ಇಂಜೆಕ್ಷನ್, ಔಷಧಿ ಬಿಡಿ ಶುಗರ್ ನಿಯಂತ್ರಿಸಲು ಈ ಗಿಡಮೂಲಿಕೆ ಬಳಸಿ

First Published | Jul 12, 2022, 7:31 PM IST

ಮಧುಮೇಹವು ಅಸಮತೋಲನ ಜೀವನಶೈಲಿಯಿಂದಾಗಿ ಉಂಟಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಮಧುಮೇಹ ಆನುವಂಶಿಕ ಅಂಶಗಳು, ವಯಸ್ಸು ಮತ್ತು ಕೆಲವು ವೈದ್ಯಕೀಯ ಸ್ಥಿತಿಗಳಿಂದ ಉಂಟಾಗುತ್ತದೆ. ನೀವು ಮಧುಮೇಹಿಗಳಾಗಿದ್ದರೆ, ಗಿಡಮೂಲಿಕೆಗಳ ಸಹಾಯದಿಂದ, ನೀವು ನಿಮ್ಮ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಬಹುದು.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಧುಮೇಹವು ಭಾರತದಲ್ಲಿ ಹೆಚ್ಚುತ್ತಿರುವಂತಹ ಬಹುದೊಡ್ಡ ಸವಾಲಿನ ರೋಗವಾಗಿದೆ. 20-70 ವಯೋಮಾನದ ಒಟ್ಟು ಜನಸಂಖ್ಯೆಯ 8.7% ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಇದು ಗಂಭೀರವಾದ ಮತ್ತು ದೀರ್ಘಕಾಲೀನ ಕಾಯಿಲೆಯಾಗಿದೆ

ಮೇದೋಜ್ಜೀರಕ ಗ್ರಂಥಿಗೆ ಸಾಕಷ್ಟು ಇನ್ಸುಲಿನ್ (insulin) ಉತ್ಪಾದಿಸಲು ಸಾಧ್ಯವಾಗದಿದ್ದಾಗ ಅಥವಾ ದೇಹವು ತಾನು ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ. ಇದು ರಕ್ತದಲ್ಲಿ ಗ್ಲುಕೋಸ್ ಪ್ರಮಾಣವನ್ನು ಹೆಚ್ಚಿಸುತ್ತದೆ.  

Tap to resize

ಮಧುಮೇಹವು ಅಸಮತೋಲನ ಜೀವನಶೈಲಿಯ ಪರಿಣಾಮವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಆನುವಂಶಿಕ ಅಂಶಗಳು, ವಯಸ್ಸು ಮತ್ತು ಕೆಲವು ವೈದ್ಯಕೀಯ ಸ್ಥಿತಿಗಳಿಂದ ಉಂಟಾಗುತ್ತದೆ. ಮಧುಮೇಹದಿಂದಾಗಿ, ದೀರ್ಘಾವಧಿಯಲ್ಲಿ ಕುರುಡುತನ, ಮೂತ್ರಪಿಂಡದ ಕಾಯಿಲೆ, ಹೃದಯಾಘಾತ, ಪಾರ್ಶ್ವವಾಯು ಮತ್ತು ಕೆಳಕಾಲುಗಳ ಅಸಮರ್ಪಕ ಕಾರ್ಯನಿರ್ವಹಣೆಯ ಅಪಾಯ ಉಂಟಾಗುತ್ತದೆ.  

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2000 ಮತ್ತು 2016 ರ ನಡುವೆ, ಮಧುಮೇಹದಿಂದ ಅಕಾಲಿಕ ಮರಣ ಪ್ರಮಾಣವು 5% ವರೆಗೆ ಹೆಚ್ಚಾಗಿದೆ. 2019 ರ ವೇಳೆಗೆ, ಮಧುಮೇಹವು ಸಾವಿನ ಕಾರಣದಲ್ಲಿ ಒಂಬತ್ತನೇ ಸ್ಥಾನವನ್ನು ತಲುಪಿತ್ತು. ಈ ವರ್ಷ, ವಿಶ್ವದಾದ್ಯಂತ ಸುಮಾರು 1.5 ಮಿಲಿಯನ್ ಸಾವುಗಳು ಮಧುಮೇಹದಿಂದ ನೇರವಾಗಿ ಸಂಭವಿಸಿವೆ.

 ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಅಪಾಯವನ್ನು ತಪ್ಪಿಸುವುದು ಅತ್ಯಗತ್ಯ, ಆರೋಗ್ಯಕರ ಮತ್ತು ದೈಹಿಕ ಚಟುವಟಿಕೆಗಳನ್ನು ಮಾಡೋದು,  ತಿನ್ನುವುದು ಅತ್ಯಗತ್ಯ. ನಿಯಮಿತ ತಪಾಸಣೆಯೊಂದಿಗೆ ನೀವು ಯಾವುದೇ ರೋಗದ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಬಹುದು. ಮಧುಮೇಹದಿಂದ ರಕ್ಷಿಸಲು ಈ ಕೆಲವು ಗಿಡಮೂಲಿಕೆಗಳು ನಿಮಗೆ ತುಂಬಾ ಉಪಯುಕ್ತವಾಗಿವೆ.

ಕರಿಬೇವಿನ ಎಲೆಗಳು ಶುಗರ್ ನ್ನು ನಿಯಂತ್ರಣದಲ್ಲಿಡುತ್ತೆ

ಕರಿಬೇವಿನ ಎಲೆಗಳು (curry leaves) ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಕಂಡುಬರುತ್ತವೆ ಏಕೆಂದರೆ ಇದು ಅನೇಕ ಭಾರತೀಯ ಪಾಕಪದ್ಧತಿಗಳಲ್ಲಿ ಸಾಮಾನ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ, ಈ ಕರಿಬೇವಿನ ಎಲೆಗಳನ್ನು ಅಗಿಯುವುದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಕರಿಬೇವಿನ ಎಲೆಗಳು ಶುಗರ್ ನಿರ್ವಹಿಸಲು (sugar control)  ಸಹಾಯ ಮಾಡುತ್ತದೆ. ಇದಲ್ಲದೆ, ಕರಿಬೇವಿನ ಎಲೆಯಲ್ಲಿ ನಾರಿನಂಶದ ಉಪಸ್ಥಿತಿಯು ದೀರ್ಘಾವಧಿಯಲ್ಲಿ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. 

 ಗಿಲೋಯ್ ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ
ಈ ಗಿಡಮೂಲಿಕೆಯನ್ನು ಬೆಳಿಗ್ಗೆ ಜ್ಯೂಸ್ ಅಥವಾ ಚಹಾದ ರೂಪದಲ್ಲಿ ಸೇವಿಸಬಹುದು. ಕೆಲವು ಗಿಲೋಯ್ ಗಳನ್ನು ತೊಳೆದು ಜಗಿಯುವುದು ಇನ್ಸುಲಿನ್ ಸೂಕ್ಷ್ಮತೆಯನ್ನು ನಿರ್ವಹಿಸಲು, ಚಯಾಪಚಯ ಕ್ರಿಯೆಯನ್ನು ಸುಧಾರಿಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಯಕೃತ್ತು ಕಾರ್ಯನಿರ್ವಹಣೆ ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಈ ಮೂಲಿಕೆ ಅಲರ್ಜಿ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.  

 ಬೇವು ಇನ್ಸುಲಿನ್ ನಿರ್ವಹಿಸುತ್ತೆ
ಈ ಸಾಮಾನ್ಯ ಗಿಡಮೂಲಿಕೆಗಳು ಇನ್ಸುಲಿನ್ ಸಂವೇದನಾಶೀಲತೆಯ ನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿವೆ. ವಾಸ್ತವವಾಗಿ, ಬೇವಿನಂತಹ ಗಿಡಮೂಲಿಕೆಗಳು ಕಹಿ ರುಚಿಹೊಂದಿರುತ್ತವೆ. ಹೀಗಾಗಿ ಇದನ್ನು ಚಹಾದ ರೂಪದಲ್ಲಿ ಅಥವಾ ಡಿಟಾಕ್ಸ್ ನೀರಿನಲ್ಲಿ ಬೆರೆಸಿ ಸೇವಿಸಬಹುದು.

ಅಶ್ವಗಂಧ ಸಕ್ಕರೆಯ ಸಮಸ್ಯೆಯನ್ನು ನಿವಾರಿಸುತ್ತೆ
ಅಶ್ವಗಂಧವು ಸಕ್ಕರೆಯನ್ನು ನಿಯಂತ್ರಿಸಲು, ಚಯಾಪಚಯ ಸುಧಾರಿಸಲು, ಮೆದುಳಿನ ಕಾರ್ಯನಿರ್ವಹಣೆಗೆ ಉತ್ತಮವಾಗಿದೆ, ಒತ್ತಡ ಕಡಿಮೆ ಮಾಡಲು, ಆಯಾಸ ಕಡಿಮೆ ಮಾಡಲು ಮತ್ತು ಮೆದುಳನ್ನು ಚುರುಕುಗೊಳಿಸಲು ಇದು ಸಹಾಯ ಮಾಡುತ್ತದೆ. ಈ ಗಿಡಮೂಲಿಕೆಯನ್ನು ಚಹಾವಾಗಿ ಕುಡಿಯುವುದು ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಅದರ ಪರಿಣಾಮಕಾರಿತ್ವ ಹೆಚ್ಚಿಸಬಹುದು.

Latest Videos

click me!