ರೋಗ ನಿರೋಧಕ ಶಕ್ತಿಗೆ 'ಅಲೋವೆರಾ ಜ್ಯೂಸ್' : ಮಾಡೋದ್ಹೀಗೆ?

First Published | Jun 11, 2021, 3:52 PM IST

ಆಯುರ್ವೇದದಲ್ಲಿ ಅಲೋವೆರಾ ಬಹಳ ಮುಖ್ಯ. ಇದು ಸೌಂದರ್ಯದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತದೆ. ಇದರಲ್ಲಿ ವಿಟಮಿನ್, ಮಿನರಲ್ ಮತ್ತು ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಅತ್ಯಂತ ಪರಿಣಾಮಕಾರಿ. ಅಲ್ಲದೆ ಇದರ ರಸವನ್ನು ಸೇವಿಸುವುದರಿಂದ ಹೊಟ್ಟೆ, ಚರ್ಮದ ಸಮಸ್ಯೆ ಇತ್ಯಾದಿಗಳು ನಿವಾರಣೆಯಾಗುತ್ತದೆ. ಅದರ ಪ್ರಯೋಜನಗಳ ಬಗ್ಗೆ ನೋಡೋಣ.
 

ಅಲೋವೆರಾ ಜ್ಯೂಸ್ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಆಂಟಿ ಆಕ್ಸಿಡೆಂಟ್ ಆಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಕೊರೊನಾ ಅವಧಿಯಲ್ಲಿ ಇಮ್ಯೂನಿಟಿ ಬಲಪಡಿಸಲು ಅಲೋವೆರಾ ರಸಅತ್ಯಂತ ಪ್ರಯೋಜನಕಾರಿ. ಇದನ್ನು ಜ್ಯೂಸ್ ಮಾಡಿ ನಿರಂತರವಾಗಿ ಸೇವಿಸಿ.
Tap to resize

ಜೀರ್ಣ ಕ್ರಿಯೆ ಸಮಸ್ಯೆ ಇದ್ದರೆ ಅಲೋವೆರಾ ಸೇವಿಸಿ. ಅಲೋವೆರಾ ರಸಜೀರ್ಣಕ್ರಿಯೆಸುಧಾರಿಸಲು ಅತ್ಯಂತ ಸಹಾಯಕ.
ಅಲೋವೆರಾದಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಧಾರಿಸುವ ಅನೇಕ ಕಿಣ್ವಗಳು ಮತ್ತು ನಾರುಗಳಿವೆ. ಮಲಬದ್ಧತೆಗೆ ಚಿಕಿತ್ಸೆ ನೀಡಲು ಅಲೋವೆರಾ ರಸಬಳಸಬಹುದು.
ಅಲೋವೆರಾ ಜ್ಯೂಸ್ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು. ಏಕೆಂದರೆ ಅಲೋವೆರಾದಲ್ಲಿ ವಿಟಮಿನ್ ಬಿ ಸಮೃದ್ಧವಾಗಿದ್ದು, ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವುದಾದರೆ ಅಲೋವೆರಾ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯಿರಿ. ಪ್ರತಿದಿನ ಮುಂಜಾನೆಯನ್ನುಅಲೋವೆರಾ ಜ್ಯೂಸ್ ನೊಂದಿಗೆ ಆರಂಭಿಸುವುದು ಉತ್ತಮ.
ಸಂಧಿವಾತದ ನೋವು ನಿವಾರಿಸುವಲ್ಲಿ ಅಲೋವೆರಾ ರಸಪ್ರಯೋಜನಕಾರಿ. ದೇಹದಲ್ಲಿ ನೋವಿನೊಂದಿಗೆ ಉರಿಯೂತವನ್ನು ಕಡಿಮೆ ಮಾಡಬಲ್ಲದು ಇದು.
ಹೊಟ್ಟೆ ನೋವು ಮೊದಲಾದ ಸಮಸ್ಯೆ ಇದ್ದರೆ ಮಕ್ಕಳಿಗೆ ಇದನ್ನು ನೀಡಿದರೆ ಉತ್ತಮ. ಇದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ ಮಕ್ಕಳ ಅರೋಗ್ಯ ಉತ್ತಮವಾಗುತ್ತದೆ.

Latest Videos

click me!