Senior Citizens Day: 60ರ ನಂತರ ಈ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತೆ, ಜೋಪಾನ !

Published : Aug 21, 2022, 03:21 PM IST

ಪ್ರತಿ ವರ್ಷವೂ ಆಗಸ್ಟ್ 21 ನ್ನು ಹಿರಿಯ ನಾಗರಿಕರ ದಿನವನ್ನಾಗಿ ಆಚರಿಸಲಾಗುತ್ತದೆ. 60 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳನ್ನು ಹಿರಿಯ ನಾಗರಿಕರು ಎಂದು ಕರೆಯಲಾಗುತ್ತದೆ. ಈ ವಯಸ್ಸಿನಲ್ಲಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅಂತಹ ಪರಿಸ್ಥಿತಿಯಲ್ಲಿ, ನೀವು ಮತ್ತು ನಿಮ್ಮ ಮನೆಯ ಹಿರಿಯರು ಅದರ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಇಲ್ಲಾಂದ್ರೆ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಹಾಗಾದ್ರೆ ಹಿರಿಯ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆ ಅನ್ನೋದನ್ನು ನೋಡೋಣ.

PREV
110
Senior Citizens Day: 60ರ ನಂತರ ಈ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತೆ, ಜೋಪಾನ !

ಹಿರಿಯ ವಯಸ್ಕರನ್ನು ಬಾಧಿಸುವ ಆರೋಗ್ಯ ಸಮಸ್ಯೆಗಳು, ಸಂಬಂಧಿಕರಿಂದ ನಿಂದನೆ ಮತ್ತಿತರ  ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತೆ. ಪ್ರತಿ ವರ್ಷ, ಆಗಸ್ಟ್ 21 ಅನ್ನು ಹಿರಿಯ ನಾಗರಿಕರ ದಿನವಾಗಿ (senior citizens day) ಆಚರಿಸಲಾಗುತ್ತದೆ. ಇದು ಸಮಾಜಕ್ಕೆ ಹಿರಿಯರ ಕೊಡುಗೆಯನ್ನು ಗುರುತಿಸುವ ಮತ್ತು ಸ್ಮರಿಸುವ ದಿನವಾಗಿದೆ

210

ಭಾರತವನ್ನು ಯುವಕರ ದೇಶ ಎನ್ನಲಾಗುತ್ತೆ..ಹೌದು, ಭಾರತವನ್ನು ಯುವ ದೇಶ ಎಂದು ಕರೆಯಲಾಗುತ್ತೆ, ಏಕೆಂದರೆ ಇಲ್ಲಿನ ಜನಸಂಖ್ಯೆಯ 55.4 ಪ್ರತಿಶತದಷ್ಟು ಜನರು 15-60 ವರ್ಷ ವಯಸ್ಸಿನವರಾಗಿದ್ದಾರೆ. ಆದರೆ ಇಂದು ನಾವು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ತಲುಪಿದ ಜನಸಂಖ್ಯೆಯ ಬಗ್ಗೆ ಮಾತನಾಡುತ್ತಿದ್ದೇವೆ. ಈ ವಯಸ್ಸನ್ನು ತಲುಪಿದ ನಂತರ, ವ್ಯಕ್ತಿಯ ದೇಹವು ಮೊದಲಿನಂತೆ ಹಾರ್ಡ್ ವರ್ಕ್ ಮಾಡಲು ಸಾಧ್ಯವಾಗೋದಿಲ್ಲ. 

310

ರೋಗದಿಂದ ಬೇಗನೆ ಚೇತರಿಸಿಕೊಳ್ಳುವುದು, ಸೋಂಕುಗಳ ವಿರುದ್ಧ ಹೋರಾಡುವುದು ಇತ್ಯಾದಿ ತುಂಬಾ ಕಷ್ಟವಾಗಿರುತ್ತೆ. ವೃದ್ಧಾಪ್ಯವು (oldage) ಬಾಲ್ಯದಂತೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ, ಅವರ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ಇದರಿಂದ ಅವರು ತಮ್ಮ ಆರೋಗ್ಯವಂತರಾಗಿ ಉಳಿಯಬಹುದು.

410

ವಯಸ್ಸಾದವರಲ್ಲಿನ ಆರೋಗ್ಯ ಸಮಸ್ಯೆಗಳು (health problem) ಕುಟುಂಬದ ಇತಿಹಾಸ, ವಯಸ್ಸು ಮತ್ತು ಜೀವನ ವಿಧಾನದಿಂದಾಗಿ ಉಂಟಾಗುತ್ತೆ. ಹಾಗಾಗಿ, ನಿಮ್ಮ ಮನೆಯಲ್ಲಿ ವಯಸ್ಸಾದ ಜನರು ಇದ್ದರೆ, ಅವರನ್ನು ಕಾಲಕಾಲಕ್ಕೆ ನಿಯಮಿತ ತಪಾಸಣೆಗಾಗಿ ವೈದ್ಯರ ಬಳಿಗೆ ಕರೆದೊಯ್ಯೋದು ಮುಖ್ಯ. ಅದೇ ಸಮಯದಲ್ಲಿ, ವೃದ್ಧಾಪ್ಯದಲ್ಲಿ ಕಳವಳಕಾರಿ ವಿಷಯವಾಗಬಹುದಾದ ಕೆಲವು ಸಾಮಾನ್ಯ ರೋಗಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
 

510

ನ್ಯುಮೋನಿಯಾ ಮತ್ತು ಫ್ಲೂ ಅಪಾಯ ಹೆಚ್ಚಾಗುತ್ತೆ
ನ್ಯುಮೋನಿಯಾ (pneumonia) ಮತ್ತು ಫ್ಲೂ (flue) ದೀರ್ಘಕಾಲದ ಕಾಯಿಲೆಗಳಾಗಿರಬಹುದು. ಆದರೆ ಈ ರೋಗವು ಹಿರಿಯ ನಾಗರಿಕರಲ್ಲಿ ಅತ್ಯಂತ ಸಾಮಾನ್ಯವಾಗಿದೆ. ವಯಸ್ಸಾದ ಜನರ ದೇಹವು ಈ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿಲ್ಲ. ಹಾಗಾಗಿ ಹಿರಿಯ ಜನರ ಉತ್ತಮ ಆರೋಗ್ಯಕ್ಕಾಗಿ, ಪ್ರತಿ ವರ್ಷ ಫ್ಲೂಗೆ ಲಸಿಕೆ ನೀಡುವುದು ಒಳ್ಳೆಯದು.

610

ಉಸಿರಾಟದ ತೊಂದರೆಗಳು
ದೀರ್ಘಕಾಲದ ಉಸಿರಾಟದ ಸಮಸ್ಯೆಯಾದ Chronic obstructive pulmonary disease(ಸಿಒಪಿಡಿ) 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾವಿಗೆ ಪ್ರಮುಖ ಕಾರಣವಾಗಿದೆ. ದೀರ್ಘಕಾಲದ ಉಸಿರಾಟದ ಕಾಯಿಲೆ ಹೊಂದಿದ್ದರೂ ಸಹ ನ್ಯುಮೋನಿಯಾ ಮತ್ತು ಇತರ ಉಸಿರಾಟದ ಕಾಯಿಲೆಗಳಿಂದ ಬಳಲುವ ಅಪಾಯವನ್ನು ಅನೇಕ ಪಟ್ಟು ಹೆಚ್ಚಿಸುತ್ತದೆ. ಹಾಗಾಗಿ, ಶ್ವಾಸಕೋಶದ ಆರೋಗ್ಯಕ್ಕಾಗಿ ಸರಿಯಾದ ಔಷಧ ಸೇವಿಸೋದು ಮುಖ್ಯ.

710

ಆಸ್ಟಿಯೊಪೊರೋಸಿಸ್ ನ ಅಪಾಯ
50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಮೂಳೆ ಮುರಿತದ ಹೆಚ್ಚಿನ ಅಪಾಯ ಹೊಂದಿರುತ್ತಾರೆ, ಇದು ಅವರ ಜೀವನ ಗುಣಮಟ್ಟ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ವಾಸ್ತವವಾಗಿ, ಇದು ಆಸ್ಟಿಯೊಪೊರೋಸಿಸ್ ನಿಂದ ಉಂಟಾಗುತ್ತದೆ. ಆಸ್ಟಿಯೊಪೊರೋಸಿಸ್ ಸಮಸ್ಯೆ ಒಬ್ಬ ವ್ಯಕ್ತಿಯನ್ನು ಕಡಿಮೆ ಕ್ರಿಯಾತ್ಮಕ ಅಥವಾ ಅಂಗವಿಕಲರನ್ನಾಗಿ ಮಾಡಬಹುದು.ಆದುದರಿಂದ ನಿಯಮಿತ ವೈದ್ಯರ ತಪಾಸಣೆ ಮತ್ತು ಪೋಷಕಾಂಶಗಳ ಸೇವನೆ ಅಗತ್ಯ.

810

ಬೊಜ್ಜು ಸೇರಿದಂತೆ ಗಂಭೀರ ಕಾಯಿಲೆಗೆ ಕಾರಣವಾಗಬಹುದು
ಬೊಜ್ಜು ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಈ ಎಲ್ಲಾ ರೋಗಗಳು ಜೀವನದ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. 65 ರಿಂದ 74 ವರ್ಷ ವಯಸ್ಸಿನವರ ವಿಷಯಕ್ಕೆ ಬಂದಾಗ, 36.2 ಪ್ರತಿಶತ ಪುರುಷರು ಮತ್ತು 40.7 ಪ್ರತಿಶತದಷ್ಟು ಮಹಿಳೆಯರು ಸ್ಥೂಲಕಾಯ ಸಮಸ್ಯೆ (obesity) ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಈ ಸಮಸ್ಯೆ ನಿವಾರಿಸಲು ನೀವು ತಿನ್ನುವ ಆಹಾರ ಮತ್ತು ಕಾರ್ಯ ಚಟುವಟಿಕೆ ಮೇಲೆ ಗಮನ ಹರಿಸಬೇಕು.

910

ವೃದ್ಧಾಪ್ಯದಲ್ಲಿ ಹೃದ್ರೋಗದ ಬಗ್ಗೆ ಜಾಗರೂಕರಾಗಿರಿ
ಅಂಕಿಅಂಶಗಳ ಪ್ರಕಾರ, ಹೃದ್ರೋಗವು (heart problem) ದೀರ್ಘಕಾಲದ ಕಾಯಿಲೆಯಾಗಿದ್ದು, ಇದು 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ 26% ಮಹಿಳೆಯರು ಮತ್ತು 37% ಪುರುಷರನ್ನು ಬಾಧಿಸುತ್ತದೆ. ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ನಂತಹ ಅಂಶಗಳು ಹೃದ್ರೋಗವನ್ನು ಹೆಚ್ಚಿಸುವ ಸಾಧ್ಯತೆ ಇದೆ. 

1010

ಹಿರಿಯ ನಾಗರಿಕರು ಆರೋಗ್ಯವಾಗಿರಲು, ನಿಯಮಿತ ದೈಹಿಕ ಚಟುವಟಿಕೆಯೊಂದಿಗೆ, ಸಮತೋಲಿತ ಆಹಾರ (balanced food) ಸೇವಿಸಬೇಕು. ಸ್ಮೋಕ್ ಮಾಡೋದನ್ನು ಬಿಡೋದು ಮತ್ತು ತೂಕ ಇಳಿಸೋದು ಮುಂತಾದ ಉತ್ತಮ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ಯಾವುದೇ ದೀರ್ಘಕಾಲದ ರೋಗವನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆಂದು ತಿಳಿಯಲು ತಜ್ಞರಲ್ಲಿ ಸಲಹೆಗಳನ್ನು ಕೇಳಿ ತಿಳಿಯಿರಿ.

click me!

Recommended Stories