ಬೇಸಿಗೆಯಲ್ಲಿ ಕಾಡೋ ಕಣ್ಣಿನ ಉರಿ, ತುರಿಕೆಗೆ ಇಲ್ಲಿವೆ ಮನೆ ಮದ್ದು
First Published | Mar 22, 2021, 1:15 PM ISTಈಗಾಗಲೇ ಸೂರ್ಯನ ಉರಿ ಬಿಸಿಲಿಗೆ ದೇಹ ಕಾವೇರುತ್ತಿದೆ. ಜೊತೆಗೆ ಧೂಳು, ಮಾಲಿನ್ಯವೂ ಹೆಚ್ಚುತ್ತಿದೆ. ಬೇಸಿಗೆ ಎಂದಾಕ್ಷಣ ನೆನಪಾಗುವುದು ಅಲರ್ಜಿ. ಹೌದು ಬೇಸಿಗೆಕಾಲ ಎಂದರೆ ಅಲರ್ಜಿಗಳ ಕಾಲ. ಗಾಳಿಯಲ್ಲಿ ಸೇರಿದ ಧೂಳು, ಕಸ, ಬಿಸಿಲಿನ ಧಗೆಯಿಂದಾಗಿ ಹಲವಾರು ಸಮಸ್ಯೆಗಳು ಕಾಡುತ್ತವೆ. ಅವುಗಳಲ್ಲಿ ಹೆಚ್ಚಾಗಿ ಬಾಧಿತವಾಗುವುದು ಕಣ್ಣುಗಳಿಗೆ. ಕಣ್ಣುಗಳಲ್ಲಿ ಉರಿ, ತುರಿಕೆ, ಊದಿಕೊಳ್ಳುವುದು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಅವುಗಳಿಂದ ರಕ್ಷಣೆ ಪಡೆಯೋದು ತುಂಬಾನೆ ಮುಖ್ಯ.