ನೀರಲ್ಲಿ ನೆನೆಸಿಟ್ಟ ಎರಡು ವಾಲ್ನಟ್ ಸೇವಿಸೋದ್ರಿಂದ ಇಷ್ಟು ಪ್ರಯೋಜನಗಳಿವೆ...

First Published | May 14, 2021, 9:23 AM IST

ನೆನೆಸಿದ ಬಾದಾಮಿ ತಿನ್ನುವುದರಿಂದ ಆಗುವ ಅನೇಕ ಪ್ರಯೋಜನಗಳ ಬಗ್ಗೆ ನೀವು ಕೇಳಿರಬಹುದು. ಹಸಿ ಬಾದಾಮಿಗಿಂತ ನೆನೆಸಿದ ಬಾದಾಮಿ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರಿಂದ ಹಿಡಿದು ಪೌಷ್ಟಿಕ ತಜ್ಞರವರೆಗೂ ಸಲಹೆ ನೀಡುತ್ತಾರೆ. ಬಾದಾಮಿಯಂತೆ ವಾಲ್ನಟ್ ಅನ್ನು ಕೂಡಾ, ನೀರಲ್ಲಿ ನೆನೆಸಿಟ್ಟು ತಿಂದರೆ ಅದ್ಬುತ ಪ್ರಯೋಜನಗಳನ್ನು ನೀಡುತ್ತದೆ. 

ವಾಲ್ನೆಟ್ ಅಥವಾ ಆಕ್ರೋಟ್ ಅನ್ನು ಒಣ ಹಣ್ಣುಗಳ ರಾಜಾ ಎಂದು ಕರೆಯುತ್ತಾರೆ. ಇದು ಮೆದುಳಿಗೆ ಮಾತ್ರ ಪ್ರಯೋಜನಕಾರಿಯಲ್ಲ, ನಮ್ಮ ಒಟ್ಟಾರೆ ಆರೋಗ್ಯಕ್ಕೂ ಬೇಕೇ ಬೇಕು.
undefined
ವಾಲ್‌ನಟ್‌ನಲ್ಲಿ ಪ್ರೋಟೀನ್, ಹೆಲ್ದಿ ಫ್ಯಾಟ್, ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಸಮೃದ್ಧವಾಗಿದೆ. ಆದರೆ ವಾಲ್ ನಟ್ಸ್ ಅನ್ನು ಕಚ್ಚಾ ತಿನ್ನುವ ಬದಲು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮರುದಿನ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಿದ್ದರೆ, ಅದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಪ್ರತಿದಿನ ನೆನೆಸಿದ ಕೇವಲ 2 ಆಕ್ರೋಟ್ ತಿಂದರೆ, ಅದು ಅನೇಕ ರೋಗಗಳಿಂದಕಾಪಾಡುತ್ತದೆ.
undefined

Latest Videos


ಕರೋನಾ ಹಿನ್ನೆಲೆಯಲ್ಲಿ ಈಗ ಬಹುತೇಕ ಮಂದಿ ವರ್ಕ್ ಫ್ರಮ್ ಹೋಂ ಮಾಡುತ್ತಿರುತ್ತಾರೆ. ಇದರಿಂದ ದೈಹಿಕ ಚಟುವಟಿಕೆಯೇಇಲ್ಲದಂತಾಗಿದೆ. ಇಂತಹ ಸಮಯದಲ್ಲಿ ವಾಲ್ನಟ್ ಸಹಾಯ ಮಾಡುತ್ತದೆ.
undefined
ಆಹಾರ ಸೇವಿಸಿದ ನಂತರ ದೀರ್ಘಕಾಲ ಕುಳಿತುಕೊಳ್ಳುವುದರಿಂದ, ಮಲಬದ್ಧತೆಸಮಸ್ಯೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ, ಫೈಬರ್ ತುಂಬಿದ ನೆನೆಸಿದ ಆಕ್ರೋಟ್ ಸೇವನೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
undefined
ನೆನೆಸಿದ ವಾಲ್ನಟ್ ತಿನ್ನುವುದರಿಂದ ದೇಹ ತೂಕ ಇಳಿಸಿಕೊಳ್ಳಬಹುದು. ಆಕ್ರೋಟ್ ನಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಮ್, ಐರನ್, ಕಾಪರ್, ಝಿಂಕ್ ಅಂಶಗಳು ಹೆಚ್ಚಿವೆ.
undefined
ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.
undefined
ನೆನೆಸಿದ ಆಕ್ರೋಟ್ ಸೇವನೆಯಿಂದ ಟೈಪ್ 2 ಡಯಾಬಿಟಿಸ್‌ನಿಂದಲೂ ಮುಕ್ತಿ ಸಿಗಬಹುದು. ಆಕ್ರೋಟ್ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
undefined
ನೆನೆಸಿದ ವಾಲ್‌ನಟ್‌ನಲ್ಲಿ ಅಲ್ಪಾ ಲಿನೊಲೆನಿಕ್ ಆಸಿಡ್ ಇರುತ್ತದೆ. ಇದು ಮೂಳೆಗಳನ್ನು ಬಲಿಷ್ಟಗೊಳಿಸುತ್ತದೆ.
undefined
ಮೂಳೆ ಮುರಿತಕ್ಕೊಳಗಾಗಿದ್ದರೆ, ಮರು ಜೋಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾಲ್ನಟ್‌ನಲ್ಲಿರುವ ಒಮೆಗಾ 3, ಫ್ಯಾಟಿ ಆಸಿಡ್ ಮೂಳೆಯ ಊತವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
undefined
click me!