ಚಳಿಗಾಲದಲ್ಲಿ ಚರ್ಮ ಮತ್ತು ಕೂದಲು ಒಣಗುತ್ತದೆ. ಈ ಸಮಯದಲ್ಲಿ ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿಡಲು ಏನು ಮಾಡಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಕೆಲವರು ಪ್ರತಿದಿನ ಶಾಂಪೂ ಬಳಸಿ ತಲೆಸ್ನಾನ ಮಾಡುತ್ತಾರೆ. ಆದರೆ ದಿನಾ ತಲೆಸ್ನಾನಕ್ಕೆ ಶಾಂಪೂ ಬಳಕೆಯೂ ಒಳ್ಳೆಯದಲ್ಲ. ಹಾಗಾದ್ರೆ ಆರೋಗ್ಯಕರ ಕೂದಲಿಗೆ ಏನು ಮಾಡಬೇಕು ಎಂಬುದು ಇಲ್ಲಿ ತಿಳಿಯೋಣ.
24
ಚಳಿಗಾಲದ ಕೂದಲು ಆರೈಕೆ ಸಲಹೆಗಳು
ಚಳಿಗಾಲದಲ್ಲಿ ಚರ್ಮ ಮತ್ತು ಕೂದಲು ಒಣಗದಂತೆ ತಡೆಯಲು, ಬಿಸಿ ಎಣ್ಣೆಯಿಂದ ಮಸಾಜ್ ಮಾಡಬೇಕು. ತಲೆಸ್ನಾನಕ್ಕೆ ಮುನ್ನ ಬಿಸಿ ಎಣ್ಣೆಯಿಂದ ಹೆಡ್ ಮತ್ತು ಕೂದಲು ಮಸಾಜ್ ಮಾಡಬೇಕು. ಇದಕ್ಕೆ ಯಾವ ತೈಲ ಉತ್ತಮ ಎಂಬುದು ನಾವು ಹೇಳುತ್ತೇವೆ.
34
ತಲೆ ಮಸಾಜ್‌ನ ಲಾಭಗಳು
ಕೊಬ್ಬರಿ ಎಣ್ಣೆ ಬಿಸಿ ಮಾಡಿ ಬಳಿಕ ಬಿಸಿ ಎಣ್ಣೆಯಿಂದ ತಲೆಗೆ ಹಚ್ಚುವುದರಿಂದ ತಲೆಹೊಟ್ಟನ್ನು ಬೇಗನೆ ನಿವಾರಿಸಬಹುದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಿ ತಲೆಹೊಟ್ಟನ್ನು ನಿವಾರಿಸುತ್ತದೆ.
44
ಕೂದಲು ಬೆಳವಣಿಗೆ ಉತ್ತೇಜನ
ಬಿಸಿ ಎಣ್ಣೆ ಮಸಾಜ್ ತಲೆಯಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.