ನಮ್ಮ ಅಜ್ಜ, ಮುತ್ತಜ್ಜರು ಯಾವುದೇ ರೋಗಗಳಿಲ್ಲದೆ 90 ರಿಂದ 100 ವರ್ಷ ಆರೋಗ್ಯವಾಗಿ ಬದುಕಿದ್ದನ್ನು ನಾವು ಕೇಳಿದ್ದೇವೆ. ಆದರೆ ಈಗ 20, 30 ವರ್ಷಕ್ಕೆ ಕಾಲು ನೋವು, ಕೀಲು ನೋವು, ಮಧುಮೇಹ, ಹೃದ್ರೋಗ ಇತ್ಯಾದಿಗಳಿಂದ ಬಳಲುತ್ತಿದ್ದೇವೆ. ಹಿಂದಿನವರು ಆರೋಗ್ಯವಾಗಿರಲು ಕಾರಣವೇನೆಂದು ಯೋಚಿಸಿದ್ದೀರಾ? ಅದರಲ್ಲಿ ಯಾವುದೇ ರಹಸ್ಯವಿಲ್ಲ. ಅವರು ದೈಹಿಕ ಶ್ರಮ ಹೆಚ್ಚು ಮಾಡುತ್ತಿದ್ದರು, ಕಲಬೆರಕೆಯಿಲ್ಲದ ಆಹಾರ ಸೇವಿಸುತ್ತಿದ್ದರು ಮತ್ತು ಸರಿಯಾದ ಸಮಯಕ್ಕೆ ಊಟ ಮಾಡುತ್ತಿದ್ದರು. ಇದೇ ಅವರ ಆರೋಗ್ಯದ ಗುಟ್ಟು ಎನ್ನುತ್ತಾರೆ ಆರೋಗ್ಯ ತಜ್ಞರು.