ರಕಾರ, ಉದ್ದಿನ ಬೇಳೆ ಫೈಬರ್ ಗುಣಲಕ್ಷಣಗಳಿಂದ ಸಮೃದ್ಧ.ಇದು ಸಕ್ಕರೆ ಮತ್ತು ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ.
ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಉದ್ದಿನ ಬೇಳೆಯನ್ನು ಸೇರಿಸಿಕೊಳ್ಳಬಹುದು.
ಉದ್ದಿನ ಬೇಳೆ ಕಬ್ಬಿಣದ ಕೊರತೆ ನೀಗಿಸುತ್ತದೆಉದ್ದಿನ ಬೇಳೆಯಲ್ಲಿ ಕಬ್ಬಿಣದ ಪ್ರಮಾಣವು ತುಂಬಾ ಒಳ್ಳೆಯದು. ಇದು ದೇಹದಲ್ಲಿ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಉದ್ದಿನ ಬೇಳೆ ಸೇವಿಸುವುದರಿಂದ ಮಹಿಳೆಯರಿಗೆ ತುಂಬಾ ಪ್ರಯೋಜನಗಳಿವೆ. ಆದುದರಿಂದ ಇದನ್ನು ನಿಯಮಿತವಾಗಿ ಸೇವಿಸಲು ಮರೆಯಬೇಡಿ.
ಉದ್ದಿನ ಬೇಳೆ ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಕರಗಬಲ್ಲ ಮತ್ತು ಕರಗದ ನಾರಿನಂಶವನ್ನು ಹೊಂದಿರುತ್ತದೆ,
ಜೀರ್ಣಕ್ರಿಯೆ, ಮಲಬದ್ಧತೆ ಮತ್ತು ಸೆಳೆತದ ಸಮಸ್ಯೆಯನ್ನು ಉದ್ದಿನ ಬೇಳೆ ಸೇವನೆಯಿಂದ ನಿವಾರಿಸಬಹುದು.
ತಲೆನೋವು ಪರಿಹಾರತಲೆನೋವಿನ ಸಮಸ್ಯೆ ಇದ್ದರೆ, ಉದ್ದಿನ ಬೇಳೆ ಸೇವಿಸುವುದರಿಂದ ಪರಿಹಾರ ಸಿಗುತ್ತದೆ. ಇದರಲ್ಲಿ ಕಂಡುಬರುವ ಮೆಗ್ನೀಷಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ದೇಹವನ್ನು ಆರೋಗ್ಯವಾಗಿಡಲು ಕೆಲಸ ಮಾಡುತ್ತದೆ.