ಟೀ, ಕಾಫಿ ಕುಡಿಯುವ ಮೊದಲು ನೀರು ಕುಡಿಯಬೇಕು ಯಾಕೆ?

First Published | Dec 18, 2024, 5:18 PM IST

ಟೀ ಅಥವಾ ಕಾಫಿ ಕುಡಿಯುವ ಮೊದಲು ನೀರು ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಚಹಾ ಮತ್ತು ಕಾಫಿಯಲ್ಲಿರುವ ಟ್ಯಾನಿನ್ ಎಂಬ ಸಂಯುಕ್ತವು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಚಹಾ/ಕಾಫಿ ಕುಡಿಯುವ ಮೊದಲು ನೀರು ಕುಡಿಯುವುದು ಉತ್ತಮ.

ಬೆಳಗ್ಗೆ ಎದ್ದ ಕೂಡಲೇ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ.  ಚಹಾ ಅಥವಾ ಕಾಫಿ ಇಲ್ಲದೇ ಅವರ ದಿನವೇ ಪ್ರಾರಂಭವಾಗಲ್ಲ. ಇಷ್ಟು ಮಾತ್ರವಲ್ಲ ಹೊರಗೆ ಹೋದಾಗಲೂ ಜನರು ಕಾಫಿ/ಟೀ ಕುಡಿಯುತ್ತಾರೆ. ಮನೆಗೆ ಅತಿಥಿಗಳು ಬಂದರೂ ಅವರಿಗೆ ಕಾಫಿ/ಟೀ ನೀಡಿ ಸ್ವಾಗತಿಸುತ್ತಾರೆ. ಕೆಲವರು ಕಾಫಿ/ಟೀಗೆ ವ್ಯಸನಿಗಳಾಗುತ್ತಾರೆ.

ಅತಿಯಾದ ಕಾಫಿ ಮತ್ತು ಟೀ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಎರಡೂ ಪಾನೀಯ ಕುಡಿಯುವ ಮುನ್ನ ನೀರು ಕುಡಿಯಬೇಕು ಎಂದು ಆರೋಗ್ಯತಜ್ಞರು ಹೇಳುತ್ತಾರೆ. ಎಷ್ಟು ಸಮಯಕ್ಕೂ ಮೊದಲು ನೀರು ಕುಡಿಯಬೇಕು ಎಂಬ ನಿಯಮವಿದೆ. 

Tap to resize

ಟೀ, ಕಾಫಿಗಳಲ್ಲಿ ಅಸಿಡಿಟಿ ಹೆಚ್ಚಿರುವುದರಿಂದ ಹೆಚ್ಚು ಕುಡಿದರೆ ಹೊಟ್ಟೆನೋವು, ಹೊಟ್ಟೆ ಉಬ್ಬರ, ಅಜೀರ್ಣ, ಹೊಟ್ಟೆಯಲ್ಲಿ ತೊಂದರೆ ಇತ್ಯಾದಿ ಸಮಸ್ಯೆಗಳು ಬರುತ್ತವೆ . ಈ ವಿಷಯ ಗೊತ್ತಿಲ್ಲದೇ ಕೆಲವರು ದಿನಕ್ಕೆ ಮೂರರಿಂದ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಟೀ ಅಥವಾ ಕಾಫಿ ಕುಡಿಯುತ್ತಾರೆ. ಈ ಸಮಸ್ಯೆಗಳಿಂದ ದೂರವಾಗಲು ನೀರು ಕುಡಿಯಬೇಕು. ಎಷ್ಟು ಮತ್ತು ಯಾವಾಗ ಕುಡಿಯಬೇಕು ಎಂಬುದರ ಮಾಹಿತಿ ಇಲ್ಲಿದೆ.

ಚಹಾ ಮತ್ತು ಕಾಫಿಯಲ್ಲಿರುವ ಟ್ಯಾನಿನ್ ಎಂಬ ಸಂಯುಕ್ತವು ಕರುಳಿನ ಅಂಗಾಂಶವನ್ನು ಹಾನಿಗೊಳಿಸಿ, ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಹೊಟ್ಟೆನೋವು, ವಾಂತಿ, ವಾಕರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳಿಂದ ದೂರವಿರಲು  ಚಹಾ ಮತ್ತು ಕಾಫಿ ಕುಡಿಯುವ ಸುಮಾರು 15 ನಿಮಿಷಗಳ ಮೊದಲು 1 ಗ್ಲಾಸ್ ನೀರು ಕುಡಿಯಬೇಕು. ಇದರಿಂದ ಏನಾಗುತ್ತೆ ಅಂತ ನೋಡೋಣ ಬನ್ನಿ.

ಯಾಕೆ ನೀರು ಕುಡಿಯಬೇಕು?
ಚಹಾ ಮತ್ತು ಕಾಫಿ ಹೊಟ್ಟೆಯ ಆಮ್ಲವನ್ನು ಸೃಷ್ಟಿಸುತ್ತದೆ.  ಚಹಾ ಮತ್ತು ಕಾಫಿ ಕುಡಿಯುವ ಮುನ್ನ ಒಂದು ಲೋಟ ನೀರು ಕುಡಿಯುವುದರಿಂದ ದೇಹದಲ್ಲಿ ಸರಿಯಾದ ಪಿಹೆಚ್ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ, ಆದ್ದರಿಂದ ಚಹಾ ಅಥವಾ ಕಾಫಿ ಕುಡಿಯುವ ಮೊದಲು ನೀರನ್ನು ಕುಡಿಯಲು ಸೂಚಿಸಲಾಗುತ್ತದೆ. ಅಲ್ಲದೆ ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ.

ಹಲ್ಲಿನ ಸಮಸ್ಯೆಗಳನ್ನು ತಡೆಯುತ್ತದೆ
ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದರಿಂದ ಹಲ್ಲಿನ ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ಕೆಫೀನ್ ಟ್ಯಾನಿನ್ ಎಂಬ ರಾಸಾಯನಿಕವನ್ನು ಹೊಂದಿದ್ದು, ಇದು ದಂತಕ್ಷಯವನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಟೀ, ಕಾಫಿ ಕುಡಿಯುವ ಮೊದಲು ಒಂದು ಲೋಟ ನೀರು ಕುಡಿದರೆ ದಂತ ಸಮಸ್ಯೆಗಳು ಬರುವುದಿಲ್ಲ.

ಅಲ್ಸರ್ ಸಮಸ್ಯೆ ಇಲ್ಲ
ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವುದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಅಲ್ಸರ್ ಬರುವ ಸಾಧ್ಯತೆಯೂ ಹೆಚ್ಚು. ಆದ್ದರಿಂದ ನೀವು ಚಹಾ ಅಥವಾ ಕಾಫಿ ಕುಡಿಯುವ ಮೊದಲು ಬೆಳಿಗ್ಗೆ ಒಂದು ಲೋಟ ನೀರು ಕುಡಿಯಿರಿ. ಅದರ ನಂತರವೇ ನೀವು ಚಹಾ ಮತ್ತು ಕಾಫಿ ಕುಡಿಯಬೇಕು. ಹೀಗೆ ಮಾಡುವುದರಿಂದ ಅಲ್ಸರ್ ಸಮಸ್ಯೆಗಳು ಮತ್ತು ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

Latest Videos

click me!