ಹೃದಯ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ? ಮನೆಯಿಂದಲೇ ಈ ರೀತಿ ಪರೀಕ್ಷಿಸಿ

First Published May 14, 2021, 5:52 PM IST

ಈ ಸಮಯದಲ್ಲಿ ವಿಶ್ವದಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಕೊರೋನಾ ವೈರಸ್. ಆದರೆ ನಾವು ಇತರ ರೋಗಗಳನ್ನು ನಿರ್ಲಕ್ಷಿಸುವಂತಿಲ್ಲ. ವಿಶೇಷವಾಗಿ ಹೃದ್ರೋಗದಂತಹ ಕಾಯಿಲೆ, ಇದರಿಂದಾಗಿ ಪ್ರತಿವರ್ಷ ವಿಶ್ವದಾದ್ಯಂತ ಹೆಚ್ಚಿನ ಜನರು ಸಾಯುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ-ಡಬ್ಲ್ಯುಎಚ್ಒ ಅಂಕಿ ಅಂಶಗಳ ಪ್ರಕಾರ, ಪ್ರತಿವರ್ಷ ಸುಮಾರು 18 ಮಿಲಿಯನ್ ಜನರು ಹೃದ್ರೋಗದಿಂದ ಸಾಯುತ್ತಾರೆ.

ಹೃದಯವನ್ನು ಆರೋಗ್ಯಕರವಾಗಿರಿಸುವುದು ಬಹಳ ಮುಖ್ಯ ಮತ್ತು ಹೃದಯದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ, ರೋಗಹೊರ ಹೊಮ್ಮುವ ಮೊದಲು ಕಂಡುಹಿಡಿಯುವುದು ಸಹ ಮುಖ್ಯ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಕೆಲವು ಸುಲಭ ಪರೀಕ್ಷೆಗಳ ಮೂಲಕ ಹೃದಯದ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ ಎಂದು ಎಲ್ಲಿದೆ ನೋಡಿ. ಅದರ ಸಹಾಯದಿಂದ, ಹೃದಯಸಂಪೂರ್ಣವಾಗಿ ಆರೋಗ್ಯಕರವಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ತಿಳಿಯುವಿರಿ.
undefined
1. ಮೆಟ್ಟಿಲುಗಳ ಪರೀಕ್ಷೆ - ಹೃದಯ ಆರೋಗ್ಯಕರವಾಗಿದೆಯೇ ಎಂದು ಕಂಡು ಹಿಡಿಯಲು ಸುಲಭವಾದ ಪರೀಕ್ಷೆ ಎಂದರೆ ಮೆಟ್ಟಿಲುಗಳನ್ನು ಹತ್ತುವುದು. 1 ನಿಮಿಷದಲ್ಲಿ 50 ರಿಂದ 60 ಮೆಟ್ಟಿಲುಗಳನ್ನು ಏರಿದರೆ, ಹೃದಯವು ಆರೋಗ್ಯಕರವಾಗಿದೆ ಎಂದು ಅರ್ಥಮಾಡಿಕೊಳ್ಳಿ .
undefined
60 ಮೆಟ್ಟಿಲುಗಳನ್ನು ಏರಲು ಒಂದೂವರೆ ಎರಡು ನಿಮಿಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಆರೋಗ್ಯವು ಸಂಪೂರ್ಣವಾಗಿ ಉತ್ತಮವಾಗಿಲ್ಲ ಎಂಬುದರ ಸಂಕೇತವಾಗಿದೆ.
undefined
2. ಜಾಮ್ ಜಾರ್ ಟೆಸ್ಟ್- ಜಾಮ್ನ ಬಾಟಲಿಯು ಹೃದಯ ಆರೋಗ್ಯಕರವಾಗಿದೆಯೋ, ಇಲ್ಲವೋ ಎಂಬ ಸುಳಿವನ್ನು ಸಹ ನಿಮಗೆ ನೀಡುತ್ತದೆ ಎಂದು ತಿಳಿದಿದೆಯೇ. ಸುಮಾರು 5 ಸಾವಿರ ಜನರ ಮೇಲೆ ನಡೆಸಿದ ಅಧ್ಯಯನವೊಂದರಲ್ಲಿ, ಬಲವಾದ ಹಿಡಿತ ಹೊಂದಿರುವ ಜನರ ಹೃದಯದ ಆರೋಗ್ಯವು ಉತ್ತಮವಾಗಿದೆ ಎಂದು ತಿಳಿದುಬಂದಿದೆ.
undefined
ಇದಕ್ಕೆ ಒಂದು ಉದಾಹರಣೆಯನ್ನು ಸಹ ನೀಡಲಾಗಿದೆ. ಅದು ಏನೆಂದರೆ ಜಾಮ್ ಬಾಟಲಿಯನ್ನು ಸುಲಭವಾಗಿ ತೆರೆದರೆ, ಹೃದಯವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಅದನ್ನು ತೆರೆಯಲು ಸಾಧ್ಯವಿಲ್ಲ ಎಂದಾದರೆ ಹೃದಯ ಹೆಚ್ಚು ಸಬಲವಾಗಿಲ್ಲ ಎಂದು ಅರ್ಥ.
undefined
3. ಏಳುವ, ಕುಳಿತುಕೊಳ್ಳುವ ಪರೀಕ್ಷೆ - ಒಂದು ಅಧ್ಯಯನದಲ್ಲಿ, 2 ಸಾವಿರ ಜನರನ್ನು ಮೊದಲು ನೇರವಾಗಿ ನಿಲ್ಲುವಂತೆ ಕೇಳಲಾಯಿತು, ನಂತರ ನೆಲದ ಮೇಲೆ ಕುಳಿತುಕೊಳ್ಳಿ (ಕಾಲು ಮಡಚಿ ಕೂರುವಂತೆ) ಮತ್ತು ಯಾವುದೇ ಸಹಾಯವಿಲ್ಲದೆ ಮತ್ತೆ ಎದ್ದು ನಿಲ್ಲುವಂತೆ ಸೂಚಿಸಲಾಯಿತು.
undefined
ತಮ್ಮ ದೇಹದ ಯಾವುದೇ ಭಾಗದ ಸಹಾಯವನ್ನು ತೆಗೆದುಕೊಳ್ಳದೆ ಸುಲಭವಾಗಿ ಎದ್ದು ನಿಂತವರಲ್ಲಿ ಹೃದ್ರೋಗದಿಂದ ಸಾವಿನ ಅಪಾಯವು ಶೇಕಡಾ 21 ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
undefined
4. ಎತ್ತರವನ್ನು ಪರಿಶೀಲಿಸಿ - ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿಪ್ರಕಟವಾದ ಅಧ್ಯಯನದ ಪ್ರಕಾರ, ಎತ್ತರವು ಹೃದ್ರೋಗದ ಅಪಾಯದ ಬಗ್ಗೆಯೂ ಹೇಳಬಹುದು. ಸರಾಸರಿ ಎತ್ತರವು ಪುರುಷರಿಗೆ 5 ಅಡಿ 9 ಇಂಚುಗಳು ಮತ್ತು ಮಹಿಳೆಯರಿಗೆ 5 ಅಡಿ 3 ಇಂಚುಗಳು.
undefined
ಈ ಸರಾಸರಿ ಎತ್ತರಕ್ಕಿಂತ ಕೇವಲ 2.5 ಇಂಚುಗಳಷ್ಟು ಕಡಿಮೆ ಇದ್ದರೂ ಸಹ, ಹೃದ್ರೋಗದ ಅಪಾಯವು 13.5 ಪ್ರತಿಶತದವರೆಗೆ ಇರುತ್ತದೆ ಎನ್ನಲಾಗಿದೆ. ನಿಮ್ಮ ಹೈಟ್ ಕಡಿಮೆ ಇದ್ದರೆ ಹೆಚ್ಚ ಆರೋಗ್ಯಯುತವಾಗಿರಲು ಪ್ರಯತ್ನಿಸಿ.
undefined
5. ಸೊಂಟದ ಗಾತ್ರ- ಸೊಂಟದ ಗಾತ್ರವು ಪೃಷ್ಟ ಭಾಗದ ಗಾತ್ರಕ್ಕಿಂತ ಹೆಚ್ಚಾಗಿದ್ದರೆ, ಹೃದ್ರೋಗ ಬರುವ ಅಪಾಯ ಹೆಚ್ಚು. ಇದು ಮಾತ್ರವಲ್ಲ, ಹೊಟ್ಟೆಯ ಸುತ್ತಲೂ ಹೆಚ್ಚು ಕೊಬ್ಬು ಇದ್ದರೆ ಅಂತಹವರಲ್ಲಿ ಹೃದಯ ಕಾಯಿಲೆಯ ಅಪಾಯ ಹೆಚ್ಚು.
undefined
ಸೊಂಟದ ಗಾತ್ರವನ್ನು ಕಡಿಮೆ ಮಾಡುವ ಮೂಲಕ, ಈ ಅಪಾಯದಿಂದ ದೂರವಾಗಬಹುದು. ಅದಕ್ಕಾಗಿ ಎಕ್ಸರ್ ಸೈಜ್, ಆಹಾರ ಕ್ರಮಗಳ ಮೇಲೆ ಹೆಚ್ಚು ಗಮನ ಹರಿಸಬೇಕು.
undefined
click me!