Diabetes: ಹಬ್ಬದ ಸೀಸನ್‌ನಲ್ಲಿ ಹುಷಾರಾಗಿರಲು ಇಲ್ಲಿವೆ ಟಿಪ್ಸ್

Suvarna News   | Asianet News
Published : Nov 04, 2021, 03:58 PM IST

ಮಧುಮೇಹ (diabetes) ಶ್ರೀಮಂತರ ಕಾಯಿಲೆಯಾಗಿ ಉಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆಯಾಗಿದೆ. ಮಧುಮೇಹ ನಿವಾರಣೆಗೆ ನಿಮ್ಮ ಆಹಾರದಲ್ಲಿ ಸಾಕಷ್ಟು ಕಾಳಜಿಯ ಅಗತ್ಯವಿದೆ. ಹಬ್ಬದ ಋತುವಿನಲ್ಲಿಯೂ ನೀವು ಪ್ರತಿ ಎರಡೂವರೆಯಿಂದ ಮೂರು ಗಂಟೆಗಳಿಗೊಮ್ಮೆ ಏನನ್ನಾದರೂ ತಿನ್ನಬೇಕು. ಹಬ್ಬದ ಸಂದರ್ಭದಲ್ಲಿ ಸಿಹಿ ಹೆಚ್ಚಾಗಿ ಮಧುಮೇಹ ನಿಯಂತ್ರಣ ಕಳೆದುಕೊಂಡರೆ ಎಂಬ ಭಯ ಕಾಡುತ್ತಿದೆಯೇ?

PREV
17
Diabetes: ಹಬ್ಬದ ಸೀಸನ್‌ನಲ್ಲಿ ಹುಷಾರಾಗಿರಲು ಇಲ್ಲಿವೆ ಟಿಪ್ಸ್

ಯಾವುದೇ ಹಬ್ಬಗಳಿದ್ದರೂ ಸಮಯಕ್ಕೆ ಸರಿಯಾಗಿ ಆಹಾರ ಮತ್ತು ತಿಂಡಿಗಳನ್ನು ತಿನ್ನುವುದು ನಿಮ್ಮ ರಕ್ತದ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಗೋಧಿ, ಕಂದು ಅಕ್ಕಿ, ಓಟ್ಸ್ ಇತ್ಯಾದಿಗಳಿಂದ ತಯಾರಿಸಿದ ಯಾವುದೇ ಆಹಾರವನ್ನು ನಿಮ್ಮ ಊಟದಲ್ಲಿ ಸೇರಿಸಿ. ಬಿಳಿ ಬ್ರೆಡ್ (white bread), ನೂಡಲ್ಸ್ ಮತ್ತು ಬಿಳಿ ಅಕ್ಕಿ ಸಂಸ್ಕರಿಸಿದ ಧಾನ್ಯ ಉತ್ಪನ್ನಗಳನ್ನು ತಪ್ಪಿಸಿ. ಏಕೆಂದರೆ ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. 

27

ಮಧುಮೇಹ (Diabetes) 'ಉತ್ತಮ' ಕೊಲೆಸ್ಟ್ರಾಲ್ (Cholesterol) ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಟ್ರೈಗ್ಲಿಸರೈಡ್ (Triglyceride ) ಮತ್ತು 'ಕೆಟ್ಟ' ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯವು ಹೆಚ್ಚಾಗುತ್ತದೆ. ಆದುದರಿಂದ ಹೆಚ್ಚು ಜಾಗರೂಕರಾಗಿರುವುದು ಮುಖ್ಯ. 

37

ಅಧಿಕ ಕೊಲೆಸ್ಟ್ರಾಲ್ ಡಯಾಬಿಟಿಕ್ ಡಿಸ್ಲಿಪಿಡೆಮಿಯಾಗೆ (Triglyceride ) ಕಾರಣವಾಗುತ್ತದೆ. ಇದು ಅಪಧಮನಿಗಳ ಮುಚ್ಚುವಿಕೆ ಮತ್ತು ಪರಿಧಮನಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು ಫಾಸ್ಟ್ ಫುಡ್, ಬರ್ಗರ್, ಪಿಜ್ಜಾಗಳು ಮತ್ತು ಹುರಿದ ತಿಂಡಿಗಳಿಂದ ದೂರವಿರಿ. 
 

47

ಮಧುಮೇಹವನ್ನು ನಿಯಂತ್ರಿಸಲು  ಆಹಾರವನ್ನು ನಿಯಂತ್ರಿಸುವ ಜೊತೆಗೆ ನಿಯಮಿತ ಔಷಧಿಗಳನ್ನು ತೆಗೆದುಕೊಳ್ಳಲು ಮರೆಯಬೇಡಿ. ನೀವು ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳಲು ಮರೆತರೆ ಅಥವಾ ಹಬ್ಬವನ್ನು ಆಚರಿಸಲು ಆರೋಗ್ಯ ನಿರ್ಲಕ್ಷಿಸಿದರೆ, ಅದು ಅನಾರೋಗ್ಯವನ್ನು ಉಲ್ಬಣಗೊಳಿಸಬಹುದು. ಅದರ ನಂತರ ಆಸ್ಪತ್ರೆಗೆ ದಾಖಲಾಗಬೇಕಾಗಬಹುದು. 

57

ಮಧುಮೇಹದ (diabetes) ವಿರುದ್ಧ ಹೋರಾಡಲು, ಆಹಾರ, ನಿದ್ರೆಯಂತಹ ವಿಷಯಗಳಲ್ಲಿ ಬದಲಾವಣೆಗಳನ್ನು ಮಾಡಿ ಮತ್ತು ದಿನಕ್ಕೆ 1,000 ಹೆಜ್ಜೆ ನಡೆಯುವುದನ್ನು ಅಭ್ಯಾಸ ಮಾಡಿ. ಅದರೊಂದಿಗೆ ಬೊಜ್ಜನ್ನು ನಿಯಂತ್ರಿಸಿ. ಬೊಜ್ಜು ಮಧುಮೇಹದ ಒಂದು ಅಂಶ. ಇದು  ಕೊಲೆಸ್ಟ್ರಾಲ್ (cholestrol) ಮಟ್ಟವನ್ನು ಹೆಚ್ಚಿಸುತ್ತದೆ, ಹೃದ್ರೋಗದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. 
 

67

ಮಧುಮೇಹ ರೋಗಿಗಳು ಅಧಿಕ ರಕ್ತ ಸಕ್ಕರೆ ಮತ್ತು ಕಡಿಮೆ ರಕ್ತ ಸಕ್ಕರೆಯ ಅಪಾಯವನ್ನು ಹೊಂದಿದ್ದಾರೆ. ಈ ಎರಡೂ ಪರಿಸ್ಥಿತಿಗಳು ರೋಗಿಗಳಿಗೆ ಅತ್ಯಂತ ಅಪಾಯ. ಆದ್ದರಿಂದ ನಿಮ್ಮ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ. ಇದಕ್ಕಾಗಿ ನಿಮ್ಮೊಂದಿಗೆ ಗ್ಲುಕೋಮೀಟರ್ (gluco meter) ಅನ್ನು ಇರಿಸಿಕೊಳ್ಳಿ. ಇದರಿಂದ ಅರೋಗ್ಯ ತಪಾಸಣೆ ಮಾಡುವುದು ಮುಖ್ಯ. 
 

77

ಮಧುಮೇಹ ರೋಗಿಗಳು  ವರ್ಷಕ್ಕೆ ಎರಡು ಬಾರಿ ತಪ್ಪದೆ ಎಚ್ ಬಿಎ1ಸಿ ಪರೀಕ್ಷೆಯನ್ನು ಸಹ ಮಾಡಿ. ಈ ಪರೀಕ್ಷೆಯು ನಿಮ್ಮ ದೇಹದ ಸಕ್ಕರೆ ಮಟ್ಟದ ಸ್ಥಿತಿ ಏನು ಮತ್ತು ಅದನ್ನು ಹೇಗೆ ಉತ್ತಮವಾಗಿ ನಿರ್ವಹಿಸಬಹುದು ಎಂಬುದನ್ನು ತೋರಿಸುತ್ತದೆ. ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಪರೀಕ್ಷೆ ಸಹಾಯ ಮಾಡುತ್ತದೆ. 

Read more Photos on
click me!

Recommended Stories